ಹೆದ್ದಾರಿ ಪಕ್ಕದಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಒತ್ತಾಯ

ಶರಣಪ್ಪ ಉದ್ಘಾಳ
ಶರಣಪ್ಪ ಉದ್ಘಾಳ
Published on
ರಾಯಚೂರು ರಾಷ್ಟ್ರೀಯ ಹೆದ್ದಾರಿ 748 ಎ ರಸ್ತೆ ನಿರ್ಮಾಣ ನಡೆಯುತ್ತಿದ್ದು, ಮಸ್ಕಿ ತಾಲೂಕಿನ ಐದು ಗ್ರಾಮಗಳ ರೈತರ ಜಮೀನುಗಳಿಗೆ ಹೋಗುವ ಸರ್ವಿಸ್ ರಸ್ತೆಯೇ ಇಲ್ಲದೇ ಹೋಗಿದೆ. ಹೆದ್ದಾರಿ ಪ್ರಾಧಿಕಾರವರು ರೈತರ ಜಮೀನಿಗೆ ಹೋಗುವ ಹಕ್ಕು ಕಸಿದುಕೊಳ್ಳುತ್ತಲಿದ್ದಾರೆಂದು 748ಎ ಹೆದ್ದಾರಿ ರಸ್ತೆ ಜಮೀನು ವಂಚಿತ ರೈತ ಹೋರಾಟ ಸಮಿತಿ ಸಂಚಾಲಕ ಶರಣಪ್ಪ ಉದ್ಘಾಳ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಸ್ಕಿ ತಾಲೂಕಿನ ಗೋನವಾರ, ಕಾರ್ಲಕುಂಟಿ, ಬಸಾಪುರ ಸೇರಿ 5 ಗ್ರಾಮಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಮೀನನಿಗೆ ಹೋಗುವ ಸರ್ವಿಸ್ ರಸ್ತೆ ನಿರ್ಮಾಣ ಮಾಡುವದಾಗಿ ಭರವಸೆ ನೀಡಿದ್ದರು. ಈಗ ಭೂಮಿ ಸ್ವಾಧೀನವಾಗಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವಾಗ ಸರ್ವಿಸ್ ರಸ್ತೆ ನಿರ್ಮಿಸುವ ಯೋಜನೆಯೇ ಇಲ್ಲ ಎಂದು ಉಡಾಫೆಯಾಗಿ ಹೇಳುತ್ತಿದ್ದಾರೆ.
ರೈತರು ಕೃಷಿ ಚಟುವಟಿಕೆಗಳಿಗೆ ಟ್ರಾಕ್ಟರ, ಕೃಷಿ ಯಂತ್ರೋಪಕರಣಗಳನ್ನು ಜಮೀನಿಗೆತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಜಮೀನಿಗೆ ತೆರಳಲು ಐದಾರು ಕಿಮಿ ಸುತ್ತಿ ಹೋಗುವ ಸ್ಥಿತಿ ಕೆಲವರಿಗೆ ಇದ್ದರೆ ಮತ್ತೆ ಕೆಲವರಿಗೆ ಜಮೀನಿಗೆ ಹೋಗಲು ಸಾಧ್ಯವೇಇಲ್ಲ ಅವೈಜ್ಞಾನಿಕ ಯೋಜನೆ ರೂಪಿಸಲಾಗಿದೆ ಎಂದರು. ಕೃಷಿ ಬೆಳೆಯನ್ನು ಮಾರುಕಟ್ಟೆಗೆ ತರಲು ಸಾಧ್ಯವಾಗದ ಸ್ಥಿತಿನಿರ್ಮಾಣವಾಗಿದೆ. ಜಿಲ್ಲೆಯ ಸಚಿವರು, ಶಾಸಕರುಗಳು ರೈತರಿಗೆ ಎದುರಾಗಿ ರುವ ಸಮಸ್ಯೆ ಪರಿಹರಿಸಲು ಮುಂದಾಗಬೇಕೆಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಅಮರೇಗೌಡ ಗೋನವಾರ, ಶಂಕ್ರಣ ಸಾಹುಕಾರ, ಸಿದ್ದಾಮಪ್ಪ , ದೇವರೆಡ್ಡಿ ಮೇಟಿ, ಲಿಂಗಣ್ಣ ತೆಕ್ಕಲಕೋಟೆ, ಈರಣ್ಣ ಗುಡಿಹಾಳ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net