ಕಾಲಮಿತಿಯೊಳಗೆ ಅನುದಾನ ವಿನಿಯೋಗಿಸಿ

ದೇವದುರ್ಗದ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಹಣಕಾಸು ಆಯೋಗದ ಅನುದಾನ ಬಳಕೆ ಕುರಿತು ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಪಂ ಯೋಜನಾ ನಿರ್ದೇಶಕ ಶರಣಬಸವ ಕೆಸರಟ್ಟಿ ಮಾತನಾಡಿದರು. ತಾಪಂ ಇಒ ಬಸವರಾಜ ಹಟ್ಟಿ, ಅರಕೇರಾ ತಾಪಂ ಇಒ ಅಣ್ಣರಾವ್, ಸಹಾಯಕ ನಿರ್ದೇಶಕಿ ಮಹೇಶ್ವರಿ, ಅಧಿಕಾರಿಗಳಾದ ಡಾ.ಬದನೇಶ್ವರ, ಶ್ರೀನಿವಾಸ್ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಅಭಿವೃದ್ಧಿ ಕಾಮಗಾರಿ
  • ಅನುದಾನ
  • ಕಾಲಮಿತಿಯೊಳಗೆ ವಿನಿಯೋಗಿಸಬೇಕು
  • ರಾಜ್ಯ ಹಣಕಾಸು ಆಯೋಗ

ಕಾಲಮಿತಿಯೊಳಗೆ ಅನುದಾನ ವಿನಿಯೋಗಿಸಿ

ದೇವದುರ್ಗ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಲಾಖಾವಾರು ಬಿಡುಗಡೆಯಾದ ಅನುದಾನವನ್ನು ಕಾಲಮಿತಿಯೊಳಗೆ ವಿನಿಯೋಗಿಸಬೇಕು ಎಂದು ಜಿಪಂ ಯೋಜನಾ ನಿರ್ದೇಶಕ ಶರಣಬಸವ ಕೆಸರಟ್ಟಿ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಹಣಕಾಸು ಆಯೋಗದ ಅನುದಾನ ಬಳಕೆ ಕುರಿತು ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
2025-26 ಸಾಲಿನ ಅನಿರ್ಬಂಧಿತ ಅನುದಾನ ಕ್ರಿಯಾ ಯೋಜನೆ ತಯಾರಿಸಿ ನಿಗದಿ ಪಡಿಸಿದ ದಿನಾಂಕದಲ್ಲಿ ಕಾಮಗಾರಿ ಕೈಗೊಂಡು ಅನುದಾನ ವಾಪಸ್ ಹೋಗದಂತೆ ನೋಡಿಕೊಳ್ಳಬೇಕು.
ಅನಿರ್ಬಂಧಿತ ಕ್ರಿಯಾ ಯೋಜನೆಯಡಿ ಅರಕೇರಾ ಮತ್ತು ದೇವದುರ್ಗ ತಾಲೂಕಿಗೆ ಪ್ರತ್ಯೇಕ ಅನುದಾನ ಮಂಜೂರಾಗಿದ್ದು, ನಿಗದಿಪಡಿಸಿದ ಯೋಜನೆಗೆ ಸದ್ಬಳಕೆ ಮಾಡಿಕೊಳ್ಳಬೇಕು. ಅಮರಾಪುರದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ, ಮುಂಡರಗಿಯಲ್ಲಿ ಶಾಲಾ ರಕ್ಷಣಾಗೋಡೆ ನಿರ್ಮಾಣ ಸೇರಿ ವಿವಿಧ ಕಾಮಗಾರಿಯನ್ನು ಗ್ರಾಪಂನಿಂದ ಕೈಗೊಳ್ಳಲಾಗಿದೆ. ವಿವಿಧ ಇಲಾಖೆಗೆ ಮಂಜೂರಾದ ಅನುದಾನ ಅಗತ್ಯಕ್ಕೆ ತಕ್ಕಂತೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ತಾಪಂ ಇಒ ಬಸವರಾಜ ಹಟ್ಟಿ, ಅರಕೇರಾ ತಾಪಂ ಇಒ ಅಣ್ಣರಾವ್, ಸಹಾಯಕ ನಿರ್ದೇಶಕಿ ಮಹೇಶ್ವರಿ, ವಿವಿಧ ಇಲಾಖೆ ಅಧಿಕಾರಿಗಳಾದ ಡಾ.ಬದನೇಶ್ವರ, ಶ್ರೀನಿವಾಸ್, ವೆಂಕಟೇಶ ಚಿಲ್ಕರಾಗಿ, ಗಂಗಮ್ಮ, ಪಿಡಿಒಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net