ಹಳೇ ಮೀಸಲಾತಿ ಮುಂದುವರಿಸಿ

ದೇವದುರ್ಗದ ಅಂಬೇಡ್ಕರ್ ವೃತ್ತದಲ್ಲಿ ಗೋರ್ ಸೇನಾ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ರಮೇಶ್ ರಾಠೋಡ್, ತಾಲೂಕು ಅಧ್ಯಕ್ಷ ಬೂದೆಪ್ಪ ರಾಠೋಡ್, ಮುಖಂಡರಾದ ನರೇಶ ಜಾಧವ್, ನಾಗರಾಜ ಪವಾರ್, ದೇವೇಂದ್ರಪ್ಪ ರಾಥೋಡ್, ಲಕ್ಷ್ಮಣನಾಯ್ಕ, ಮೋನಪ್ಪ ನಾಯ್ಕ, ಸೀತಾರಾಮ ನಾಯ್ಕ, ರಾಜಶೇಖರ, ಸಂಗಮೇಶ್, ರವಿ ಬಂಡೇಗುಡ್ಡ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಗೋರ್ ಸೇನಾ ಮುಖಂಡರಿಂದ ನಿರಶನ
  • ದೇವದುರ್ಗ ಗೋರ್ ಸೇನಾ ಸಂಘಟನೆ ಹಳೇ ಮೀಸಲಾತಿ
ದೇವದುರ್ಗ: ಹಳೇ ಮೀಸಲಾತಿಯಂತೆ ಸರ್ಕಾರಿ ಹುದ್ದೆಗಳ ನೇಮಕಾತಿ ಮಾಡಬೇಕೆಂದು ಒತ್ತಾಯಿಸಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗೋರ್ ಸೇನಾ ಸಂಘಟನೆಯ ಮುಖಂಡರು ಶುಕ್ರವಾರ ನಿರಶನ ನಡೆಸಿದರು.
ಅವೈಜ್ಞಾನಿಕವಾಗಿ ಜಾತಿ ಸಮೀಕ್ಷೆ ನಡೆಸುವ ಮೂಲಕ ದಲಿತರ ಮೀಸಲಾತಿಯಲ್ಲಿ ತಾರತಮ್ಯ ಮಾಡುವ ಘಟನೆಗಳು ನಡೆಯುತ್ತಿರುವುದು ಖಂಡನೀಯ. ಹೊಸ ಒಳಮೀಸಲಾತಿ ನಿಯಮಗಳಿಂದ ಎಸ್ಸಿ ಸಮಾಜದ ಹಲವು ಜಾತಿಗಳಿಗೆ ಅನ್ಯಾಯವಾಗಲಿದೆ. ಸರ್ಕಾರ ಯಾವುದೇ ರಾಜಕೀಯ ಒತ್ತಡಗಳಿಗೆ ಒಳಗಾಗಿ ತರಾತುರಿಯಲ್ಲಿ ಒಳಮೀಸಲಾತಿ ಜಾರಿಗೊಳಿಸಬಾರದು. ಹಳೇ ಮೀಸಲಾತಿ ಪದ್ಧತಿಯಂತೆ ಸರ್ಕಾರಿ ವಿವಿಧ ಹುದ್ದೆಗಳ ನೇಮಕಾತಿ ನಡೆಸಲು ಮುಂದಾಗಿರುವುದು ಸ್ವಾಗತಾರ್ಹ. ಒಳಮೀಸಲಾತಿ ಜಾರಿಗೊಳಿಸಿದರೆ ಧ್ವನಿಯಿಲ್ಲದ ಸಣ್ಣ ಜಾತಿಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಲಿವೆ ಎಂದು ಆರೋಪಿಸಿದರು.
ಕೂಡಲೇ ರಾಜ್ಯ ಸರ್ಕಾರ ಹಳೇ ಮೀಸಲಾತಿ ಪದ್ಧತಿಯಂತೆ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಬೇಕು. ಶೇ.15 ಮೀಸಲಾತಿಯನ್ನು 17ಕ್ಕೆ ಹೆಚ್ಚಿಸಿ 9ನೇ ಷೆಡ್ಯೂಲ್ಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು. ಒಳಮೀಸಲಾತಿ ಜಾರಿ ಮುನ್ನ ಎಲ್ಲ ಜಾತಿಗಳ ಮುಖಂಡರ ಜತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕು. ಈ ಹಿಂದೆ ಹೊರಡಿಸಿದ ರೋಸ್ಟರ್ ಪದ್ಧತಿ ನೇಮಕಾತಿ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಎಸ್ಸಿ ಜಾತಿ ಪ್ರಮಾಣಪತ್ರದಲ್ಲಿ ಪ್ರವರ್ಗ ಎ, ಬಿ, ಸಿ ವರ್ಗೀಕರಣ ಕೈಬಿಟ್ಟು ಮೊದಲಿನಂತೆ ಜಾತಿ ಪ್ರಮಾಣಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net