ಮಾನ್ವಿಯಲ್ಲಿ ತಹಸೀಲ್ದಾರ್ ಭೀಮರಾಯ ಬಿ.ರಾಮಸಮುದ್ರಗೆ ತಾಲೂಕು ಜೋಳ ಬೆಳೆಗಾರರ ಒಕ್ಕೂಟ ಗುರುವಾರ ಮನವಿ ಸಲ್ಲಿಸಿತು. ಸಂಚಾಲಕ ದುರುಗಪ್ಪ ತಡಕಲ್, ರೈತರಾದ ಮಹಾದೇವ ಯಾದವ್ ತಡಕಲ್, ದೇವಪ್ಪ, ವೆಂಕೋಬ ಇತರರಿದ್ದರು.
Published on:
Copied
Follow Us
ಮಾನ್ವಿ: ಜೋಳ ಖರೀದಿ ಹಣ ಪಾವತಿಸಬೇಕೆಂದು ಆಗ್ರಹಿಸಿ ತಾಲೂಕು ಜೋಳ ಬೆಳೆಗಾರರ ಒಕ್ಕೂಟ ಗುರುವಾರ ತಹಸೀಲ್ದಾರ್ ಭೀಮರಾಯ ಬಿ.ರಾಮಸಮುದ್ರಗೆ ಮನವಿ ಸಲ್ಲಿಸಿತು.
ಒಕ್ಕೂಟದ ಸಂಚಾಲಕ ದುರುಗಪ್ಪ ತಡಕಲ್ ಮಾತನಾಡಿ, ತಾಲೂಕಿನ ರೈತರು ಹಿಂಗಾರಿನಲ್ಲಿ ವಿವಿಧ ಖರೀದಿ ಕೇಂದ್ರಗಳಿಗೆ ಜೋಳ ಮಾರಾಟ ಮಾಡಿ ಮೂರು ತಿಂಗಳು ಕಳೆದರೂ ರೈತರ ಖಾತೆಗೆ ಹಣ ಜಮೆಯಾಗಿಲ್ಲ. ಇದರಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಮುಂಗಾರು ಕೃಷಿ ಚಟುವಟಿಕೆಗಳು ಕೂಡ ಸಂಪೂರ್ಣವಾಗಿ ಸ್ಥಗಿತಗೊಂಡಿವೆ.
ಆದ್ದರಿಂದ ಕೂಡಲೇ ರೈತರ ಹಣವನ್ನು ಅವರ ಖಾತೆಗೆ ಜಮಾ ಮಾಡಬೇಕು, ವಿದ್ಯುತ್ ಖಾಸಗೀಕರಣ ಕಾಯ್ದೆ ರದ್ದು ಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.