_1771608510549.webp?w=480&auto=format%2Ccompress&fit=max)
_1771608510549.webp?w=480&auto=format%2Ccompress&fit=max)
ರಾಯಚೂರು
ಬಾಗಲಕೋಟೆಯಲ್ಲಿ ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಿದ ಎಂಟು ಜನರನ್ನು ಬಂಧನ ಮಾಡಿದ್ದೇವೆಂದು ರಾಜ್ಯ ಸರ್ಕಾರ ಹೇಳುತ್ತದೆ. ಆದರೆ ಕಾಂಗ್ರೆಸ್ ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ಹೀಗೆ ಯಾಕೆ ಆಗುತ್ತದೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದರು.
ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ರಾಜ್ಯ ಸರ್ಕಾರದವರು ಬಾಂಬ್ ಹಾಕಿದವರನ್ನು ಬ್ರದರ್ಸ್ ಅಂತಾರೆ, ಆಕ್ರಮ ಮಸೀದಿ ಮೇಲೆ ಎಂದವರ ಮೇಲೆ ಪ್ರಕರಣ ದಾಖಲು ಮಾಡುತ್ತಾರೆ. ಪೊಲೀಸರಿಗೆ ಸ್ವತಂತ್ರ ನೀಡಿದರೆ ಯಾವುದೇ ಗಲಭೆಗಳು ನಡೆಯಲ್ಲ. ಆದರೆ ಕಾಂಗ್ರೆಸ್ ಪೊಲೀಸರ ಮೇಲೆ ಹಿಡಿತ ಇಟ್ಟುಕೊಂಡಿದೆ. ಅವರ ತುಷ್ಟಿಕರಣದಿಂದ ರಾಜ್ಯದಲ್ಲಿ ಆಶಾಂತಿ ಉಂಟಾಗುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಬೇಕು. ಆರೋಪಿಗಳನ್ನು ಬಂಧನಮಾಡುದಲ್ಲದೆ ಗಡಿಪಾರು ಮಾಡಬೇಕು ಎಂದರು.
ದೆಹಲಿಯಲ್ಲಿ ನಾನು ಪ್ರಸ್ ಮೀಟ್ ಮಾಡುವಾಗ ಕಾಂಗ್ರೆಸ್ ನಾಯಕ ಅಡ್ಡ ಬಂದು ನಾವು ಬೈಟ್ ಕೋಡುತ್ತಿವಿ ಪಕ್ಕ ನಿಂತುಕೊಳ್ಳಿ ಎಂದರು. ನೀವೇ ಮಾತಾಡಿ ನಾವು ಮಾತಾಡಲ್ಲವೆಂದು ಹೊರಬಂದೆ. ಆದರೆ ನಾವು ಅಲ್ಲಿಂದ ಓಡಿ ಹೋಗಿಲ್ಲ.ನಾನು ಮೋದಿ ಸರ್ಕಾರದ ಮಂತ್ರಿ ಇರುವೆ. ದೇಶಾದ್ಯಂತ ಒಳ್ಳೆಯ ವಾತಾವರಣವಿದೆ. 10 ವರ್ಷದಲ್ಲಿ ದೇಶದ ಆರ್ಥಿಕತೆ ಹೆಚ್ಚಾಗಿದೆ. ಇನ್ನೂ ಎರಡು ವರ್ಷಕ್ಕೆ 5 ಟ್ರಿಲಿಯನ್ ಎಕಾನಮ್ಿ ಆಗುತ್ತದೆ. ಕಾಂಗ್ರೆಸ್‌ನವರು ಸುಳ್ಳು ಆರೋಪ ಮಾಡಿ ಸಂಸತ್ತು ಅಧಿವೇಶನಕ್ಕೆ ಅಡ್ಡಿ ಮಾಡಿದ ಅಪಖ್ಯಾತಿ ಪಡೆದಿದೆ.ಅಮೇರಿಕ ಟ್ರೇಡ್ ಅಗ್ರಿಮೆಂಟ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಕೃಷಿ ಉತ್ಪನ್ನಗಳು ,ಆಪಲ್ ಬಿಟ್ಟು ಹಣ್ಣು ಗಳು ಈ ಒಪ್ಪಂದದಿಂದ ಹೊರಗಿವೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ದೇಶದ ರೈತರ, ಸಣ್ಣ ಉದ್ಯಮ, ಬಡವರ ವಿಚಾರದಲ್ಲಿ ರಾಜಿಮಾಡಿಕೊಳ್ಳುವುದಿಲ್ಲ ಎಂದರು.
ತಂತ್ರಜ್ಞಾನದಲ್ಲಿ ದೇಶವು ಮುಂದುವರೆದಿದ್ದೇವೆ, ಎಲ್ಲರಿಗೂ ದೊಡ್ಡ ಲಾಭ ಆಗಲಿದೆ. ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ನವರು ಮೋದಿ ವಿರೋಧ ಮಾಡುವ ಬರದಲ್ಲಿ ದೇಶವನ್ನು ವಿರೋಧ ಮಾಡುತ್ತಿದ್ದಾರೆ. ಎಐಗೆ ಡಿಜಿಟಲೈಜೆಷನ್ ಬೇಕು.
ಅದಕ್ಕೆ ಬೇಕಿರುವ ವ್ಯವಸ್ಥೆಗಳು ಇವು ಬಹುಮುಖ್ಯ, ನಮ್ಮಲ್ಲಿ ಎಐ ಶಕ್ತಿ ಇದೆ.ಯುವಶಕ್ತಿಯನ್ನು ಕೌಶಲ್ಯ, ಅಭಿವೃದ್ದಿ ಮಾಡಿದಾಗ ವೆಚ್ಚ ಕಡಿಮೆಯಾಗುತ್ತದೆ. ಜತೆಗೆ ಅಭಿವೃದ್ದಿಯಾಗುತ್ತದೆ. ಎಐ ನಿಂದ ಉದ್ಯೋಗ ಕಡಿಯಾಗುತ್ತದೆ ಎನ್ನುವುದು ಅಪಪ್ರಚಾರ. ಕಂಪ್ಯೂಟರ್ ಬಂದಾಗಲೂ ಇದೆ ಪರಸ್ಥಿತಿ.ಹ್ಯೂಮನ್ ಬ್ರೇನ್ ಎಲ್ಲಾದಕ್ಕೂ ಬೇಕು.ಇದನ್ನು ಕಾಂಗ್ರೆಸ್ ವಿಚಾರ ಮಾಡಬೇಕು. ಬರೀ ಗ್ಯಾರೆಂಟಿ ತಗೊಂಡು ಓಟು ಹಾಕಬೇಕು ಇದು ಕಾಂಗ್ರೆಸ್ ಉದ್ದೇಶವಾಗಿದೆಂದು ಆರೋಪ ಮಾಡಿದರು.