ವೈಡಿಂಗ್ ಜೋನ್ ನಿರ್ಮಾಣಕ್ಕೆ ಒತ್ತಾಯ

ಅತಿಕ್ ಪಟೇಲ್
ಅತಿಕ್ ಪಟೇಲ್
Published on

ರಾಯಚೂರು. ಗರದ ಬೀದಿ ಬದಿ ವ್ಯಾಪಾರಿಗಳು ಸುವ್ಯವಸ್ಥಿತವಾಗಿ ವ್ಯಾಪಾರ ವೈಹಿವಾಟು ಮಾಡಲು ನಗರದ ವಿವಿಧಡೆ ಮಹಾನಗರ ಪಾಲಲಿಕೆಯಿಂದ ವೈಡಿಂಗ್ ಜೋನ್ ನಿರ್ಮಾಣ ಮಾಡಬೇಕೆಂದು ಬೀದಿ ವ್ಯಾಪಾರಿಗಳ ವಿಭಾಗದ ರಾಜ್ಯ ಕಾರ್ಯಾಧ್ಯಕ್ಷ ಅತೀಕ್ ಪಟೇಲ್ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದಲ್ಲಿ ಸರಿಸುಮಾರ 5 ಸಾವಿರ ಜನ ಬೀದಿ ವ್ಯಾಪಾರಿಗಳಿದ್ದು, ಜೀವನ ನಿರ್ವಾಹಣೆಗಾಗಿ 40-50 ವರ್ಷಗಳಿಂದ ವಿವಿಧ ವ್ಯಾಪಾರಗಳನ್ನು ಮಾಡುತ್ತಿದ್ದು, ಇವರ ವಿವಿಧ ಬೇಡಿಕೆಗಳಿಗಾಗಿ ಸಮಿತಿ ಅನೇಕ ಹೋರಾಟಗಳನ್ನು ಮಾಡುತ್ತ ಬಂದಿದೆ.

ಮಹಾನಗರ ಪಾಲಿಕೆ ಸಿಬ್ಬಂದಿ ಬೀದಿ ಬದಿ ವ್ಯಾಪಾರಿಗಳಿಗೆ ದಿನಲೂ ಒಂದಲ್ಲ ಒಂದು ನೆಪೆ ಒಡ್ಡಿ ಕಿರುಕುಳ ನೀಡುತ್ತಿದ್ದಾರೆ. ಬೀದಿ ಬದಿ ವ್ಯಾಪಾರಿಗಳ ಬಂಡಿ, ಅಂಗಡಿಗಳನ್ನು ತೆರವುಗೊಳಿಸುತ್ತಿದ್ದಾರೆ. ಈ ಕಾರಣದಿಂದ ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಲು ನಗರದ ವಿವಿಧ ಕಡೆ ವೈಡಿಂಗ್ ಜೋನ್ ನಿರ್ಮಾಣ ಮಾಡುವಂತೆ ಒತ್ತಾಯ ಮಾಡುತ್ತಿದ್ದೇವೆ. ಅಲ್ಲದೇ ಟಿ.ವಿ.ಸಿ ಸಮಿತಿ ಮಾಡುವಂತೆ ಸಹ ಮನವಿ ಮಾಡಿದ್ದೇವೆ. ಆದರೆ ಇನ್ನೂವರೆಗೂ ಯಾವುದೇ ಸ್ಪಂದನೆ ದೊರೆಯುತ್ತಿಲ್ಲವೆಂದು ದೂರಿದರು.

ಈ ಸಂದರ್ಭದಲ್ಲಿ ಸಮಿತಿ ಜಿಲ್ಲಾಧ್ಯಕ್ಷ ಯೇಸುಮೀತ್ರ,ಶ್ರೀನಿವಾಸ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net