ವೇತನ ಪಾವತಿಯಲ್ಲಿ ತಾರತಮ್ಯ ಸಲ್ಲ

ಸಿಂಧನೂರಿನಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗೆ ರಾಜ್ಯ ವಸತಿ ನಿಲಯಗಳ ಕಾರ್ಮಿಕರ ಸಂಘದಿಂದ ಮನವಿ ಸಲ್ಲಿಸಲಾಯಿತು.
ಸಿಂಧನೂರಿನಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗೆ ರಾಜ್ಯ ವಸತಿ ನಿಲಯಗಳ ಕಾರ್ಮಿಕರ ಸಂಘದಿಂದ ಮನವಿ ಸಲ್ಲಿಸಲಾಯಿತು.
Published on
ಸಿಂಧನೂರು: ರಾಜ್ಯ ಸರ್ಕಾರ ಮೇ 22ರಂದು ಹೊರಡಿಸಿರುವ ಹೊರಗುತ್ತಿಗೆ ಕಾರ್ಮಿಕರ ವೇತನ ಪರಿಷ್ಕರಣೆ ಆದೇಶವನ್ನು ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧೀನದ ವಸತಿ ನಿಲಯಗಳ ಕಾರ್ಮಿಕರಿಗೂ ಅನ್ವಯಿಸಬೇಕೆಂದು ಆಗ್ರಹಿಸಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗೆ ರಾಜ್ಯ ವಸತಿ ನಿಲಯಗಳ ಕಾರ್ಮಿಕರ ಸಂಘದಿಂದ ಸೋಮವಾರ ಮನವಿ ಸಲ್ಲಿಸಲಾಯಿತು.
ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನದ ವಸತಿ ನಿಲಯಗಳ ಕಾರ್ಮಿಕರಿಗೆ ಜೂನ್ ಮತ್ತು ಜುಲೈನಲ್ಲಿ ಪರಿಷ್ಕೃತ ವೇತನ ಪಾವತಿಸಲಾಗಿದೆ. ಆದರೆ ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯಗಳ ಕಾರ್ಮಿಕರಿಗೆ ಪರಿಷ್ಕೃತ ವೇತನ ಪಾವತಿಸಿಲ್ಲ ಎಂದು ದೂರಲಾಯಿತು.
ಸರ್ಕಾರದ ಆದೇಶ ಜಾರಿಗೊಳಿಸದಿರುವುದು ಕಾರ್ಮಿಕರನ್ನು ಆರ್ಥಿಕವಾಗಿ ಶೋಷಿಸುತ್ತಿರುವಂತಾಗಿದೆ. ಒಂದೇ ರೀತಿಯ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಇಲಾಖಾವಾರು ವೇತನದಲ್ಲಿ ತಾರತಮ್ಯ ಮಾಡಬಾರದು. ಸರ್ಕಾರದ ಆದೇಶವನ್ನು ಜೂನ್‌ನಿಂದಲೇ ಅನ್ವಯವಾಗುವಂತೆ ಜಾರಿಗೊಳಿಸಿ ಬಾಕಿ ವೇತನ ವ್ಯತ್ಯಾಸವನ್ನು ಪಾವತಿಸಬೇಕೆಂದು ಒತ್ತಾಯಿಸಲಾಯಿತು.
ರಾಜ್ಯ ವಸತಿ ನಿಲಯಗಳ ಕಾರ್ಮಿಕರ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ನಜೀರ್ ಅಹ್ಮದ್, ಉಪಾಧ್ಯಕ್ಷ ಸಂತೋಷ್ ಬಾಲಿ, ಪ್ರಧಾನ ಕಾರ್ಯದರ್ಶಿ ಯಮನೂರು, ಖಜಾಂಚಿ ಚನ್ನಮ್ಮ, ಸುಶೀಲಮ್ಮ, ಗಂಗೂಬಾಯಿ, ಚಂದ್ರಶೇಖರ, ಹುಸೇನಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net