ಸರ್ಕಾರದ ಜಾಗದಲ್ಲಿ ಯಾವುದೇ ಯೋಜನೆ ಹಾಗೂ ಕಟ್ಟಡಗಳ ನಿರ್ಮಾಣದ ಪೂರ್ವದಲ್ಲಿ ಸ್ಥಳೀಯ ಸಂಸ್ಥೆಗಳು ಸುತ್ತಲಿನ ನಿವಾಸಿಗಳಿಗೆ ಆಗುವ ತೊಂದರೆ ಬಗ್ಗೆಯೂ ಪರಿಶೀಲಿಸಬೇಕು. ಅಲ್ಲದೇ, ಸ್ಥಳೀಯರ ಗಮನಕ್ಕೆ ತರಬೇಕು. ಆದರೆ, ಜಿಲ್ಲಾಡಳಿತ ಕನಿಷ್ಠ ಮಾಹಿತಿ ನೀಡದೆ ಕಸಾಯಿಖಾನೆ ಕಾಮಗಾರಿ ನಡೆಸುತ್ತಿದೆ. ಈಗಾಗಲೇ ಇದನ್ನು ನಿಲ್ಲಿಸುವಂತೆ ಒತ್ತಾಯ ಮಾಡಿದ್ದರೂ ಪೊಲಿಸ್ ಭದ್ರತೆಯಲ್ಲಿ ಕೆಲಸ ಮಾಡಲಾಗುತ್ತಿದೆ. ಇದು ಹೋರಾಟಕ್ಕೆ ದಾರಿ ಮಾಡಿಕೊಡುತ್ತಿದೆ.
ಶಿವಕುಮಾರ್ ಪೊಲೀಸ್ ಪಾಟೀಲ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಯರಮರಸ್