ಕುಡಿವ ಉದ್ದೇಶಕ್ಕೆ ನಿರಂತರ ನೀರು ಹರಿಸಿ

ಲಿಂಗಸುಗೂರು ಸಮೀಪದ ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದರಿಂದ 14 ಗೇಟ್‌ಗಳ ಮೂಲಕ 46,390 ಕ್ಯೂಸೆಕ್ ನೀರನ್ನು ಶನಿವಾರ ನದಿಗೆ ಹರಿಸಲಾಯಿತು. ಆಲಮಟ್ಟಿ ಡ್ಯಾಂನಿಂದ 70 ಸಾವಿರ ಕ್ಯೂಸೆಕ್ ನೀರು ನಾರಾಯಣಪುರ ಡ್ಯಾಂಗೆ ಹರಿದು ಬರುತ್ತಿದೆ. 33.313 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯವಿರುವ ಜಲಾಶಯದಲ್ಲಿ 31.77 ಟಿಎಂಸಿ ಅಡಿ ನೀರು ಶೇಖರಣೆಗೊಂಡಿದೆ.

Published on
ಲಿಂಗಸುಗೂರು: ನಾರಾಯಣಪುರ ಜಲಾಶಯಕ್ಕೆ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಪುರ ಶನಿವಾರ ಭೇಟಿ ನೀಡಿ, ವೀಕ್ಷಿಸಿದರು. 
ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದ್ದರಿಂದ ಎನ್‌ಆರ್‌ಬಿ ನಾಲೆ ಮೂಲಕ ಲಿಂಗಸುಗೂರು, ದೇವದುರ್ಗ ತಾಲೂಕುಗಳ ಜನಜಾನುವಾರುಗಳಿಗೆ ಕುಡಿಯಲು ತೊಂದರೆಯಾಗದಂತೆ ನಿರಂತರ ನೀರು ಹರಿಸಬೇಕು ಎಂದು ಜಲಾಶಯದ ಮುಖ್ಯಇಂಜಿನಿಯರ್‌ಗೆ ದೂರವಾಣಿ ಮೂಲಕ ತಿಳಿಸಿದರು. 
ಈ ವೇಳೆ ನಯೋಪ್ರಾ ಅಧ್ಯಕ್ಷ ಭೂಪನಗೌಡ ಪಾಟೀಲ್, ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಪಾಮಯ್ಯ ಮುರಾರಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜಗೌಡ ಗಣೇಕಲ್ಲ, ಜಿಪಂ ಮಾಜಿ ಅಧ್ಯಕ್ಷ ಗುಂಡಪ್ಪ ನಾಯಕ, ಕಾಂಗ್ರೆಸ್ ಮುಖಂಡರಾದ ಡಿಜಿ ಗುರಿಕಾರ, ಪ್ರಕಾಶ ಕುರಿ, ಜಗದೀಶಗೌಡ, ಸಂಗಣ್ಣ ನಾಡಗೌಡ, ಗದ್ದೆಪ್ಪ ಚಿತಾಪುರ, ಚಂದ್ರಶೇಖರ ಪಾಟೀಲ್, ರಾಮಣ್ಣ ವಂದಾಲಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net