ನಿರ್ಗತಿಕರಿಗೆ ಧರ್ಮಸ್ಥಳ ಯೋಜನೆ ಆಸರೆ

ದೇವದುರ್ಗ ತಾಲೂಕು ಮುಂಡರಗಿಯಲ್ಲಿ ಮನೆ ನಿರ್ಮಾಣ ಕಾಮಗಾರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ವೇಣುಗೋಪಾಲ್ ಭೂಮಿಪೂಜೆ ಮಾಡಿದರು. ಗ್ರಾಪಂ ಅಧ್ಯಕ್ಷ ಬಾಲಯ್ಯ, ವಲಯ ಮೇಲ್ವಿಚಾರಕ ಭರತ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಅಶ್ಚಿನಿ, ಸೇವಾ ಪ್ರತಿನಿಧಿ ಉಮಾಕಾಂತ ಹಾಗೂ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪಡಿತರಧಾನ್ಯ
  • ವಿತರಣೆ
  • ವಿತರಣೆ
ದೇವದುರ್ಗ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ಗತಿಕರನ್ನು ಗುರುತಿಸಿ ಮನೆ ನಿರ್ಮಾಣ, ಮಾಸಾಶನ ನೀಡುತ್ತಿದ್ದು ಬಡವರಿಗೆ ಯೋಜನೆ ಆಸರೆಯಾಗಿದೆ ಎಂದು ಯೋಜನಾಧಿಕಾರಿ ವೇಣುಗೋಪಾಲ್ ಹೇಳಿದರು.
ತಾಲೂಕಿನ ಮುಂಡರಗಿ ಗ್ರಾಮದಲ್ಲಿ ಜ್ಞಾನ ವಿಕಾಸ ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ
ಬುಧವಾರ ಮಾತನಾಡಿದರು.
ಗ್ರಾಮದ ರೇಣುಕಮ್ಮ ನಿರ್ಗತಿಕ ಮಹಿಳೆಯಾಗಿದ್ದು ಯೋಜನೆಯಿಂದ ಈ ಫಲಾನುಭವಿಗೆ ಮನೆ ನಿರ್ಮಿಸಲಾಗುತ್ತಿದೆ. ಇದಲ್ಲದೆ ಮಾಸಿಕ ಒಂದು ಸಾವಿರ ರೂ. ಮಾಸಾಶನ, ವಾತ್ಸಲ್ಯ ಕಿಟ್‌ನಡಿ ಪಡಿತರಧಾನ್ಯ ವಿತರಣೆ ಮಾಡಲಾಗುತ್ತಿದೆ.
ತಾಲೂಕಿನಲ್ಲಿ ಯೋಜನೆಯಿಂದ ವಿವಿಧ ಕಾರ್ಯಕ್ರಮ ರೂಪಿಸಲಾಗಿದ್ದು, ಬಡವರಿಗೆ ಅನುಕೂಲ ಕಲ್ಪಿಸಲಾಗಿದೆ. ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲಸೌಲಭ್ಯ, ಹೊಲಿಗೆಯಂತ್ರ ತರಬೇತಿ ಶಿಬಿರ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ತಾಲೂಕಿನಲ್ಲಿ 2ಸಾವಿರ ಮಹಿಳಾ ಸ್ವಸಹಾಯ ಸಂಘ, ಸುಮಾರು 16ಸಾವಿರ ಸದಸ್ಯರಿದ್ದಾರೆ. ಯೋಜನೆ ಸದ್ಬಳಕೆ ಮಾಡಿಕೊಂಡು ಸ್ವಾವಲಂಬನೆ ಜೀವನ ನಡೆಸಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net