ಜೋಳ ಖರೀಸಿದ ಹಣ ವಿತರಿಸಲು ಒತ್ತಾಯ

ಅಮೀನ್ ಪಾಷಾ ದಿದ್ದಗಿ
ಅಮೀನ್ ಪಾಷಾ ದಿದ್ದಗಿ
Published on
ರಾಯಚೂರು ರೈತರಿಂದ ಜೋಳ ಖರೀದಿಸಿದ ಸರ್ಕಾರ ಹಣ ನೀಡದೇ ಕಾಲಹರಣ ಮಾಡುತ್ತಿದ್ದು ಶೀಘ್ರದಲ್ಲಿ ಜೋಳ ಖರೀದಿಸಿದ ಹಣವನ್ನು ರೈತರ ಖಾತೆಗೆ ಜಮಾ ಮಾಡದೇ ತೀವ್ರ ಸ್ವರೂಪದ ಹೋರಾಟಕ್ಕೆ ರೈತರು ಮುಂದಾಗುವದಾಗಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್ ಪಾಷಾ ದಿದ್ದಗಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿನ ಮಾತನಾಡಿ, ಮಾ.14 ರಂದು ಜೋಳ ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ. ಇಲ್ಲಿಯವರೆಗೆ 88 ಸಾವಿರ ಕ್ವಿಂಟಲ್‌ಗೆ 32 ಕೋಟಿ ರೂ. ಹಣ ಪಾವತಿಸಲಾಗಿದೆ. ಸರ್ಕಾರ ಹಣ ನೀಡಿಲ್ಲ. ಜೋಳ ಕಟಾವು ಆಗಿ ಆರು ತಿಂಗಳದಾದರೂ ರೈತರ ಖಾತೆಗೆ ಜಮಾ ಆಗಿಲ್ಲ. ಪ್ರತಿವರ್ಷ ಇದೇ ಗೋಳು ರೈತರು ಎದುರಿಸುವಂತಾಗಿದೆ.
ಹಿಂಗಾರಿ ಜೋಳ ಮೂರು ತಿಂಗಳಲ್ಲಿ ಖರೀದಿಸಬೇಕು. ಇಲ್ಲದೇ ಹೋದರೆ ನುಸಿ ಹುಳು ಹರಡುತ್ತದೆ. ಆದರೂ ಸರ್ಕಾರ ಆರು ತಿಂಗಳ ನಂತರ ನುಸಿಯಿಲ್ಲ ಜೋಳ ಖರೀದಿ ಮಾಡುವದಾಗಿ ಹೇಳುತ್ತಿದೆ. ಇಲ್ಲದೇ ಇರುವಷರತ್ತುಗಳ ಹಾಕಿ ಖರೀದಿ ಮಾಡಿದರೂ ರೈತರಿಗೆ ಖರೀದಿ ಮಾಡಿದ ಹಣ ನೀಡುತ್ತಿಲ್ಲ. ಜಿಲ್ಲಾಧಿಕಾರಿಗಳು ಸೇರಿದಂತೆ ಸರ್ಕಾರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಐದು ದಿನದಲ್ಲಿ ಜೋಳ ಖರೀದಿ ಹಣ ಪಾವತಿಸದೇ ಹೋದರೆ ಯಾವುದೇ ಪತ್ರ ನೀಡಿದ ವಿವಿಧ ಹಂತದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಜಿಲ್ಲಾಧ್ಯಕ್ಷ ಬಸವರಾಜ ಹಂಚಿನಾಳ, ಪ್ರಮುಖರಾದ ಲಿಂಗಪ್ಪ, ಪ್ರಹ್ಲಾದರೆಡ್ಡಿ, ಬಡೇಸಾಬ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net