ಪರಿಹಾರ ವಿಳಂಬ, ಬಸ್ ಜಪ್ತಿ

ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ಯಾದಗಿರಿ ಘಟಕದ ಬಸ್ ಜಪ್ತಿ ಮಾಡಿದ ವೇಳೆ ವಕೀಲ ಮಲ್ಲಿಕಾರ್ಜುನ ಗೋನಾಳ, ಕೋರ್ಟ್ ಬೇಲಿಫ್ ಮಾನಪ್ಪ ಬಿ, ಆದೇಶ ಜಾರಿಕಾರ ಶಿವಕುಮಾರ, ಚಾಲಕ ಪ್ರಕಾಶ ಇದ್ದರು.
ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ಯಾದಗಿರಿ ಘಟಕದ ಬಸ್ ಜಪ್ತಿ ಮಾಡಿದ ವೇಳೆ ವಕೀಲ ಮಲ್ಲಿಕಾರ್ಜುನ ಗೋನಾಳ, ಕೋರ್ಟ್ ಬೇಲಿಫ್ ಮಾನಪ್ಪ ಬಿ, ಆದೇಶ ಜಾರಿಕಾರ ಶಿವಕುಮಾರ, ಚಾಲಕ ಪ್ರಕಾಶ ಇದ್ದರು.
Published on
ಲಿಂಗಸುಗೂರು: ಅಫಘಾತದಲ್ಲಿ ಮೃತಪಟ್ಟ ಬೈಕ್ ಸವಾರನ ಕುಟುಂಬಕ್ಕೆ ಪರಿಹಾರ ಹಣ ನೀಡದೆ ವಿಳಂಬ ಮಾಡಿದ್ದರಿಂದ ಕೆಕೆಆರ್‌ಟಿಸಿ ಯಾದಗಿರಿ ಘಟಕದ ಸಾರಿಗೆ ಬಸ್ ಅನ್ನು ನ್ಯಾಯಾಲಯದ ಆದೇಶದ ಮೇರೆಗೆ ಶನಿವಾರ ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ಜಪ್ತಿ ಮಾಡಲಾಗಿದೆ. 
ಮಸ್ಕಿ ತಾಲೂಕಿನ ಪಾಂಡುರಂಗ ಕ್ಯಾಂಪ್ ಬಳಿ 2001ರಲ್ಲಿ ಯಾದಗಿರಿ ಘಟಕಕ್ಕೆ ಸೇರಿದ ಸರ್ಕಾರಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಉಮೇಶ ಎನ್ನುವವರು ಸಾವಿಗೀಡಾಗಿದ್ದರು. ಕುಟುಂಬದವರು ಪರಿಹಾರಕ್ಕಾಗಿ ಲಿಂಗಸುಗೂರು ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. 
ಆದರೆ ವಿಳಂಬ ಮಾಡಿದ್ದರಿಂದ ಬಸ್ ವಶಕ್ಕೆ ಪಡೆಯಲಾಯಿತು. ಬಳಿಕ ಸಾರಿಗೆ ಸಂಸ್ಥೆ ಅಧಿಕಾರಿಗಳು ಮೃತನ ಕುಟುಂಬಕ್ಕೆ 10.84 ಲಕ್ಷ ರೂ. ಪರಿಹಾರ ಮೊತ್ತವನ್ನು ಚೆಕ್ ಮೂಲಕ ಪಾವತಿ ಮಾಡಿದ್ದರಿಂದ ಬಸ್ ಬಿಡುಗಡೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net