ಅತಿಥಿ ಶಿಕ್ಷಕರ ಗೌರವಧನ ನೀಡಲು ಒತ್ತಾಯ

ಅತಿಥಿ ಶಿಕ್ಷಕರು ಮತ್ತು ಆಯಾಗಳಿಗೆ ಕಳೆದ 10 ತಿಂಗಳಿಂದ ಗೌರವಧನ ಪಾವತಿ ಮಾಡದೇ ಇರುವುದನ್ನು ಖಂಡಿಸಿ ಮಂಗಳವಾರ ಎಐಡಿಎಸ್‌ಓ ನೇತೃತ್ವದಲ್ಲಿ ಅತಿಥಿ ಶಿಕ್ಷಕರು ಮತ್ತು ಆಯಾಗಳು ರಾಯಚೂರಿ ಟಿಪ್ಪು ಸುಲ್ತಾನ್  ಉದ್ಯಾನವನದಲ್ಲಿ ಪ್ರತಿಭಟನೆ ಮಾಡಿದರು. ಪ್ರಮುಖರಾದ ಚನ್ನಬಸವ ಜಾನೇಕಲ್,ವಿನೋದ್ ಕುಮಾರ, ದತ್ತು ಸ್ವಾಮಿ ಅಲ್ಕೂರು, ವೀರೇಶ್, ಸರೋಜಾ , ತಿಮ್ಮಲಮ್ಮ, ನರಸಿಂಗಮ್ಮ, ರೇಖಾ,ಮಲ್ಲಿಕಾರ್ಜುನ ,ರವಿ ಡಿ.ರಾಂಪುರ, ರಾಮುಲು ಇದ್ದರು.
ಅತಿಥಿ ಶಿಕ್ಷಕರು ಮತ್ತು ಆಯಾಗಳಿಗೆ ಕಳೆದ 10 ತಿಂಗಳಿಂದ ಗೌರವಧನ ಪಾವತಿ ಮಾಡದೇ ಇರುವುದನ್ನು ಖಂಡಿಸಿ ಮಂಗಳವಾರ ಎಐಡಿಎಸ್‌ಓ ನೇತೃತ್ವದಲ್ಲಿ ಅತಿಥಿ ಶಿಕ್ಷಕರು ಮತ್ತು ಆಯಾಗಳು ರಾಯಚೂರಿ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಿದರು. ಪ್ರಮುಖರಾದ ಚನ್ನಬಸವ ಜಾನೇಕಲ್,ವಿನೋದ್ ಕುಮಾರ, ದತ್ತು ಸ್ವಾಮಿ ಅಲ್ಕೂರು, ವೀರೇಶ್, ಸರೋಜಾ , ತಿಮ್ಮಲಮ್ಮ, ನರಸಿಂಗಮ್ಮ, ರೇಖಾ,ಮಲ್ಲಿಕಾರ್ಜುನ ,ರವಿ ಡಿ.ರಾಂಪುರ, ರಾಮುಲು ಇದ್ದರು.
Published on
ರಾಯಚೂರು.
ಅತಿಥಿ ಶಿಕ್ಷಕರು ಮತ್ತು ಆಯಾಗಳಿಗೆ ಕಳೆದ 10 ತಿಂಗಳಿಂದ ಗೌರವಧನ ಪಾವತಿ ಮಾಡದೇ ಇರುವುದನ್ನು ಖಂಡಿಸಿ ಮಂಗಳವಾರ ಎಐಡಿಎಸ್‌ಓ ನೇತೃತ್ವದಲ್ಲಿ ಅತಿಥಿ ಶಿಕ್ಷಕರು ಮತ್ತು ಆಯಾಗಳು ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅಕ್ಷರ ಆವಿಷ್ಕಾರ ಯೋಜನೆ ಅಡಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಹೊಸದಾಗಿ ಪ್ರಾರಂಭವಾದ ಎಲ್‌ಕೆಜಿ, ಯುಕೆಜಿ (ಇಸಿಸಿಇ) ಹಾಗೂ ದ್ವಿಭಾಷಾ ತರಗತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಮತ್ತು ಆಯಾಗಳಿಗೆ ಗೌರವಧನ ಪಾವತಿ ಮಾಡದೇ ಇರುವುದು ಖಂಡಿಸಿದರು.
ಅತಿಥಿ ಶಿಕ್ಷಕರು ಮತ್ತು ಆಯಾಗಳು ಗೌರವ ಧನ ಪಾವತಿ ಮಾಡದೇ ಇರುವುದರಿಂದ ಜೀವನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಟುಂಬ ನಿರ್ವಹಣೆಗೆ ಸಾಲ ಮಾಡಿಕೊಂಡು ಜೀವನ ಸಾಗಿ ಸುವ ಪರಿಸ್ಥಿತಿ ಎದುರಾಗಿದೆ.
ಅತಿಥಿ ಶಿಕ್ಷಕರಿಗೆ ಕೆಕೆಆರ್‌ಡಿಬಿಯಿಂದ ಹಂಚಿಕೆ ಮಾಡಲಾದ ಶಾಸಕರ ಅನುದಾನದಲ್ಲಿ ಗೌರವಧನ ನೀಡಬೇಕು ಎಂದು ಸರ್ಕಾರ ನಿರ್ಧರಿಸಿದೆ. ಆದರೆ ಶಾಸಕರು ನಮಗೆ ಬರುವ ಅಲ್ಪ ಅನುದಾನದಲ್ಲಿ ಗೌರವಧನ ನೀಡಿದರೆ ನಮ್ಮ ಅಭಿವೃದ್ಧಿಗೆ ಉಳಿಯುವುದೇನು? ಎಂದು ಕೇಳುತ್ತಿದ್ದಾರೆ. ಇದರಿಂದ ಕೆಕೆಆರ್‌ಡಿಬಿಯು ಅಕ್ಷರ ಆವಿಷ್ಕಾರ ಯೋಜನೆಯ ಅಡಿಯಲ್ಲಿ ನೇಮಿಸಿಕೊಳ್ಳಲಾದ ಎಲ್ಲಾ ಅತಿಥಿ ಶಿಕ್ಷಕರಿಗೆ ನೇರವಾಗಿ ಗೌರವಧನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲವೇ ಸರ್ಕಾರವೇ ನೇರವಾಗಿ ಎಲ್ಲಾ ಅತಿಥಿ ಶಿಕ್ಷಕರ ಜೊತೆಗೆ ಅನುದಾನವನ್ನು ಬಿಡುಗಡೆ ಮಾಡಬೇಕು. ಹಾಗಾದಾಗ ಮಾತ್ರ ಈ ಸಮಸ್ಯೆಯು ಸರಳವಾಗಿ ಪರಿಹಾರವಾಗುತ್ತದೆ.
ಶಾಸಕರು ಮತ್ತು ಅಧಿಕಾರಿಗಳ ಸಮನ್ವಯತೆ ಕೊರತೆಯಿಂದ ಅತಿಥಿ ಶಿಕ್ಷಕರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಇದಲ್ಲದೆ, ಮುಖ್ಯಮಂತ್ರಿಗಳು 2025- 26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಅತಿಥಿ ಶಿಕ್ಷಕರ ಗೌರವ ಧನ 2000 ಹೆಚ್ಚಿಸುವುದಾಗಿ ಘೋಷಣೆ ಮಾಡಿ ಆದೇಶ ಹೊರಡಿಸಿದ್ದರು. ಅದು ಎಲ್ಲಾ ಅತಿಥಿ ಶಿಕ್ಷಕರಿಗೆ ಅನ್ವಯವಾಗುತ್ತದೆ. ಆದರೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ನೇಮಕವಾದ ಅತಿಥಿ ಶಿಕ್ಷಕರಿಗೆ ಏಕೆ ಅನ್ವಯಿಸುವುದಿಲ್ಲ ಎಂಬ ಪ್ರಶ್ನೆಗೆ ಸೂಕ್ತವಾದ ಉತ್ತರ ದೊರಕಿಲ್ಲ. ಈಗಾಗಲೇ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಶಿಕ್ಷಕರಿಗೆ 5ತಿಂಗಳ ಗೌರವ ಧನ ಪ್ರತಿ ತಿಂಗಳಿಗೆ 12ಸಾವಿರದಂತೆ ಒಟ್ಟು 60 ಸಾವಿರ ಬಿಡುಗಡೆ ಮಾಡಲಾಗಿದೆ. ನಮ್ಮ ಜಿಲ್ಲೆಯಲ್ಲಿ ಮಾತ್ರ 6 ತಿಂಗಳಿಗೆ 10ಸಾವಿರದಂತೆ ನೀಡಲಾಗಿದೆ. ಕೂಡಲೇ ಗೌರವ ಧನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಚನ್ನಬಸವ ಜಾನೇಕಲ್,ವಿನೋದ್ ಕುಮಾರ, ದತ್ತು ಸ್ವಾಮಿ ಅಲ್ಕೂರು, ವೀರೇಶ್, ಸರೋಜಾ , ತಿಮ್ಮಲಮ್ಮ, ನರಸಿಂಗಮ್ಮ, ರೇಖಾ,ಮಲ್ಲಿಕಾರ್ಜುನ ,ರವಿ ಡಿ.ರಾಂಪುರ, ರಾಮುಲು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net