ದೇವದುರ್ಗ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಸೊಳ್ಳೆಗಳ ದಿನದ ನಿಮಿತ್ತ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಟಿಎಚ್‌ಒ ಡಾ.ಬನದೇಶ್ವರ, ವೈದ್ಯಾಧಿಕಾರಿ ತ್ಯಾಗರಾಜ್, ವಿಬಿಡಿ ಮೇಲ್ವಿಚಾರಕ ಓಂಕಾರ್ ಜಂತೇಕರ್, ಮಲೇರಿಯಾ ಮೇಲ್ವಿಚಾರಕಿ ಸರಿತಾ, ಪ್ರಯೋಗಾಲಯ ತಾಂತ್ರಿಕಾಧಿಕಾರಿ ರಾಘವೇಂದ್ರಗೌಡ ಇತರರಿದ್ದರು.
ದೇವದುರ್ಗ: ಸೊಳ್ಳೆಗಳು ಕಡಿತದಿಂದ ಮಲೇರಿಯಾ, ಡೆಂಘೆ, ಚಿಕೂನ್‌ಗುನ್ಯಾ ಸೇರಿದಂತೆ ನಾನಾ ರೋಗಗಳು ಹರಡುತ್ತವೆ. ಸೊಳ್ಳೆಗಳ ಉತ್ಪತ್ತಿ ಬಗ್ಗೆ ಪ್ರತಿಯೊಬ್ಬರೂ ಎಚರವಹಿಸಿ ಮನೆಯ ಸುತ್ತ್ತ ಸೊಳ್ಳೆಗಳು ಹರಡದಂತೆ ಜಾಗ್ರತೆ ವಹಿಸಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಹೇಳಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ಸೊಳ್ಳೆಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನೋಬೆಲ್ ಪ್ರಶಸ್ತಿ ಪುರಸ್ಕೃತ ಸರ್ ರೋನಾಲ್ಡ್ ರೋಸ್ 1897ರ ಆ.20ರಂದು ಸೊಳ್ಳೆಗಳ ಕುರಿತು ಸಂಶೋಧನೆ ಕೈಗೊಂಡು, ಅವುಗಳ ಕಡಿತದಿಂದ ಮನುಷ್ಯರಿಗೆ ಮಲೇರಿಯಾ ಹರಡುತ್ತದೆ ಎನ್ನುವುದನ್ನು ಪತ್ತೆಹಚ್ಚಿದರು. ಆ ಮಹಾನ್ ವ್ಯಕ್ತಿಯನ್ನು ಸ್ಮರಿಸುತ್ತಾ ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದು ದಿನದ ಮುಖ್ಯ ಉದ್ದೇಶ. ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಇದರಿಂದ ರೋಗದಿಂದ ದೂರ ಇರಬಹುದು ಎಂದು ಸಲಹೆ ನೀಡಿದರು.
ಡಾ.ತ್ಯಾಗರಾಜ್, ವಿಬಿಡಿ ಮೇಲ್ವಿಚಾರಕ ಓಂಕಾರ್ ಜಂತೇಕರ್, ಮಲೇರಿಯಾ ಮೇಲ್ವಿಚಾರಕಿ ಸರಿತಾ, ಪ್ರಯೋಗಾಲಯ ತಾಂತ್ರಿಕಾಧಿಕಾರಿ ರಾಘವೇಂದ್ರಗೌಡ, ಸಿಬ್ಬಂದಿ ಮಂಜುಳಾ, ಮಾನಮ್ಮ, ಸುದೀಪ್, ಆಶಾ ಕಾರ್ಯಕರ್ತೆಯರಾದ ದೀಪಿಕಾ, ದೀಪಾ, ಮಹಮದಿ, ಸುಮಿತ್ರಾ, ಭೀಮಮ್ಮ, ಶ್ರುತಿ, ರೇಖಾ, ಸಬೀನಾಬಾನು ಇತರರಿದ್ದರು.