ಅನಧಿಕೃತ ಕೋಚಿಂಗ್ ಕೇಂದ್ರಕ್ಕೆ ಕಡಿವಾಣ ಹಾಕಿ

ದೇವದುರ್ಗದಲ್ಲಿ ಬಿಇಒ ಮಲ್ಲಿಕಾರ್ಜುನಗೆ ರೈತ ಸಂಘ ಮನವಿ ಸಲ್ಲಿಸಿತು.
ದೇವದುರ್ಗದಲ್ಲಿ ಬಿಇಒ ಮಲ್ಲಿಕಾರ್ಜುನಗೆ ರೈತ ಸಂಘ ಮನವಿ ಸಲ್ಲಿಸಿತು.
Published on
ದೇವದುರ್ಗ: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಅನಧಿಕೃತ ಕೋಚಿಂಗ್ ಸೆಂಟರ್‌ಗಳು ತಲೆ ಎತ್ತಿದ್ದು ಮಕ್ಕಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದ್ದು, ತನಿಖೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಬಿಇಒ ಮಲ್ಲಿಕಾರ್ಜುನಗೆ ರಾಜ್ಯ ರೈತ ಸಂಘ ಸೋಮವಾರ ಮನವಿ ಸಲ್ಲಿಸಿತು.
ತಾಲೂಕಿನಲ್ಲಿ ಬೇಸಿಗೆ ಅವಧಿಯನ್ನು ದುರ್ಬಳಕೆ ಮಾಡಿಕೊಂಡು ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು, ಶಿಕ್ಷಣ ಇಲಾಖೆ ಪರವಾನಗಿ ಪಡೆಯದೆ ಅನಧಿಕೃತವಾಗಿ ಕೋಚಿಂಗ್ ಸೆಂಟರ್ ಆರಂಭಿಸಿವೆ. ಧನದಾಹಕ್ಕಾಗಿ ಪಾಲಕರಿಗೆ ಸುಳ್ಳು ನೆಪಹೇಳಿ ಮನಬಂದಂತೆ ಹಣ ವಸೂಲಿ ಮಾಡಿ ಜೀವ ಹಿಂಡುತ್ತಿವೆ. ಇಲಾಖೆಯಿಂದ ಯಾವುದೇ ಪರವಾನಗಿ ಪಡೆದಿರುವುದಿಲ್ಲ. ಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿಲ್ಲ. ಬೇಸಿಗೆಯಲ್ಲಿ ಮಕ್ಕಳ ಆರೋಗ್ಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಆರೋಪಿಸಿದರು.
ತಾಲೂಕಿನಲ್ಲಿ ನಾಯಿಕೊಡೆಗಳಂತೆ ಯಾವುದೇ ಪರವಾನಗಿಗೆ ಪಡೆಯದೇ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಪಾಲಕರನ್ನು ಸುಲಿಗೆ ಮಾಡುತ್ತಿವೆ. ಕೂಡಲೇ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ತನಿಖೆ ನಡೆಸಬೇಕು. ಪರವಾನಗಿ ಇಲ್ಲದೆ ನಡೆಯುವ ಕೇಂದ್ರಗಳ ವಿರುದ್ಧ ಕೇಸ್ ದಾಖಲಿಸಿ ಮಾಲೀಕರ ವಿರುದ್ಧ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಚನ್ನಪ್ಪ ಪೂಜಾರಿ, ಮಹೇಂದ್ರ ಮ್ಯಾತ್ರಿ, ಹನುಮಂತ್ರಾಯ ದೊರೆ, ತಿಮ್ಮಣ್ಣಗೌಡ, ಬಸಯ್ಯಸ್ವಾಮಿ, ಮಾರುತಿ ನಾಯಕ, ಸೂಗೂರೆಡ್ಡಿಗೌಡ, ಚಂದ್ರ ನಾಯಕ ನಾಗರಾಜ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net