ತುರ್ವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಭಿವಿನ್ಯಾಸ ಹೊಸ ದಿಗಂತ ಕಾರ್ಯಕ್ರಮವನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಜಹೀರುದ್ದೀನ್ ಸಾಬ್ ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ಕೆ.ಖಾದರ್‌ಬಾಷಾ, ಕಾಲೇಜು ಸಿಬ್ಬಂದಿ ಸಮಿತಿ ಕಾರ್ಯದರ್ಶಿ ಡಾ.ವೆಂಕಟರಮಣ ಇತರರಿದ್ದರು.
ಸಿಂಧನೂರು; ಕಲಿಕೆಯಲ್ಲಿ ನಿರಂತರತೆ, ಹಲವು ಮೂಲಗಳಿಂದ ಜ್ಞಾನವನ್ನು ಸಂಪಾದಿಸುವುದರಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಕಾಲೇಜು ಸಿಬ್ಬಂದಿ ಸಮಿತಿ ಕಾರ್ಯದರ್ಶಿ ಡಾ.ವೆಂಕಟರಮಣ ಹೇಳಿದರು.
ತುರ್ವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2026-27ನೇ ಸಾಲಿನ ಬಿಎ, ಬಿಕಾಂ ಮತ್ತು ಬಿಎಸ್ಸಿ ತರಗತಿಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಅಭಿವಿನ್ಯಾಸ ಹೊಸದಿಗಂತ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ನಿಯಮಗಳನ್ನು ಪಾಲಿಸಿ ಜವಾಬ್ದಾರಿಯುತ ಗುಣ ಪ್ರದರ್ಶಿಸಬೇಕೆಂದರು.
ಐಕ್ಯೂಎಸಿ ಸಂಚಾಲಕ ಡಾ.ಚನ್ನಬಸವ ಮಾತನಾಡಿ, ಉನ್ನತ ಶಿಕ್ಷಣ ಹಂತದಲ್ಲಿ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬಹುದಾದ ವಿಶೇಷ ಹವ್ಯಾಸಗಳು, ಸ್ಪರ್ಧಾತ್ಮಕ ಜಗತ್ತಿಗೆ ಅಗತ್ಯವಿರುವ ವಿಮರ್ಶಾತ್ಮಕ ದೃಷ್ಟಿಕೋನ, ಅಧ್ಯಯನಶೀಲತೆಯ ಅಗತ್ಯತೆ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಖಾದರ್ ಬಾಷಾ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನ ನಿಯಮಗಳಿಗೆ ಬದ್ಧರಾಗಿ, ನಿರಂತರ ಹಾಜರಾತಿಯೊಂದಿಗೆ ಕಾಲೇಜಿನ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಉತ್ತಮ ಸಾಧನೆ ಮೆರೆಯಬೇಕೆಂದು ತಿಳಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಜಹೀರುದ್ದೀನ್ ಸಾಬ್, ಸಹಾಯಕ ಪ್ರಾಧ್ಯಾಪಕರಾದ ಡಾ.ದೇವಿದಾಸ, ರಾಜೇಶ, ಮೌಲಾಸಾಬ್, ಹನಮೇಶ, ಅತಿಥಿ ಉಪನ್ಯಾಸಕ ಡಾ.ನಾಗರಾಜ, ಬೋಧಕೇತರ ಸಿಬ್ಬಂದಿ ಗೋಪಾಲಕೃಷ್ಣ, ಭೀಮರಾವ್ ಇದ್ದರು.