ಸರ್ಕಾರಿ ಶಾಲೆ ಉಳಿಯಲು ಸಹಕಾರ ಅಗತ್ಯ

ಮುಳ್ಳೂರು (ಇಜೆ)ಕ್ಯಾಂಪಿನ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು.
ಮುಳ್ಳೂರು (ಇಜೆ)ಕ್ಯಾಂಪಿನ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು.
Published on
ಸಿಂಧನೂರು: ಬಡ, ಕೂಲಿಕಾರರ ಮಕ್ಕಳಿಗೆ ವರದಾನವಾಗಿರುವ ಸರ್ಕಾರಿ ಶಾಲೆಗಳು ಈಗ ಅವನತಿಯತ್ತ ಸಾಗುತ್ತಿದ್ದು, ಸಮುದಾಯದ ಸಹಕಾರದಿಂದ ಮಾತ್ರ ಉಳಿಯಲು ಸಾಧ್ಯ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು. 
ಮುಳ್ಳೂರು (ಇಜೆ)ಕ್ಯಾಂಪಿನ ಸರ್ಕಾರಿ ಶಾಲೆಯಲ್ಲಿ ಮಂಗಳವಾರ ಗೋಡಿತಿ ನಾಗೇಶನಾಥ್ ಚಾರಿಟಬಲ್ ಟ್ರಸ್ಟ್‌ನಿಂದ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗೋಡಿತಿ ವಿಶ್ವನಾಥ್ ಅವರು ಮಗನ ನೆನಪಿಗಾಗಿ ಸರ್ಕಾರಿ ಶಾಲೆ ದತ್ತು ಪಡೆದು, ಮೂಲಸೌಕರ್ಯ ಕಲ್ಪಿಸುವ ಮೂಲಕ ಶಾಲೆ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ.ಸರ್ಕಾರದ ನಿರ್ಲಕ್ಷ್ಯ ಹಾಗೂ ಪಾಲಕರಲ್ಲಿರುವ ಇಂಗ್ಲಿಷ್ ವ್ಯಾಮೋಹದಿಂದಾಗಿ ಹಲವು ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಶೇ.50 ಶಿಕ್ಷಕರ ಕೊರತೆಯಿದೆ. ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಶಿಕ್ಷಕರು, ಶಿಕ್ಷಣ ಇಲಾಖೆ ಅಧಿಕಾರಿಗಳು ಜಾಗೃತರಾಗಬೇಕು. ಶಾಲಾ ಸುಧಾರಣಾ ಸಮಿತಿಯು ಶಿಕ್ಷಕರಿಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂದರು.
ಟ್ರಸ್ಟ್ ಅಧ್ಯಕ್ಷ ವಿಶ್ವನಾಥ್ ಚೌದ್ರಿ, ಬಿಆರ್‌ಪಿ ನಾಗಪ್ಪ, ಸಿಆರ್‌ಪಿ ಷಣ್ಮುಖಗೌಡ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸಾಬಣ್ಣ ವಗ್ಗರ್, ದೇವರಾಜ್ ಪಾಟೀಲ್, ಸುರೇಶ್ ನೆಕ್ಕಂಟಿ, ಬಿ.ಹರ್ಷ, ವಂಶಿಕೃಷ್ಣ, ಬಸವರಾಜ ಸಾಲಗುಂದಾ, ಅಮರೇಗೌಡ ಮಲ್ಲಾಪುರ, ಅಜಯ್ ದಾಸರಿ, ಕಾನಿಪ ಸಂಘದ ಪ್ರ. ಕಾರ್ಯದರ್ಶಿ ಅಮರೇಶ ಅಲಬನೂರು, ಮುಖ್ಯಶಿಕ್ಷಕ ಆದೇಶ, ಅಮರೇಶಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net