ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ ಯಶಸ್ವಿ

ರಾಯಚೂರಿನ ಕನ್ನಡ ಭವನದಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ವಚನಗಾಯಕ ಅಂಬಯ್ಯ ನುಲಿ ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಸಹಾಯಕ ನಿರ್ದೇಶಕಿ ಉತ್ತರಾದೇವಿ, ಪರಮುಖರಾದ ವಿ.ಎನ್.ಅಕ್ಕಿ, ಬಾಬು ಭಂಡಾರಿಗಲ್, ನರಸಪ್ಪ ಡಿಂಗ್ರಿ ಇದ್ದರು.

Published on

ರಾಯಚೂರು

ವಚನ ಗಾಯನದ ಮಹತ್ವವನ್ನು ಪರಿಚಯಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಗೀತದ ಮೂಲಕ ಸಮಾಜದಲ್ಲಿ ಮೌಲ್ಯಗಳನ್ನು ಬೆಳೆಸುವಲ್ಲಿ ವಚನಗಳು ಮತ್ತು ತತ್ವಪದಗಳ ಪಾತ್ರ ಮಹತ್ವದ್ದಾಗಿದೆಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಚನಗಾಯಕ ಅಂಬಯ್ಯ ನುಲಿ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತಮ್ಮ ಬಾಲ್ಯದಲ್ಲಿ ಕುಟುಂಬದ ಹಿರಿಯರಿಂದ ದೊರೆತ ಸಾಂಸ್ಕೃತಿಕ ಸಂಸ್ಕಾರ ಹಾಗೂ ನಾಟಕ, ಸಂಗೀತದ ವಾತಾವರಣ ಕಲಾ ಬದುಕಿಗೆ ಪ್ರೇರಣೆಯಾಯಿತು ಎಂದರು.

ತಮ್ಮ ಕಲಾ ಪಯಣ, ಸಂಗೀತದ ಮೇಲಿನ ಆಸಕ್ತಿ ಹಾಗೂ ವಚನ ಗಾಯನದತ್ತ ಒಲವು ಮೂಡಿದ ಹಿನ್ನೆಲೆಯನ್ನು ಶೋತೃಗಳೊಂದಿಗೆ ಹಂಚಿಕೊಂಡರು.

ಸಂವಾದದಲ್ಲಿ ಭಾಗವಹಿಸಿದ್ದ ಕಲಾಸಕ್ತರು ಹಾಗೂ ವಿದ್ಯಾರ್ಥಿಗಳು ಅಂಬಯ್ಯ ನುಲಿ ಅವರೊಂದಿಗೆ ವಿವಿಧ ಪ್ರಶೋತ್ತರ ನಡೆಸಿದರು. ಅವರು ತಮ್ಮ ಅನುಭವಗಳು, ಕಲಾ ಜೀವನದಲ್ಲಿನ ಸವಾಲುಗಳು ಹಾಗೂ ಯುವ ಕಲಾವಿದರಿಗೆ ಅಗತ್ಯವಾದ ಮಾರ್ಗದರ್ಶನದ ಕುರಿತು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net