ದೇವದುರ್ಗ ಸಾಹಿತ್ಯದ ತವರುಮನೆ

ದೇವದುರ್ಗದಲ್ಲಿ ಆಯೋಜಿಸಿದ್ದ ಎರಡನೇ ತಾಲೂಕು ಚುಟುಕು ಸಾಹಿತ್ಯ ಸಮ್ಮೇಳನವನ್ನು ಶಾಸಕಿ ಕರೆಮ್ಮ ನಾಯಕ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಶಿವರಾಯ ಅಕ್ಕರಕಿ, ಶಂಕರರಾವ್ ಉಭಾಳೆ, ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಜಿ.ಆರ್.ಅರಸ್, ಪಿಡಬ್ಲುೃಡಿ ಎಇಇ ವೆಂಕಟೇಶ ಗಲಗ, ಪರಿಷತ್ ಜಿಲ್ಲಾಧ್ಯಕ್ಷ ನರಸಿಂಗ್‌ರಾವ್ ಸರ್ಕಿಲ್, ಡಾ.ರತ್ನಾ ಹಾಲಪ್ಪಗೌಡ, ಅಕ್ಕಮಹಾದೇವಿ ಇತರರಿದ್ದರು.
ದೇವದುರ್ಗದಲ್ಲಿ ಆಯೋಜಿಸಿದ್ದ ಎರಡನೇ ತಾಲೂಕು ಚುಟುಕು ಸಾಹಿತ್ಯ ಸಮ್ಮೇಳನವನ್ನು ಶಾಸಕಿ ಕರೆಮ್ಮ ನಾಯಕ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಶಿವರಾಯ ಅಕ್ಕರಕಿ, ಶಂಕರರಾವ್ ಉಭಾಳೆ, ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಜಿ.ಆರ್.ಅರಸ್, ಪಿಡಬ್ಲುೃಡಿ ಎಇಇ ವೆಂಕಟೇಶ ಗಲಗ, ಪರಿಷತ್ ಜಿಲ್ಲಾಧ್ಯಕ್ಷ ನರಸಿಂಗ್‌ರಾವ್ ಸರ್ಕಿಲ್, ಡಾ.ರತ್ನಾ ಹಾಲಪ್ಪಗೌಡ, ಅಕ್ಕಮಹಾದೇವಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕಿ ಕರೆಮ್ಮ ಅಭಿಮತ
  • ಎರಡನೇ ಚುಟುಕು ಅಕ್ಷರ ಜಾತ್ರೆ
ದೇವದುರ್ಗ: ದೇವರನಾಡು ದೇವದುರ್ಗ ಎಲ್ಲ ತರಹದ ಸಾಹಿತ್ಯ, ಕಲೆ, ಸಂಸ್ಕೃತಿಗೆ ತವರು ಮನೆಯಂತಿದೆ. 12ನೇ ಶತಮಾನದ ಶರಣರಿಂದ 21ನೇ ಶತಮಾನದ ಸಾಹಿತಿಗಳು ನಾಡು, ನುಡಿ, ನೆಲಜಲಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.
ಪಟ್ಟಣದ ಖೇಣೇದ್ ಮುರಿಗೆಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಎರಡನೇ ಚುಟುಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಶನಿವಾರ ಮಾತನಾಡಿದರು. ಬದುಕು ಬದಲಿಸುವ ಶಕ್ತಿ ಸಾಹಿತ್ಯಕ್ಕಿದೆ. ಕಲ್ಪನೆಗಳ ಜತೆಗೆ ಜೀವನದ ಮೌಲ್ಯಗಳು ಇದರಲ್ಲಿವೆ. ಸಾಹಿತ್ಯ ಲೋಕಕ್ಕೆ ತಾಲೂಕಿನ ಕೊಡುಗೆ ಅಪಾರವಿದೆ. 12ನೇ ಶತಮಾನದಲ್ಲಿ ಶರಣರು ವಚನಗಳನ್ನು ರಚಿಸಿದ್ದರು. ಮುಕ್ತಾಯಕ್ಕ, ಬಿಬ್ಬಿ ಬಾಚರಸ ಜತೆ ಅನೇಕ ಶರಣರು ನೆಲೆಸಿದ್ದರು. ವಚನ, ದಾಸ ಸಾಹಿತ್ಯ, ನವಯುಗ ಸಾಹಿತ್ಯ ಕೃಷ್ಣಾನದಿ ನೀರಿನಂತೆ ಸದಾ ಹರಿಯುತ್ತಿದೆ ಎಂದರು.
ಹಿಂದೆ ಜಾನಪದ ಜೀವನ ಶೈಲಿಯಲ್ಲೂ ಚುಟುಕು ಸಾಹಿತ್ಯ ಅಡಕವಾಗಿತ್ತು. ನಮ್ಮ ನೆಲದಲ್ಲಿ ಶರಣರು, ಸಾಹಿತಿಗಳು, ಕವಿಗಳು ಸಾಕಷ್ಟು ಕೊಡುಗೆ ಬಿಟ್ಟುಹೋಗಿದ್ದು ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಹಲವರು ಸಾಹಿತ್ಯದ ತೇರು ಎಳೆದು ತಂದಿದ್ದಾರೆ. ಅದನ್ನು ಮುಂದೆ ಎಳೆದುಕೊಂಡು ಹೋಗಿ ಮುಂದಿನ ಪೀಳಿಗೆಗೆ ನೀಡುವುದು ನಮ್ಮ ಜವಾಬ್ದಾರಿ. ಸಾಹಿತ್ಯ ಕಾರ್ಯಕ್ರಮಕ್ಕೆ ಸದಾಕಾಲ ಬೆನ್ನೆಲುಬಾಗಿ ನಿಲ್ಲುತ್ತೇನೆ. ನಮ್ಮಲ್ಲಿ ಎಲ್ಲತರಹದ ಸಾಹಿತ್ಯ ಬೆಳೆಯಲು ಹಿರಿಯರು ಅವಕಾಶ ಮಾಡಿಕೊಡಬೇಕು ಎಂದರು.
ಮಾಹಿತಿ ಆಯೋಗದ ಆಯುಕ್ತ ವೆಂಕಟಸಿಂಗ್ ಮಾತನಾಡಿ, ಹಲವು ಶತಮಾನಗಳಿಂದ ತಾಲೂಕು ಸಾಹಿತ್ಯ ನೆಲೆಬೀಡಾಗಿದೆ. ಚನ್ನಬಸವಣ್ಣ, ಅಲ್ಲಮಪ್ರಭುದೇವ, ಮುಕ್ತಾಯಕ್ಕ, ಬಿಬ್ಬಿ ಬಾಚರಸ ಸೇರಿ ಹಲವು ಶರಣರು ಇಲ್ಲಿ ನೆಲೆಸಿದ್ದರು. ಇಂದೂ ಅನೇಕ ಸಾಹಿತಿಗಳನ್ನು ಕಾಣಬಹುದು. ಅಂಥ ಸಾಹಿತಿಗಳಿಗೆ ಸಮ್ಮೇಳನಗಳು ವೇದಿಕೆಯಾಗಿವೆ. ಸಮ್ಮೇಳನ, ಗೋಷ್ಠಿ, ಕಾರ್ಯಾಗಾರ ನಿರಂತರವಾಗಿ ನಡೆಯಬೇಕು ಎಂದರು.
ಚುಟುಕು ಸಾಹಿತಿ ಶಿವರಾಯ ಅಕ್ಕರಕಿ ಸಮ್ಮೇಳನಾಧ್ಯಕ್ಷತೆವಹಿಸಿದ್ದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಶಂಕರರಾವ್ ಉಭಾಳೆ, ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಜಿ.ಆರ್.ಅರಸ್, ಪಿಡಬ್ಲುೃಡಿ ಎಇಇ ವೆಂಕಟೇಶ ಗಲಗ, ಪರಿಷತ್ ಜಿಲ್ಲಾಧ್ಯಕ್ಷ ನರಸಿಂಗ್‌ರಾವ್ ಸರ್ಕಿಲ್, ಪ್ರಮುಖರಾದ ಡಾ.ರತ್ನಾ ಹಾಲಪ್ಪಗೌಡ, ಬೀರಪ್ಪ ಶಂಭೋಜಿ, ಅಕ್ಕಮಹಾದೇವಿ ಉಪ್ಪಿನ್, ಬಸವರಾಜ ಮಸ್ಕಿ, ತಾಲೂಕು ಅಧ್ಯಕ್ಷ ಪ್ರಕಾಶ ಪಾಟೀಲ್, ಬಸವರಾಜ ಬ್ಯಾಗವಾಟ್, ಲಕ್ಷ್ಮಣ ಜ್ಯೋತಿ ಇತರರಿದ್ದರು.
"

ಸಾಹಿತ್ಯ ಸಮ್ಮೇಳನಗಳು ಜನರ ಜಾತ್ರೆಯಂತಾಗಬೇಕು. ಸರ್ವಜ್ಞರ ಕಾಲದಿಂದಲೂ ಚುಟುಕು ಸಾಹಿತ್ಯವಿದೆ. ನಗು, ಚಿಂತನೆ, ಬದುಕು ಹಾಗೂ ಸಮಾಜದ ಕೈಗನ್ನಡಿಯಂತೆ ಕೆಲಸ ಮಾಡುತ್ತದೆ. ತಾಲೂಕು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದರೂ ಸಾಹಿತ್ಯದಲ್ಲಿ ಉತ್ತುಂಗದಲ್ಲಿದೆ. ಕೃಷ್ಣಾನದಿಯ ನೀರಿನಂತೆ ಸಾಹಿತ್ಯದ ಝರಿ ಸದಾಹರಿಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net