ಪರಿಷ್ಕೃತ ಕನಿಷ್ಠ ವೇತನದ ಪರಿಶೀಲಿಸುವ ಕ್ರಮ ಕೈಬಿಡಲು ಒತ್ತಾಯ

ರಾಜ್ಯದಲ್ಲಿ ಜಾರಿಯಲ್ಲಿರುವ ಪರಿಷ್ಕೃತ ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಮರು ಪರಿಶೀಲಿಸುವ  ಕ್ರಮವನ್ನು ತಕ್ಷಣ ಕೈಬಿಡಬೇಕೆಂದು ಎಐಸಿಸಿಟಿಯುನ ಜಿಲ್ಲಾ ಸಮಿತಿಯು ವತಿಯಿಂದ ರಾಯಚೂರಿನ ಕಾರ್ಮಿಕ ಇಲಾಖೆ ಎದುರು ಗುರುವಾರ ಪ್ರತಿಭಟನೆ ಮಾಡಿದರು. ಎಐಸಿಸಿಟಿಯು ಜಿಲ್ಲಾಧ್ಯಕ್ಷ ಅಜೀಜ್ ಜಾಗೀರ್ದಾರ್, ಪ್ರಮುಖರಾದ ಜಿಲಾನಿ ಯರಗೇರಾ, ಭೀಮಯ್ಯ, ಲಕ್ಷ್ಮಣ್, ನಿಸಾರ್ ಅಹ್ಮದ್, ಪ್ರಹ್ಲಾದ್, ಜಗದೀಶ್, ಮಾರಣ್ಣ, ಚಾಂದ್, ಈರಣ್ಣ, ಆಂಜನೇಯ, ನರಸಿಂಹಲು, ಮೌಲಾಲಿ, ಪರಶುರಾಮ್ ಇದ್ದರು.

Published on
ರಾಯಚೂರು ರಾಜ್ಯದಲ್ಲಿ ಜಾರಿಯಲ್ಲಿರುವ ಪರಿಷ್ಕೃತ ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಮರು ಪರಿಶೀಲಿಸುವ ಕ್ರಮವನ್ನು ತಕ್ಷಣ ಕೈಬಿಡಬೇಕೆಂದು ಎಐಸಿಸಿಟಿಯುನ ಜಿಲ್ಲಾ ಸಮಿತಿಯು ವತಿಯಿಂದ ನಗರದ ಕಾರ್ಮಿಕ ಇಲಾಖೆ ಎದುರು ಗುರುವಾರ ಪ್ರತಿಭಟನೆ ಮಾಡಿದರು.
2017 ಮತ್ತು 18ರಿಂದ ಬಾಕಿ ಉಳಿದಿದ್ದ ಕನಿಷ್ಠ ವೇತನ ಪರಿಷ್ಕರಣೆಯನ್ನು ಸುದೀರ್ಘ ಕಾನೂನು ಬದ್ಧ ಪ್ರಕ್ರಿಯೆಯ ಬಳಿಕ ಜಾರಿಗೊಳಿಸಲಾಗಿದೆ. ಈ ಪರಿಷ್ಕರಣೆಯಿಂದ ರಾಜ್ಯದ ಒಂದು ಕೋಟಿಗೂ ಹೆಚ್ಚು ಕಾರ್ಮಿಕ ಕುಟುಂಬಗಳಿಗೆ ನ್ಯಾಯಯುತ ವೇತನ ದೊರೆಯಲಿದ್ದು, ಅವರ ಜೀವನಮಟ್ಟ ಸುಧಾರಿಸುವುದರ ಜತೆಗೆ ರಾಜ್ಯದ ಆರ್ಥಿಕ ಚಟುವಟಿಕೆಗೂ ಉತ್ತೇಜನ ಸಿಗಲಿದೆ. ಪರಿಷ್ಕೃತ ಕನಿಷ್ಠ ವೇತನವನ್ನು 15ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಮಾನದಂಡಗಳು, ವೇತನ ಸಂಹಿತೆ2019 ಹಾಗೂ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಅನುಸಾರ ನಿಗದಿಪಡಿಸಲಾಗಿದೆ. ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ ನಂತರವೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, ಈಗ ಅದನ್ನು ಹಿಂಪಡೆಯುವುದು ಕಾನೂನುಬಾಹಿರವಾಗುತ್ತದೆ ಎಂದರು.
ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದ್ದು, ಸರ್ಕಾರವೇ ತನ್ನ ಅಧಿಸೂಚನೆಯನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಸರ್ಕಾರ ಹೊರಡಿಸಿದ ಅಧಿಸೂಚನೆಯನ್ನು ಮರುಪರಿಶೀಲನೆ ನಡೆಸುವುದು ಸೂಕ್ತವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು ಕೆಪಿಟಿಸಿಎಲ್ ಸೇರಿದಂತೆ ಹಲವು ಸರ್ಕಾರಿ ಸಂಸ್ಥೆಗಳು, ನಿಗಮಗಳು ಹಾಗೂ ಖಾಸಗಿ ಸಂಸ್ಥೆಗಳು ಈಗಾಗಲೇ ಪರಿಷ್ಕೃತ ಕನಿಷ್ಠ ವೇತನವನ್ನು ಜಾರಿಗೊಳಿಸಿರುವುದರಿಂದ ಕಾರ್ಮಿಕರಿಗೆ ದೊರೆತಿರುವ ಹಕ್ಕುಗಳನ್ನು ಯಾವುದೇ ಕಾರಣಕ್ಕೂ ಹಿಂಪಡೆಯಬಾರದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಐಸಿಸಿಟಿಯು ಜಿಲ್ಲಾಧ್ಯಕ್ಷ ಅಜೀಜ್ ಜಾಗೀರ್ದಾರ್, ಪ್ರಮುಖರಾದ ಜಿಲಾನಿ ಯರಗೇರಾ, ಭೀಮಯ್ಯ, ಲಕ್ಷ್ಮಣ್, ನಿಸಾರ್ ಅಹ್ಮದ್, ಪ್ರಹ್ಲಾದ್, ಜಗದೀಶ್, ಮಾರಣ್ಣ, ಚಾಂದ್, ಈರಣ್ಣ, ಆಂಜನೇಯ, ನರಸಿಂಹಲು, ಮೌಲಾಲಿ, ಪರಶುರಾಮ್ ಸೇರಿ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net