ಜೂ.25 ರಂದು ನೃತ್ಯರೂಪಕ ಪ್ರದರ್ಶನ

ಡಿಂಗ್ರಿ ನರೇಶ
ಡಿಂಗ್ರಿ ನರೇಶ
Published on
ರಾಯಚೂರು
ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಜೂ.25 ರಂದು ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸಂತಕವಿ ಕನಕದಾಸರ ಮುತ್ತು ಬಂದಿದೆ ಕೇರಿಗೆ ನೃತ್ಯರೂಪಕ ಪ್ರದರ್ಶನ ಆಯೋಜನೆ ಮಾಡಲಾಗಿದೆಂದು ಕಲಾವಿದ ಡಿಂಗ್ರಿ ನರೇಶ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿರುವ ಸ್ನೇಹಾ ಕಪ್ಪಣ್ಣ ಇವರ ನೃತ್ತ ಸಂಯೋಜನೆಯನೆಯಲ್ಲಿ ಕನಕದಾಸರ ಮುತ್ತು ಬಂದಿದೆ ಕೇರಿಗೆ ನೃತ್ಯ ರೂಪಕ 25 ಕಲಾವಿದರಿಂದ 75 ನಿಮಿಷ ಪ್ರದರ್ಶನವಾಗುತ್ತದೆ. ಖ್ಯಾತ ನೃತ್ಯ ರೂಪಕ ಸಂಯೋಜಕ ಡಾ.ಪ್ರವೀಣರಾವ್ ನೃತ್ಯ ಸಂಯೋಚಿಸಿದ್ದಾರೆ .

ಕಾ.ತ .ಚಿಕ್ಕಣ್ಣ ಪರಿಕಲ್ಪನೆ, ಸಾಹಿತ್ಯದ ಬ್ರಮರಿ ಡ್ಯಾನ್ಸ್ ರೆಪರ್ಟರಿ ಕಲಾವಿದರೂ ಪ್ರದರ್ಶನ ನೀಡಲಿದ್ದಾರೆ. ಜಾತಿ, ಕುಲ,ವರ್ಗ, ವರ್ಣ ಮೌಡ್ಯ ತಾರತಮ್ಯಗಳ ವಿರುದ್ಧ ಕನಕದಾಸರು ಸಮಾಝಕ್ಕೆ ಬೋಧಿಸಿದ ಆದರ್ಶಗಳನ್ನು ಜನರಿಗೆತಲುಪಿಸಲು ರಾಜ್ಯದಾಧ್ಯಂತ ನೃತ್ಯರೂಪಕ ಪ್ರದರ್ಶನವಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿ.ಬಿ.ಚಿಲಕದ, ಪ್ರಮುಖರಾದ ಶೇಖರ ವಾರದ ,ನಾಗವೇಣಿ, ಹನುಮಂತಪ್ಪ, ರಾಮಣ್ಣ , ರಾಮಚಂದ್ರಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net