ಸ್ಲಂ ನಿವಾಸಿಗಳಿಗ ಹಕ್ಕುಪತ್ರ ನೀಡಲು ಒತ್ತಾಯ

ರಾಯಚೂರಿನ  ಮಹಾನಗರ ವ್ಯಾಪ್ತಿಯ ವಾರ್ಡ್‌ಗಳಲ್ಲಿ ವಾಸಿಸುವ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡಬೇಕೆಂದು ಒತ್ತಾಯಿಸಿ ಸ್ಲಂ ನಿವಾಸಿಗಳಿಗ ಕ್ರಿಯಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೇದಾರ ವೇಣುಮಾದವನ್‌ಗೆ ಮನವಿ ಸಲ್ಲಿಸಿದರು. ಕ್ರಿಯಾ ವೇದಿಕೆಯ ಅಧ್ಯಕ್ಷ ಜನಾರ್ಧನ ಹಳ್ಳಿಬೆಂಚಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಹೊಸೂರು, ಪ್ರಮುಖರಾದ ಸುಧಾಕರ, ವೀರೇಶ, ಮಹೇಶ,ಶರಣಬಸವರೆಡ್ಡಿ, ತಾಯಪ್ಪ, ಹುಲಿಗೇಮ್ಮ, ಶಂಕ್ರಮಕ್ಕ, ಲಕ್ಷ್ಮೀ, ರೆಡ್ಡಿ, ಹುಲಿಗೇಪ್ಪ ಇದ್ದರು.

Published on
ರಾಯಚೂರು ನಗರದ ಮಹಾನಗರ ವ್ಯಾಪ್ತಿಯ ವಾರ್ಡ್‌ಗಳಲ್ಲಿ ವಾಸಿಸುವ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡಬೇಕೆಂದು ಒತ್ತಾಯಿಸಿ ಸ್ಲಂ ನಿವಾಸಿಗಳಿಗ ಕ್ರಿಯಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೇದಾರ ವೇಣುಮಾದವನ್‌ಗೆ ಮನವಿ ಸಲ್ಲಿಸಿದರು.
ನಗರದ ವಾರ್ಡ್ ನಂ. 6 ರ ಎಂ.ಎಂ ಕಾಲೋನಿ, ಹೊಸೂರು ಜನಾತಾ ಕಾಲೋನಿ, ವಾರ್ಡ್ ನಂ. 23 ಕಾಕನಕೆರೆ ನವಾಬ್ ಗಡ್ಡಾ, ಖಾಸಗಿ ಸ್ಲಂಗಳಲ್ಲಿ ಸ್ಲಂಗಳ ವಾಸಿಗಳು ಸುಮಾರು ವರ್ಷಗಳಿಂದ ದಾಖಲೆ ರಹಿತಿವಾಗಿಯೇ ಸಮಾಜದ ಮುಖ್ಯ ವಾಹಿನಿಗೆ ಬಾರದೇ ಉಳಿದುಕೊಂಡಿದ್ದಾರೆ.
ಈ ಸ್ಲಂಗಳಲ್ಲಿ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಬಡ ಕೂಲಿ ಕಾರ್ಮಿಕರು ವಾಸವಾಗಿದ್ದಾರೆ. ಇವರು ದಿನನಿತ್ಯ ಕೂಲಿ ಕೆಲಸ ಮಾಡಿ ಉಪಜೀವನ ಮಾಡುತ್ತಿದ್ದಾರೆ. ಅದೇ ರೀತಿ ಇಲ್ಲಿನ ಸ್ಲಂ ನಿವಾಸಿಗಳಿಗೆ ಸುಮಾರು 40 ರಿಂದ 50 ವರ್ಷ ಗಳಿಂದ ಮನೆಯ ಹಕ್ಕು ಪತ್ರಗಳು ಸೇರಿದಂತೆ ಮನೆಯ ದಾಖಾಗಲಾತಿಗಳಿಲ್ಲದೆ ವಂಚನೆಗೊಂಡಿರುತ್ತಾರೆ. ಈ ಯೋಜನೆಯ ಸುತ್ತೋಲೆ ಹೊರಡಿಸಿ ಸುಮಾರು 4 ವರ್ಷಗತಿಸಿದರೂ ಇದುವರೆಗೂ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ ಮಾಡಿಸಿದ್ದಾರೆ.
ಆದ್ದರಿಂದ ಸರ್ಕಾರದ ಸುತ್ತೋಲೆ ಪ್ರಕಾರ ಕರ್ನಾಟಕ ಭೂಸುಧಾರಣಾ ಕ್ರಮ ಕಲಂ.38 ಎ. ಮತ್ತು ನಿಯಮ 9 ಸಿ ಪ್ರಕಾರ ಖಾಸಗಿ ಜಮೀನಿನಲ್ಲಿ ನೆಲೆಗೊಂಡಿರುವ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾನ್ನಾಗಿ ಪರಿಪರ್ತಿಸಿ ಹಕ್ಕು ಪತ್ರಗಳನ್ನು ನೀಡಬೇಕೆಂದು ಒತ್ತಾಯಿಸಿಸಿದರು.
ಈ ಸಂದರ್ಭದಲ್ಲಿ ಕ್ರಿಯಾ ವೇದಿಕೆಯ ಅಧ್ಯಕ್ಷ ಜನಾರ್ಧನ ಹಳ್ಳಿಬೆಂಚಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಹೊಸೂರು, ಪ್ರಮುಖರಾದ ಸುಧಾಕರ, ವೀರೇಶ, ಮಹೇಶ,ಶರಣಬಸವರೆಡ್ಡಿ, ತಾಯಪ್ಪ, ಹುಲಿಗೇಮ್ಮ, ಶಂಕ್ರಮಕ್ಕ, ಲಕ್ಷ್ಮೀ, ರೆಡ್ಡಿ, ಹುಲಿಗೇಪ್ಪ ಸೇರಿದಂತೆ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net