ಭೂಮಾನಂದ ಕೊಲೆಗಾರರಿಗೆ ಕಠಿಣ ಶಿಕ್ಷೆ ವಿಧಿಸಲಿ

ಹದ್ದಿನಾಳ ಗ್ರಾಮದಿಂದ ವಿವಿಧ ದಲಿತ ಸಂಘಟನೆಗಳ ಒಕ್ಕೂಟದಿಂದ ರಾಯಚೂರಿಗೆ ಬೈಕ್ ರ್ಯಾಲಿ ನಡೆಯಿತು. ಪ್ರಮುಖರಾದ ಅಂಬಣ್ಣ ಅರೋಲಿಕರ್, ರವೀಂದ್ರನಾಥ್ ಪಟ್ಟಿ, ಶಿವರಾಯ ಅಕ್ಕರಕಿ, ಎಸ್.ಮಾರೆಪ್ಪ, ಹೇಮರಾಜ್ ಹಸ್ಕಿಹಾಳ, ಶಾಂತಕುಮಾರ ಹೊನ್ನಟಗಿ, ರಾಜಪ್ಪ ಸಿರವಾರಕರ್, ಎಂ.ಆರ್.ಭೇರಿ, ಹನುಮಂತ ಮನ್ನಾಪುರಿ, ತಮ್ಮಣ್ಣ ವಕೀಲ್, ಬಸವರಾಜ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ದಲಿತಪರ ಸಂಘಟನೆಗಳಿಂದ ಬೈಕ್ ರ್ಯಾಲಿ
  • ದೇವದುರ್ಗ ದಲಿತ ಸಂಘಟನೆಗಳ ಒತ್ತಾಯ
ದೇವದುರ್ಗ: ಹದ್ದಿನಾಳ ಗ್ರಾಮದ ಯುವಕ ಭೂಮಾನಂದ ಕೊಲೆ ಘಟನೆ ಖಂಡಿಸಿ ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಹದ್ದಿನಾಳದಿಂದ ರಾಯಚೂರು ಡಿಸಿ ಕಚೇರಿವರೆಗೆ ವಿವಿಧ ದಲಿತ ಸಂಘಟನೆಗಳ ಒಕ್ಕೂಟ ಬೈಕ್ ರ್ಯಾಲಿ ನಡೆಸಿತು.
ಸುಂಕೇಶ್ವರಹಾಳ ಗ್ರಾಮದಲ್ಲಿ ದಲಿತ ಯುವಕ ಭೂಮಾನಂದನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇದು ದಲಿತ ಸಮುದಾಯವನ್ನು ಆತಂಕಕ್ಕೆ ದೂಡಿದೆ. ಗ್ರಾಮದಲ್ಲಿ ದಲಿತಪರ ಧ್ವನಿಯಾಗಿದ್ದ ಭೂಮಾನಂದ ಉತ್ತಮ ಕೆಲಸ ಮಾಡುತ್ತಿದ್ದರು. ಇದನ್ನು ಸಹಿಸದ ದುಷ್ಕರ್ಮಿಗಳು ಆತನನ್ನು ಕೊಲೆ ಮಾಡಿದ್ದಾರೆ. ಈ ಘಟನೆ ರಾಜ್ಯದಲ್ಲಿ ದಲಿತರ ಮೇಲೆ ನಡೆಯುತ್ತಿರುವ ಹಲ್ಲೆಗೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಭೂಮಾನಂದ ಕೊಲೆಗಾರರಿಗೆ ಕಠಿಣಶಿಕ್ಷೆ ವಿಧಿಸಬೇಕು. ಸಂತ್ರಸ್ಥನ ಕುಟುಂಬಕ್ಕೆ ಭದ್ರತೆ ಜತೆಗೆ ಪರಿಹಾರ ನೀಡಬೇಕು. ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಅಂಬಣ್ಣ ಅರೋಲಿಕರ್, ರವೀಂದ್ರನಾಥ್ ಪಟ್ಟಿ, ಶಿವರಾಯ ಅಕ್ಕರಕಿ, ಎಸ್.ಮಾರೆಪ್ಪ, ಹೇಮರಾಜ್ ಅಸ್ಕಿಹಾಳ, ಶಾಂತಕುಮಾರ ಹೊನ್ನಟಗಿ, ರಾಜಪ್ಪ ಸಿರವಾರಕರ್, ಎಂ.ಆರ್.ಭೇರಿ, ಹನುಮಂತ ಮನ್ನಾಪುರಿ, ತಮ್ಮಣ್ಣ ವಕೀಲ್, ಬಸವರಾಜ, ನರಸಪ್ಪ ದಂಡೋರ, ಭೂತಪ್ಪ ಜಾಲಹಳ್ಳಿ, ಯಲ್ಲಪ್ಪ, ಹನುಮಂತ ಕೋಟೆ, ಬಸವರಾಜ ನಕ್ಕುಂದಿ, ಬಸವರಾಜ ಜಗ್ಲಿ, ಮೌನೇಶ್ ಗಾಣದಾಳ, ಸಾಬಣ್ಣ ಕಮಲದಿನ್ನಿ, ಹನುಮಂತಪ್ಪ ಕಾಕರಗಲ್, ಶಿವಪ್ಪ ಫಲಕನಮರಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net