

ರಾಯಚೂರು
ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದಲ್ಲಿ ನಡೆದ ಯುವಕನ ಕೊಲೆ ಪ್ರಕರಣದಲ್ಲಿ ಸಂಬಂಧವೇ ಇಲ್ಲದ ಅಮಾಯಕರ ಹೆಸರುಗಳನ್ನು ಸೇರ್ಪಡೆ ಮಾಡಲಾಗಿದ್ದು, ನಿಜವಾದ ಆರೋಪಿಗಳನ್ನು ಹೊರತುಪಡಿಸಿ ಉಳಿದವರನ್ನು ಎಫ್‌ಐಆರ್‌ನಿಂದ ಪಟ್ಟಿಯಿಂದ ಕೈ ಬಿಡಬೇಕೆಂದು ಒತ್ತಾಯಿಸಿ ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದಿಂದ ಗುರುವಾರ ಎಸ್ಪಿ ಅರುಣಾಂಗ್ಶು ಗಿರಿಗೆ ಮನವಿ ಸಲ್ಲಿಸಿದರು.
ುುವಕನ ಕೊಲೆ ಘಟನೆಯನ್ನು ನಮ್ಮ ಸಮಾಜ ಖಂಡಿಸುತ್ತದೆ. ಜತೆಗೆ ನೊಂದ ಕುಟುಂಬಗಳ ಜತೆಗೆ ನಮ್ಮ ಸಮಾಜವೂ ಇರುತ್ತದೆ. ಆದರೆ, ಈ ಪ್ರಕರಣದಲ್ಲಿ ಆರೋಪಿತರ ಜೊತೆಗೆ ಅಮಾಯಕರನ್ನು ಸೇರ್ಪಡೆ ಮಾಡಿರುವುದನ್ನು ನಮ್ಮ ಸಮಾಜ ಖಂಡಿಸುತ್ತದೆ. ಗಬ್ಬೂರು ಠಾಣೆಯಲ್ಲಿ ದಾಖಲಾದ ಈ ಪ್ರಕರಣದ ಪ್ರತಿಯಲ್ಲಿ ಆರೋಪಿತರ ಸಂಖ್ಯೆ 8 ರಲ್ಲಿ ನಮೂದಾಗಿರುವ ಭೀಮರಾಯ ಅವರು ರಾಯಚೂರಿನಲ್ಲಿ ಇರುತ್ತಾರೆ. ಅವರಿಗೂ ಈ ಪ್ರಕರಣಕ್ಕೂ ಸಂಬಂಧವೇ ಇರುವುದಿಲ್ಲ.
ಕಳೆದ ಅನೇಕ ವರ್ಷಗಳಿಂದ ರಾಯಚೂರಿನಲ್ಲಿ ವಾಸವಾಗಿದ್ದಾರೆ. ಜತೆಗೆ ಮಾಧ್ಯಮ ಕ್ಷೇತ್ರದಲ್ಲಿ ಕಳೆದ 35 ವರ್ಷಗಳಿಂದ ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ. ಅವರ ಹೆಸರಿಗೆ ಕಪ್ಪು ಚುಕ್ಕೆ ಮಾಡಬೇಕು ಹಾಗೂ ಮಾನಸಿಕ ಹಿಂಸೆ ನೀಡಬೇಕು ಎಂಬ ಕಾರಣದಿಂದ ಅವರ ಹೆಸರನ್ನೂ ಹೆಸರು ಸೇರಿಸಲಾಗಿದೆ. ಆದರಿಂದ ಎಫ್‌ಐಆರ್ ಪಟ್ಟಿಯಿಂದ ಕೈ ಬಿಡಬೇಕು ಎಂದು ಮನವಿ ಮಾಡಿದರು.