ದೇವದುರ್ಗದ ಕಿಂಡರ್ ಗಾರ್ಡನ್ ಶಾಲೆಯಲ್ಲಿ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಅಂಗವಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಮಕ್ಕಳಿಗೆ ಲಸಿಕೆ ಹಾಕಿದರು. ಆರೋಗ್ಯ ಇಲಾಖೆ ನೌಕರರಾದ ಮಂಜುಳಾ, ಮಾನಮ್ಮ, ಐಫಾ ಸುಲ್ತಾನಾ ಇದ್ದರು.
ದೇವದುರ್ಗ: ಐದು ವರ್ಷದೊಳಗಿನ ಮಕ್ಕಳಲ್ಲಿ ಕಂಡುಬರುವ ಪೋಲಿಯೋ ರೋಗದಿಂದ ಭಾರತಮುಕ್ತವಾಗಿದೆ. ಆದರೆ, ಅಕ್ಕಪಕ್ಕದ ದೇಶಗಳಲ್ಲಿ ಸೋಂಕು ಇರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕಲಾಗುತ್ತಿದೆ. ಹೀಗಾಗಿ ಪಾಲಕರು ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಬೇಕು ಎಂದು ಆರೋಗ್ಯ ಇಲಾಖೆ ವಿಬಿಡಿ ಮೇಲ್ವಿಚಾರಕ ಓಂಕಾರ ಜಂತೇಕಾರ್ ಹೇಳಿದರು.
ಪಟ್ಟಣದ ಕಿಂಡರ್ ಗಾರ್ಡನ್ ಸ್ಕೂಲ್‌ನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಪಲ್ಸ್ ಪೋಲಿಯೋ ಅಭಿಯಾನ ಜಾಗೃತಿ ಹಾಗೂ ಲಸಿಕಾ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ಪೋಲಿಯೋಮುಕ್ತ ಭಾರತ ನಿರ್ಮಾಣದಲ್ಲಿ ಎಲ್ಲರ ಪಾತ್ರವೂ ದೊಡ್ಡದಿದೆ. ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ನಾಲ್ಕು ದಿನಗಳ ಕಾಲ ಲಸಿಕಾ ಅಭಿಯಾನ ನಡೆಯಲಿದೆ. ಪ್ರತಿಯೊಬ್ಬರೂ ಪಾಲ್ಗೊಂಡು ಶೇ.100 ಪ್ರಗತಿ ಸಾಧಿಸಲು ಸಹಕಾರ ನೀಡಬೇಕು ಎಂದು ಕೋರಿದರು.
ಆರೋಗ್ಯ ಇಲಾಖೆ ನೌಕರರಾದ ಮಂಜುಳಾ, ಮಾನಮ್ಮ, ಐಫಾ ಸುಲ್ತಾನಾ, ಮುಖ್ಯಶಿಕ್ಷಕಿ ಅಕ್ಷತಾ, ನಾಗರತ್ನಾ ಇತರರಿದ್ದರು.