ಏಮ್ಸ್ ಸ್ಥಾಪನೆಗೆ ಶೀಘ್ರದಲ್ಲಿಯೇ ದೆಹಲಿಗೆ ನಿಯೋಗ

ರಾಯಚೂರಿನ ಏಮ್ಸ್ ಹೋರಾಟ ವೇದಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಧರ್ಮಸಿಂಗ್  ಶನಿವಾರ ಭೇಟಿ ನೀಡಿದರು. ಹೋರಾಟಗಾರ ಬಸವರಾಜ ಕಳಸ,ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಪ್ರಮುಖರಾದ ಕೆ.ಶಾಂತಪ್ಪ, ಸಾಧಿಕ್ ಖಾನ್ ಇದ್ದರು.
ರಾಯಚೂರಿನ ಏಮ್ಸ್ ಹೋರಾಟ ವೇದಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಧರ್ಮಸಿಂಗ್ ಶನಿವಾರ ಭೇಟಿ ನೀಡಿದರು. ಹೋರಾಟಗಾರ ಬಸವರಾಜ ಕಳಸ,ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಪ್ರಮುಖರಾದ ಕೆ.ಶಾಂತಪ್ಪ, ಸಾಧಿಕ್ ಖಾನ್ ಇದ್ದರು.
Published on

ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸಬೇಕೆಂದು ಒತ್ತಾಯಿಸಿ ನಡೆಯುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದ್ದು, ಮತ್ತೊಮ್ಮೆ ದೆಹಲಿಗೆ ನಿಯೋಗ ತೆರಳಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾಗುವುದೆಮದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಧರ್ಮಸಿಂಗ್ ತಿಳಿಸಿದರು.

ನಗರದ ಏಮ್ಸ್ ಹೋರಾಟ ವೇದಿಕೆಗೆ ಶನಿವಾರ ಭೇಟಿ ನೀಡಿ ಮಾತನಾಡಿದರು. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗಾಗಿ ಕಳೆದ 1,556 ದಿನಗಳಿಂದಲೂ ನಿರಂತರ ಹೋರಾಟ ನಡೆ ಯುತ್ತಿರುವುದು ಸಾಮಾನ್ಯ ವಿಚಾರವಲ್ಲ. ಇಷ್ಟೊಂದು ದಿನಗಳಿಂದ ಹೋರಾಟ ಮುಂದುವರಿದಿದ್ದರೂ ಬೇಡಿಕೆ ಈಡೇರದಿರುವುದು ನೋವಿನ ಸಂಗತಿ ಎಂದರು. ಕಲ್ಯಾಣ ಕರ್ನಾಟಕ ಭಾಗಕ್ಕೆ ಏಮ್ಸ್ ಬರಬೇಕು ಎಂಬುದು ನಮ್ಮೆಲ್ಲರ ಆಸೆಯಾಗಿದೆ. ಅದರಲ್ಲೂ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಯಾಗಲೇಬೇಕು. 
ಕಲಬುರಗಿಗೆ ಮಾತ್ರ ಸೀಮಿತಗೊಳಿಸದೆ ರಾಯಚೂರಿಗೂ ಏಮ್ಸ್ ದೊರೆಯಬೇಕು. ಕಲ್ಯಾಣ ಕರ್ನಾಟಕದ ಹಿಂದುಳಿದ ಜಿಲ್ಲೆಗಳ ಆರೋಗ್ಯ ಸೇವೆ, ಶಿಕ್ಷಣ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಏಮ್ಸ್ ಅತ್ಯಂತ ಅಗತ್ಯವಾಗಿದೆ. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಅನ್ಯಾಯವಾಗುತ್ತಿದೆ. ಕಳೆದ ಮೂರು ವರ್ಷ ಎರಡು ತಿಂಗಳಿನಿಂದಲೂ ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡಿದೆ. ಕಲ್ಯಾಣ ಕರ್ನಾಟಕದ ವಿಚಾರದಲ್ಲಿಯೂ ಇದೇ ರೀತಿಯ ನಿರ್ಲಕ್ಷ್ಯ ಮುಂದುವರಿಯಬಾರದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net