ಪೊಲೀಸ್ ನೇಮಕಾತಿ ಅಧಿಸೂಚನೆ ಸರಿಪಡಿಸಲು ಒತ್ತಾಯ

ಪೊಲೀಸ್ ನೇಮಕಾತಿಗೆ ಸಂಬಂಧಿಸಿ ಪರಿಶಿಷ್ಟ ಜಾತಿ ಒಳಮೀಸಲಾತಿ ಹಂಚಿಕೆಯ ಪ್ರಕಾರ ಲಂಬಾಣಿ-ಬಂಜಾರ ಸಮುದಾಯಕ್ಕೆ ಅಗಿರುವ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಪದಾಧಿಕಾರಿಗಳು ರಾಯಚೂರಿನ ಡಿಸಿ ಕಚೇರಿಯ ಶಿರಸ್ಥೆದಾರ ವೇಣುಮಾದವನ್ ಮೂಲಕ ಸಿಎಂಗೆ ಗುರುವಾರ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಕೃಷ್ಣಪ್ಪ ಪವಾರ್, ಗೌರವಾಧ್ಯಕ್ಷ ನಾಗರೆಡ್ಡಿ ನಾರಾಯಣಪ್ಪ ನಾಯ್ಕ್,ತಾಲೂಕು ಅಧ್ಯಕ್ಷ ಲಚ್ಚಪ್ಪ ನಾಯ್ಕ ಪವಾರ್, ಪ್ರಮುಖರಾದ ವೆಂಕಟೇಶ ಪವಾರ, ಮೋನಪ್ಪ, ಜೇಮ್ಲ ನಾಯ್ಕ್, ಶಿವಪ್ಪ, ಪರಮೇಶ ರಾಠೋಡ್, ರಾಮು ನಾಯ್ಕ್ ಪವರ್ ಇದ್ದರು.

Published on
ರಾಯಚೂರು ಪೊಲೀಸ್ ನೇಮಕಾತಿಗೆ ಸಂಬಂಧಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಕಲ್ಯಾಣ ಕರ್ನಾಟಕ ಮತ್ತು ಕರಾವಳಿ ಕರ್ನಾಟಕ ವೃಂದಗಳಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ಹಂಚಿಕೆಯ ಪ್ರಕಾರ ಲಂಬಾಣಿ-ಬಂಜಾರ ಸಮುದಾಯಕ್ಕೆ ಅಗಿರುವ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಪದಾಧಿಕಾರಿಗಳು ನಗರದ ಡಿಸಿ ಕಚೇರಿಯ ಶಿರಸ್ಥೆದಾರ ವೇಣುಮಾದವನ್ ಮೂಲಕ ಸಿಎಂಗೆ ಗುರುವಾರ ಮನವಿ ಸಲ್ಲಿಸಿದರು.
ಪರಿಶಿಷ್ಟ ಜಾತಿಗಳ ದಶಕಗಳ ಕಾಲದ ಬೇಡಿಕೆಯಾಗಿದ್ದ ಒಳಮೀಸಲಾತಿಯನ್ನು ಜಾರಿಗೊಳಿಸಿದ್ದು, ಆದರೆ ಪ್ರಸ್ತುತ ನೇಮಕಾತಿ ಅಧಿಸೂಚನೆಯಲ್ಲಿ ಆಗಿರುವ ತಾಂತ್ರಿಕ ಲೋಪಗಳನ್ನು ಬಿಟ್ಟು ಮಾಡಿದ್ದಾರೆ. ಅಧಿಸೂಚನೆಯಲ್ಲಿ ಪರಿಶಿಷ್ಟ ಜಾತಿಯನ್ನು ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಎಂದು ವರ್ಗೀಕರಿಸಿ ಶೇ.15% ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಲಾಗಿದೆ.
ಆದರೆ ಪ್ರವರ್ಗ-ಸಿ ವರ್ಗಕ್ಕೆ ಕೇವಲ 54 ಹುದ್ದೆಗಳನ್ನು ಮಾತ್ರ ಮೀಸಲೀಡಲಾಗಿದೆ. ಎಸ್‌ಸಿ ಜನಸಂಖ್ಯೆಯಲ್ಲಿ ಶೇ.80ಕ್ಕೂ ಹೆಚ್ಚು ಪ್ರಾತಿನಿಧ್ಯ ಹೊಂದಿರುವ ಲಂಬಾಣಿ (ಬಂಜಾರ), ಭೋವಿ, ಅಲೆಮಾರಿ ಸಮುದಾಯಗಳಿಗೆ ಪೊಲೀಸ್ ನೇಮಕಾತಿ ಅಧಿಸೂಚನೆಯಲ್ಲಿ ಹುದ್ದೆಗಳ ಹಂಚಿಕೆಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದಂತಾಗಿದೆ. ಇದರಿಂದಾಗಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಸಮುದಾಯದ ನೂರಾರು ಅರ್ಹ ಅಭ್ಯರ್ಥಿಗಳಿಗೆ ತೀವ್ರ ನಿರಾಶೆಯಾಗಿದೆ.
ಆದ್ದರಿಂದ ಕೆಇಎ ಪ್ರಕಟಿಸಿರುವ ಪೊಲೀಸ್ ನೇಮಕಾತಿ ಅಧಿಸೂಚನೆಯನ್ನು ತಕ್ಷಣವೇ ಕೂಲಂಕಷವಾಗಿ ಪರಿಶೀಲಿಸಿ, ಒಳಮೀಸಲಾತಿ ವ್ಯವಸ್ಥೆಯಲ್ಲಿ ಲಂಬಾಣಿ-ಬಂಜಾರ ಸಮುದಾಯಕ್ಕೆ ಸೂಕ್ತ ಪ್ರಮಾಣದ ಹುದ್ದೆಗಳನ್ನು ಮರುಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಪವಾರ್, ಗೌರವಾಧ್ಯಕ್ಷ ನಾಗರೆಡ್ಡಿ ನಾರಾಯಣಪ್ಪ ನಾಯ್ಕ್,ತಾಲೂಕು ಅಧ್ಯಕ್ಷ ಲಚ್ಚಪ್ಪ ನಾಯ್ಕ ಪವಾರ್, ಪ್ರಮುಖರಾದ ವೆಂಕಟೇಶ ಪವಾರ, ಮೋನಪ್ಪ, ಜೇಮ್ಲ ನಾಯ್ಕ್, ಶಿವಪ್ಪ, ಪರಮೇಶ ರಾಠೋಡ್, ರಾಮು ನಾಯ್ಕ್ ಪವರ್ ಸೇರಿ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net