ಲಿಂಗಸುಗೂರಲ್ಲೇ ಡಿಡಿ ಕಚೇರಿ ಮುಂದುವರೆಸಿ

ಲಿಂಗಸುಗೂರು ಕೃಷಿ ಕಛೇರಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿದರು. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಪ್ಪ ಜಾಗೀರನಂದಿಹಾಳ, ತಾಲೂಕು ಅಧ್ಯಕ್ಷ ಶಿವಪ್ರಸಾದ, ಮುಖಂಡರಾದ ಲಾಲ್‌ಸಾಬ, ಖಾಜಾಸಾಬ್, ಹನುಮಂತ ನೆಲಗಿ, ಅಮರೇಶ, ವೆಂಕೋಬ, ಶಿವಪ್ಪ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಡಿಡಿ ಕಚೇರಿ
  • ಲಿಂಗಸುಗೂರು

ಲಿಂಗಸುಗೂರಲ್ಲೇ ಡಿಡಿ ಕಚೇರಿ ಮುಂದುವರೆಸಿ

ಲಿಂಗಸುಗೂರು: ಕೃಷಿ ಡಿಡಿ ಕಚೇರಿಯನ್ನು ಲಿಂಗಸುಗೂರು ತಾಲೂಕಿನಲ್ಲಿಯೇ ಮುಂದುವರೆಸಬೇಕು ಎಂದು ಒತ್ತಾಯಿಸಿ ಪಟ್ಟಣದ ಕೃಷಿ ಕಚೇರಿ ಆವರಣದಲ್ಲಿ ರೈತರು ಬುಧವಾರ ಪ್ರತಿಭಟನೆ ನಡೆಸಿದರು.
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿ, ರಾಜಕಾರಣಿಗಳು ಸ್ವಹಿತಕ್ಕಾಗಿ ತಾಲೂಕಿನಲ್ಲಿರುವ ಸವಲತ್ತುಗಳನ್ನು ಕಸಿಯಬಾರದು. ತಮಗೆ ಬೇಕಾದ ಕಚೇರಿಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಳ್ಳಿ. ಒಂದು ತಾಲೂಕಿನಿಂದ ಇನ್ನೊಂದು ತಾಲೂಕಿಗೆ ವರ್ಗಾವಣೆ ಮಾಡಿಸುವುದು ಸಮಾಜದ ಆರೋಗ್ಯಕ್ಕೆ ಮಾರಕವಾಗಲಿದೆ. ಕೂಡಲೇ ನಿರ್ಧಾರವನ್ನು ಕೈಬಿಡುವ ಮೂಲಕ ಸರ್ಕಾರ ಲಿಂಗಸುಗೂರಲ್ಲೇ ಕಚೇರಿಯನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಪ್ಪ ಜಾಗೀರನಂದಿಹಾಳ, ತಾಲೂಕು ಅಧ್ಯಕ್ಷ ಶಿವಪ್ರಸಾದ, ಪ್ರಮುಖರಾದ ಲಾಲ್‌ಸಾಬ್, ಖಾಜಾಸಾಬ್, ಹನುಮಂತ ನೆಲಗಿ, ಅಮರೇಶ, ವೆಂಕೋಬ, ಶಿವಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net