ವಿಶ್ವ ಆರೋಗ್ಯ ದಿನ ಆಚರಣೆ ಜನರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಡಿಎಚ್‌ಒ ಸಲಹೆ
ರಾಯಚೂರಿನ ಜಿಲ್ಲಾ ಆರೋಗ್ಯ ಇಲಾಖೆಯ ಕೃಷ್ಣ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಡಿಎಚ್‌ಓ ಡಾ.ಸುರೇಂದ್ರ ಬಾಬು ಚಾಲನೆ ನೀಡಿದರು. ಜಿಲ್ಲಾ ಸರ್ವೇಕ್ಷಣಾದಿಕಾರಿ ಡಾ.ಗಣೇಶ ಕೆ., ತಾಲೂಕು ಆರೋಗ್ಯ ಅಧಿಕಾರಿ ಡಾ.ಅಮೃತ ಹುಕ್ಕೇರಿ, ಸಹಾಯಕ ಆಡಳಿತ ಅಧಿಕಾರಿ ಶಹಜಾನ್, ಪ್ರಮುಖರಾದ ಡಾ.ಶಿವಕುಮಾರ್ ನಾರಾ ಇದ್ದರು.
Published on:
Copied
Follow Us
ರಾಯಚೂರು ಜನರಿಗೆ ಕಾಲಕ್ಕೆ ಅನುಗುಣವಾಗಿ ಆರೋಗ್ಯ ಮಾಹಿತಿ ನೀಡುವ ಉದ್ದೇಶದಿಂದ ಮತ್ತು ಜನರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂಬ ಉದ್ದೇಶದಿಂದ ವಿಶ್ವ ಆರೋಗ್ಯ ದಿನವನ್ನಾಗಿ 1948ರಿಂದ ಆಚರಿಸಲಾಗುತ್ತಿದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಇಲಾಖೆಯ ಕೃಷ್ಣ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮನುಷ್ಯನ ಜೀವನ ಶೈಲಿಯಲ್ಲಿ ಬದಲಾವಣೆ ಕಂಡುಬಂದಿದ್ದು, ತಿನ್ನುವ ಆಹಾರ, ತೊಡುವ ಬಟ್ಟೆ ಎಲ್ಲವು ಬದಲಾವಣೆಯಾಗಿದೆ. ಈ ವರ್ಷದ ಘೋಷವಾಕ್ಯ ಆರೋಗ್ಯಕ್ಕಾಗಿ ಒಟ್ಟಾಗಿ ವಿಜ್ಞಾನದೊಂದಿಗೆ ನಿಲ್ಲು ಎಂಬ ಸಂದೇಶದೊಅದಿಗೆ ಗ್ರಾಮೀಣ ಭಾಗದಲ್ಲಿ ಜೀವನ ಶೈಲಿಯಲ್ಲಿ ಬದಲಾವಣೆ ತರಲು, ಸಮುದಾಯದಲ್ಲಿ ಜಾಗೃತಿಗೊಳಿಸಲು ಆರೋಗ್ಯ ಇಲಾಖೆ ಸದಾ ಕಾರ್ಯಾನ್ಮುಖವಾಗಬೇಕು ಎಂದರು.
ವೈಜ್ಞಾನಿಕ ತಳಹದಿಯ ಮೇಲೆ ಇಂದಿನ ದಿನಮಾನಗಳಲ್ಲಿ ಕಂಡು ಬರುತ್ತಿರುವ ರೋಗರುಜಿನಗಳ ಕುರಿತು ನಿಖರವಾದ ಮಾಹಿತಿಯನ್ನು ಜನತೆಗೆ ತಲುಪಿಸುವ ಮೂಲಕ ರೋಗ ಹರಡುವಿಕೆಯ ಮಾರ್ಗಗಳನ್ನು ತಡೆಗಟ್ಟಲು ಎಲ್ಲರೂ ಶ್ರಮಿಸೋಣವೆಂದರು. ಸಂಶೋಧನೆ-ಚಾಲಿತ ನೀತಿಗಳು ಮತ್ತು ಅಂತರರಾಷ್ಟಿಥಯ ತಂಡದ ಕೆಲಸದ ಮೇಲೆ ಕೇಂದ್ರೀಕರಿಸುವ ಮೂಲಕ, ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಎಲ್ಲೆಡೆ ಎಲ್ಲರಿಗೂ ಪ್ರವೇಶಿಸುವಂತೆ ಮಾಡುವ ಗುರಿಯನ್ನು ಹೊಂದಿದೆ. ಈ ಅಭಿಯಾನವು ವಿಜ್ಞಾನ ಮತ್ತು ಸಾರ್ವಜನಿಕ ಆರೋಗ್ಯದಲ್ಲಿ ವಿಶ್ವಾಸವನ್ನು ಪುನರ್‌ನಿರ್ಮಿಸಲು ಒಗ್ಗಟ್ಟನ್ನು ಒತ್ತಾಯಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾದಿಕಾರಿ ಡಾ.ಗಣೇಶ ಕೆ., ತಾಲೂಕು ಆರೋಗ್ಯ ಅಧಿಕಾರಿ ಡಾ.ಅಮೃತ ಹುಕ್ಕೇರಿ, ಸಹಾಯಕ ಆಡಳಿತ ಅಧಿಕಾರಿ ಶಹಜಾನ್, ಪ್ರಮುಖರಾದ ಡಾ.ಶಿವಕುಮಾರ್ ನಾರಾ,ಶ್ರೀಧರ ಕುಲಕರ್ಣಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಆಪ್ತ ಸಹಾಯಕ ಲೇಪಾಕ್ಷಯ್ಯ ಇದ್ದರು.