ಆಗ ರೇಖಾ ಶಶಿಧರ ಅವರು ಪುನಃ ನ್ಯಾಯಾಲಯದ ಡಿಕ್ರಿ ಆದೇಶ ಜಾರಿಗೆ ಕೋರಿ ಒಟ್ಟು ಪರಿಹಾರದ ಮೊತ್ತ 22,86,499 ರೂ. ಪಾವತಿಸಲು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಜುಲೈ 14 ರಂದು ಕೆ.ಬಸಾಪುರ ಗ್ರಾಪಂ ವಿರುದ್ಧ ಜಪ್ತಿ ಆದೇಶ ಹೊರಡಿಸಿತು. ಇದರನ್ವಯ ನ್ಯಾಯಾಲಯದ ಬೇಲಿಪ್ ಅಮರೇಗೌಡ, ವಕೀಲರಾದ ಎನ್.ರಾಮನಗೌಡ ಮತ್ತು ಹುಸೇನ್‌ಬಾಷಾ ಹಾಗೂ ಕೆ.ಬಸಾಪುರ ಗ್ರಾಪಂ ಸಿಬ್ಬಂದಿ ಸಮಕ್ಷಮದಲ್ಲಿ ಕಂಪ್ಯೂಟರ್, ಟೇಬಲ್, ಬ್ಯಾಟರಿ, ತಿಜೋರಿ ಹಾಗೂ ಕುರ್ಚಿಗಳು ಸೇರಿದಂತೆ ವಿವಿಧ ವಸ್ತುಗಳನ್ನು ಜಪ್ತಿ ಮಾಡಲಾಯಿತು.