ಭೂಮಿ ಒದಗಿಸಲು ಅಧಿವೇಶನದಲ್ಲಿ ಚರ್ಚೆ

ಲಿಂಗಸುಗೂರು ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್‌ನಲ್ಲಿ ಕರ್ನಾಟಕ ರೈತ ಸಂಘ ಹಮ್ಮಿಕೊಂಡಿದ್ದ ಹಗಲು-ರಾತ್ರಿ ಧರಣಿ ನಿರತರನ್ನುದ್ದೇಶಿಸಿ ಸಿಪಿಐ(ಎಂಎಲ್) ಮುಖ್ಯಸ್ಥ ಆರ್.ಮಾನಸಯ್ಯ ಮಾತನಾಡಿದರು. ಶಾಸಕ ಮಾನಪ್ಪ ವಜ್ಜಲ, ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ, ತಹಸೀಲ್ದಾರ ಸತ್ಯಮ್ಮ, ಡಿವೈಎಸ್‌ಪಿ ದತ್ತಾತ್ರೇಯ ಕರ್ನಾಡ, ವಲಯ ಅರಣ್ಯಾಧಿಕಾರಿ ಸುಭಾಶ್ಚಂದ್ರ ನಾಯಕ ಇತರರಿದ್ದರು.
ಲಿಂಗಸುಗೂರು ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್‌ನಲ್ಲಿ ಕರ್ನಾಟಕ ರೈತ ಸಂಘ ಹಮ್ಮಿಕೊಂಡಿದ್ದ ಹಗಲು-ರಾತ್ರಿ ಧರಣಿ ನಿರತರನ್ನುದ್ದೇಶಿಸಿ ಸಿಪಿಐ(ಎಂಎಲ್) ಮುಖ್ಯಸ್ಥ ಆರ್.ಮಾನಸಯ್ಯ ಮಾತನಾಡಿದರು. ಶಾಸಕ ಮಾನಪ್ಪ ವಜ್ಜಲ, ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ, ತಹಸೀಲ್ದಾರ ಸತ್ಯಮ್ಮ, ಡಿವೈಎಸ್‌ಪಿ ದತ್ತಾತ್ರೇಯ ಕರ್ನಾಡ, ವಲಯ ಅರಣ್ಯಾಧಿಕಾರಿ ಸುಭಾಶ್ಚಂದ್ರ ನಾಯಕ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಚ್ಚರಿಕೆ
  • ಸಭಾಪತಿ
  • ಅಧಿವೇಶನ

ಲಿಂಗಸುಗೂರು: ಎಸ್ಸಿ-ಎಸ್ಟಿ, ಹಿಂದುಳಿದ ವರ್ಗಗಳ ಭೂರಹಿತರಿಗೆ ಭೂಮಿ ಒದಗಿಸಲು ಅಧಿವೇಶನದಲ್ಲಿ ಸಭಾಪತಿಗಳಿಗೆ ಪತ್ರ ಬರೆದು ಚರ್ಚೆ ಮಾಡಲಾಗುವುದು ಎಂದು ಶಾಸಕ ಮಾನಪ್ಪ ವಜ್ಜಲ ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್‌ನಲ್ಲಿ ಕರ್ನಾಟಕ ರೈತ ಸಂಘ ತಾಲೂಕು ಸಮಿತಿ ಹಮ್ಮಿಕೊಂಡಿದ್ದ ಸರ್ಕಾರಿ ಹಾಗೂ ಅರಣ್ಯ ಭೂಮಿ ಸಾಗುವಳಿ ಪಟ್ಟಾ ಕೊಡಲು ಆಗ್ರಹಿಸಿ ಹಗಲು-ರಾತ್ರಿ ನಡೆಸುತ್ತಿರುವ ಪ್ರತಿಭಟನಾ ಧರಣಿ ನಿರತರನ್ನು ಉದ್ದೇಶಿ ಮಾತನಾಡಿದರು.
30-40ವರ್ಷಗಳಿಂದ ಅರಣ್ಯ, ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಬಡ ಜನರಿಗೆ ಹಕ್ಕು ಪತ್ರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಗುರುಗುಂಟ, ಚಿಕ್ಕ ಹೆಸರೂರು, ಗುಂತಗೋಳ, ಗೋನವಾಟ್ಲ ಸೇರಿದಂತೆ ಹಲವು ಗ್ರಾಮಗಳ ಭೂರಹಿತರಿಗೆ ಸಾಗುವಳಿ ಮಾಡುವವರಿಗೆ ಅವರ ಹೆಸರಿನಲ್ಲಿ ಮಾಡಲು ಈ ಮೊದಲು ಹೇಳಿದ್ದೆ. ಒಂದು ಸಾವಿರಕ್ಕೂ ಹೆಚ್ಚು ಅರ್ಜಿ ಬಂದಿದ್ದು, ಅದರಲ್ಲಿ ಬೆರಳೆಣಿಕೆಯಷ್ಟು ಮಂಜೂರು ಮಾಡಲಾಗಿದೆ. 
ಯಾರು ಸಾಗುವಳಿ ಮಾಡಿದ್ದಾರೆ ಅವರೆಲ್ಲರಿಗೂ ಹಕ್ಕು ಪತ್ರ ನೀಡುವಂತೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇನೆ. ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುವವರಿಗೆ ಒಕ್ಕಲೆಬ್ಬಿಸಬಾರದು, ತೊಂದರೆ ಕೊಡಬಾರದು. ಉಳಿಮೆ ಮಾಡುವ ಜಮೀನಿನಲ್ಲಿ ಅರಣ್ಯ ಇಲಾಖೆ ಸಸಿ ನೆಡಬಾರದು ಎಂದು ತಿಳಿಸಿದ್ದೇನೆ ಎಂದರು.
ಸಿಪಿಐ(ಎಂಎಲ್) ಮುಖ್ಯಸ್ಥ ಆರ್.ಮಾನಸಯ್ಯ ಮಾತನಾಡಿ, ಭೂಮಿ ಇಲ್ಲದವರು ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಪಟ್ಟಾ ಪಡೆಯಲು ಅರ್ಹರಿದ್ದಾರೆ. ಗ್ರಾಪಂ ಮಟ್ಟದಲ್ಲಿ ಅರಣ್ಯ ಹಕ್ಕು ಸಮಿತಿ ರಚನೆ ಮಾಡಬೇಕು. ಉಪ ವಿಭಾಗದಲ್ಲಿ, ಜಿಲ್ಲಾ ಮಟ್ಟದಲ್ಲಿ ಅರಣ್ಯ ಹಕ್ಕು ಸಮಿತಿ ಮಾಡಬೇಕು. ಅರಣ್ಯ ಭೂಮಿ ಪಡೆಯಲು ಅರ್ಜಿ ಪಡೆಯಲು, ಮಂಜೂರು ಮಾಡಲು ಗ್ರಾಪಂ ಸಮಿತಿ ಅತಿಮುಖ್ಯ. ಈ ಕೆಲಸದಲ್ಲಿ ಶಾಸಕರು, ಅಧಿಕಾರಿಗಳು ಬೆಂಬಲ ಕೊಡಬೇಕು ಎಂದರು.
ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ, ತಹಸೀಲ್ದಾರ್ ಸತ್ಯಮ್ಮ, ಡಿವೈಎಸ್‌ಪಿ ದತ್ತಾತ್ರೇಯ ಕರ್ನಾಡ, ವಲಯ ಅರಣ್ಯಾಧಿಕಾರಿ ಸುಭಾಶ್ಚಂದ್ರ ನಾಯಕ, ಎಂ.ಗಂಗಾಧರ, ತಿಪ್ಪರಾಜ ಗೆಜ್ಜಲಗಟ್ಟಾ, ಆದೇಶ ನಗನೂರು, ರಶೀದ ಜಮಾದಾರ, ಲಿಂಗಪ್ಪ ಪರಂಗಿ, ಮಲ್ಲಯ್ಯ ಕಟ್ಟಿಮನಿ, ವೀರಭದ್ರಪ್ಪ ತೋರಲಬೆಂಚಿ, ಬಸವರಾಜ ಬಡಿಗೇರ, ಎಂ.ನಿಸರ್ಗ, ಚಿದಾನಂದ ಕಸಬಾ ಲಿಂಗಸುಗೂರು, ಶರಣಪ್ಪ ಹುನಕುಂಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net