ಹಳೆ ಮೀಸಲಾತಿ ಮುಂದುವರೆಸಲು ಒತ್ತಾಯ

ಹಳೆಯ ಮೀಸಲಾತಿಯನ್ನು ಮುಂದುವರೆಸಲು ಒತ್ತಾಯಿಸಿ ಛಲವಾದಿ ಮಹಾಸಭಾದ ಜಿಲ್ಲಾ ಸಮಿತಿಯಿಂದ ಸೋಮವಾರ ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿದರು. ಛಲವಾದಿ ಮಹಾಸಭಾ ರಾಜ್ಯ ನಿರ್ದೇಶಕ ಎಂ.ವಸಂತ, ಜಿಲ್ಲಾಧ್ಯಕ್ಷ ವಿಶ್ವನಾಥ ಪಟ್ಟಿ, ಜಗನ್ನಾಥ ಸುಂಕಾರಿ, ರವಿಕುಮಾರ ಇದ್ದರು.

Published on
ರಾಯಚೂರು ಹಳೆಯ ಮೀಸಲಾತಿಯನ್ನು ಮುಂದುವರೆಸಲು ಒತ್ತಾಯಿಸಿ ಛಲವಾದಿ ಮಹಾಸಭಾದ ಜಿಲ್ಲಾ ಸಮಿತಿಯಿಂದ ಸೋಮವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.
ಸರ್ಕಾರ 56 ಸಾವಿರ ಹುದ್ದೆಗಳ ನೇಮ ಕಾತಿಗೆ ಹಳೆಯ ಮೀಸಲಾತಿಯಂತೆ ನೇಮಕ ಮಾಡಬೇಕು. ಒಳ ಮೀಸಲಾತಿ ಜಾರಿಯಾಗಬೇಕು. ಒಳ ಮೀಸಲಾತಿ ವಿರುದ್ಧವಲ್ಲ. ಸಮಾಜದ ಸಾಕಷ್ಟು ಯುವಕರಿಗೆ ಹುದ್ದೆಗಳಲ್ಲಿ ನೇಮಕಾತಿ ಆಗಬೇಕು. ಈಗಾಗಲೇ ಸಾಕಷ್ಟು ಯುವಕರಿಗೆ ವಯೋ ಮಿತಿ ಮೀರಿ ಹೋಗುತ್ತಿದೆ. ಎಲ್ಲರಿಗೂ ಎಲ್ಲಾ ಸಮಾಜಗಳಿಗೆ ಸಮಾನ ಅವಕಾಶ ದೊರೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾ ರಾಜ್ಯ ನಿರ್ದೇಶಕ ಎಂ.ವಸಂತ, ಜಿಲ್ಲಾಧ್ಯಕ್ಷ ವಿಶ್ವನಾಥ ಪಟ್ಟಿ, ಜಗನ್ನಾಥ ಸುಂಕಾರಿ, ರವಿಕುಮಾರ ಸೇರಿದಂತೆ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net