ಲಿಂಗಸುಗೂರು: ಮಳೆ ಕೊರತೆ ಅನುಭವಿಸುತ್ತಿರುವ ಜಿಲ್ಲೆಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ರೈತರಿಗೆ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ಎಸಿ ಬಸವಣೆಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಿದರು.
ಮಳೆ ಅಭಾವದಿಂದ ಬಿತ್ತನೆ ಮಾಡಿದ ಬೆಳೆಗಳು ಒಣಗುತ್ತಿವೆ. ಒಂದು ವಾರದಲ್ಲಿ ಮಳೆಯಾಗದಿದ್ದರೆ ಸಂಪೂರ್ಣ ಬೆಳೆಗಳು ನಾಶವಾಗುತ್ತವೆ. ಸಾಲ ಮಾಡಿ ಬೀಜ, ಗೊಬ್ಬರ ಖರೀದಿ ಮಾಡಿದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ದಾರಿ ಹಿಡಿಯುತ್ತಾರೆ.
ಕೂಡಲೇ ಮೋಡ ಬಿತ್ತನೆ ಮಾಡಬೇಕು ಅಥವಾ ಬರಗಾಲ ಪ್ರದೇಶವೆಂದು ಘೋಷಣೆ ಮಾಡಿ ಪರಿಹಾರ ನೀಡಬೇಕು. ಬೆಳೆ ನಷ್ಟದ ಕುರಿತು ಸಮೀಕ್ಷೆ ನಡೆಸಬೇಕು. ರೈತರ ಸಾಲಮನ್ನಾ, ವಿದ್ಯುತ್ ಬಿಲ್‌ಗಳಿಗೆ ರಿಯಾಯಿತಿ ಮಾಡಬೇಕೆಂದು ಒತ್ತಾಯಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ದುರ್ಗಾಪ್ರಸಾದ, ರೈತ ಮುಖಂಡರಾದ ನಾಗಪ್ಪ ಪುಣೇದ, ನವೀನಕುಮಾರ, ಮಹ್ಮದ ಸಾಬ್, ಬಸವರಾಜ ಅಂಗಡಿ, ರಮೇಶ ಗೌಡೂರು, ರಾಮಣ್ಣ ಅಡಿಕೇರ, ಶರಣಬಸವ, ಮಹ್ಮದಸಾಬ್, ಹನುಮಂತ, ದುರುಗಪ್ಪ ಗೌಡೂರು, ಅಮರೇಶ ಭೂಪೂರು, ಆದಪ್ಪ ಇತರರಿದ್ದರು.