ಎಂಇಎಸ್ ಸಂಘಟನೆ ನಿಷೇಧಿಸಲು ಒತ್ತಾಯ

VENKATESH
VENKATESH
Published on
ರಾಯಚೂರು ಬೆಳಗಾವಿ ಸೇರಿ ರಾಜ್ಯದ ಮಹಾರಾಷ್ಟ್ರ ಗಡಿಗಳಲ್ಲಿ ಮಹಾರಾಷ್ಟ್ರ ಏಕಿಕರಣ ಸಮಿತಿಯನ್ನು ನಿಷೇಧಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆಯ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗಾವಿ, ನಿಪ್ಪಾಣಿ, ಬೀದರ್, ಬಾಲ್ಕಿ, ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಬೇಡಿಕೆಯನ್ನು ಇಟ್ಟುಕೊಂಡು ರಾಜ್ಯದಲ್ಲಿ ಪುಂಡಾಟ ನಡೆಸುವ ಎಂಇಎಸ್ ಕಾರ್ಯಕರ್ತರ ನಡೆ ಖಂಡನೀಯವಾಗಿದೆ.
ಈಗಾಗಲೇ ಮಹಾಜನ ವರದಿಯಾನುಸಾರ ಬೆಳಗಾವಿ ಕರ್ನಾಟಕ ರಾಜ್ಯಕ್ಕೆ ಸೇರಿದ್ದಾಗಿದ್ದು, ಆದರೂ ಎಂಇಎಸ್ ಸಂಘಟನೆ ಸಾಕಷ್ಟು ಸಾರಿ ನಾಡವಿರೋಧಿ ಹೇಳಿಕೆಗಳನ್ನು ನೀಡುತ್ತಾ ಮೇಳಗಳನ್ನು ಮಾಡುತ್ತಾ ಕನ್ನಡಿಗರನ್ನು ಪ್ರಚೋಧಿಸುತ್ತಿದೆ. ಇದರಿಂದ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡುತ್ತಿದೆ ಆದರಿಂದ ಕೂಡಲೇ ರಾಜ್ಯದಲ್ಲಿ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ ಭೋವಿ, ಪ್ರಮುಖರಾದ ಜಿಲಾನಿ ಪಾಷಾ, ಶಶಿಕಲಾ ಭೀಮರಾಯ್, ಶೇಖರಪ್ಪ, ಶಂಕರ ಬ್ಯಾಡಗಿ, ಅಮರೇಶ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net