ನಗರದ ಬಪ್ಪೂರ ರಸ್ತೆ, ಕುಷ್ಟಗಿ ರಸ್ತೆ ಹಾಗೂ ಶಹರ ಪೊಲೀಸ್ ಸ್ಟೇಷನ್ ಪಕ್ಕದ ಗ್ಯಾಸ್ ಏಜೆನ್ಸಿ ಕಚೇರಿಗೆ ಗ್ರಾಹಕರು ಭೇಟಿ ನೀಡಿ, ಗ್ಯಾಸ್ ಸಿಲಿಂಡರ್‌ಗೆ ಬೇಡಿಕೆಯಿಡುತ್ತಿರುವುದು ಸಾಮಾನ್ಯವಾಗಿದೆ. ಅಲ್ಲದೆ, ಬುಕ್ಕಿಂಗ್ ಮಾಡಿಸಿ ಮೂರು ದಿನವಾಗಿದ್ದು, ಏಜೆನ್ಸಿ ಕಾರ್ಯಾಲಯಕ್ಕೆ ಅಲೆದಾಡುತ್ತಿದ್ದೇವೆ. ಆದರೆ, ಈವರೆಗೂ ಗ್ಯಾಸ್ ಸಿಲಿಂಡರ್ ದೊರೆತಿಲ್ಲ. ಇದರಿಂದ ಆಹಾರ ತಯಾರಿಕೆಗೆ ಸಮಸ್ಯೆಯಾಗಿದೆ. ಮನೆ ಕಾಂಪೌಂಡ್‌ನಲ್ಲಿ ಸೌದೆ ಒಲೆ ಹಚ್ಚಿ ಅನ್ನ ಮಾಡುವ ದುಸ್ಥಿತಿ ಎದುರಾಗಿದೆ ಎನ್ನುವುದು ಕೆಲ ಗ್ರಾಹಕರ ದೂರಾಗಿದೆ.