ನಾರದಗಡ್ಡೆಗೆ ಜಿಲ್ಲಾಧಿಕಾರಿ ಪೂವಿತಾ ಎಸ್. ಭೇಟಿ

   ತಾಲೂಕಿನ ಐತಿಹಾಸಿಕ, ಪೌರಾಣಿಕ ಮತ್ತು ಪ್ರಾಕೃತಿಕ ಮಹತ್ವ ಹೊಂದಿರುವ ನಾರದಗಡ್ಡೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಪೂವಿತಾ ಎಸ್.,ಇಚೇಗೆ ಭೇಟಿ ನೀಡಿದರು. ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ತಹಶೀಲ್ದಾರ್ ಸುರೇಶ ವರ್ಮಾ, ಸಿಪಿಐ ನಿಂಗಪ್ಪ, ಲೋಕೋಪಯೋಗಿ ಇಲಾಖೆಯ ಇಇ ವೆಂಕಟೇಶ ಗಲಗ ಇದ್ದರು.

Published on
ರಾಯಚೂರು ತಾಲೂಕಿನ ಐತಿಹಾಸಿಕ, ಪೌರಾಣಿಕ ಮತ್ತು ಪ್ರಾಕೃತಿಕ ಮಹತ್ವ ಹೊಂದಿರುವ ನಾರದಗಡ್ಡೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಪೂವಿತಾ ಎಸ್.,ಇಚೇಗೆ ಭೇಟಿ ನೀಡಿದರು.
ನಂತರ ಮಾತನಾಡಿ, ನಾರದಗಡ್ಡೆಯು ಪ್ರಾಕೃತಿಕ ಮಹತ್ವ ಹೊಂದಿರುವ ವಿಶಿಷ್ಟ ತಾಣವಾಗಿದೆ. ಇಲ್ಲಿ ಇರುವ ಶ್ರೀ ಚನ್ನಬಸವೇಶ್ವರ ದೇವಸ್ಥಾನ, ನಾರದ ಮುನಿಗಳು ತಪಸ್ಸು ಮಾಡಿದ ನೆಲವೆಂಬ ನಂಬಿಕೆಗೆ ಸಾಕ್ಷಿಯಂತೆ ಉಳಿದಿದೆ. ಈ ಸ್ಥಳಕ್ಕೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಗೋವಾದ ಪ್ರವಾಸಿಗರು ನಾರದಗಡ್ಡೆಗೆ ಭೇಟಿ ನೀಡುತ್ತಾರೆ. ನಾರದಗಡ್ಡೆಯಲ್ಲಿ ಅಗತ್ಯ ಮೂಲಭೂತು ಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮವಹಿಸುವಂತೆ ಸಂಬಅಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದರು.
ನಾರದಗಡ್ಡೆಯ ಬ್ರೀಜ್ ನಿಂದ ಕುರುವಕುಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕೂಡಲೇ ಸುಧಾರಿಸಬೇಕು. ಅಲ್ಲದೆ ನಾರದಗಡ್ಡೆಯಲ್ಲಿ ಇರುವ ಹಳೆ ಬಿಲ್ಡಿಂಗ್ ತೆರವುಗೊಳಿಸಿ, ಹೊಸ ಬಿಲ್ಡಿಂಗ್ ನಿರ್ಮಾಣ ಮಾಡಲು ಅಗತ್ಯ ಕ್ರಮವಹಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ತಹಶೀಲ್ದಾರ್ ಸುರೇಶ ವರ್ಮಾ, ಸಿಪಿಐ ನಿಂಗಪ್ಪ, ಲೋಕೋಪಯೋಗಿ ಇಲಾಖೆಯ ಇಇ ವೆಂಕಟೇಶ ಗಲಗ ಸೇರಿದಂತೆ ವಿವಿಧ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net