ರಾಯರ ಕ್ಷೇತ್ರದಲ್ಲಿ ಇಂಪೌಂಡಿಂಗ್ ಜಲಾಶಯ ನಿರ್ಮಾಣ

ಮಂತ್ರಾಲಯದ ಶ್ರೀ ರಾಘವೇಂದ್ರ ಮಠದಲ್ಲಿ  ಎಚ್‌ಎಎಲ್ ಸಂಸ್ಥೆಯ ಸಿಎಸ್‌ಆರ್ ಅನುದಾನದಿಂದ ನಿರ್ಮಾಣವಾಗುತ್ತಿರುವ  ಇಂಪೌಂಡಿಂಗ್ ಜಲಾಶಯ ಕಾಮಗಾರಿಗೆ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಗುರುವಾರ ಭೂಮಿ ಪೂಜೆ ಮಾಡಿದರು. ಎಚ್‌ಎಎಲ್ ಸಂಸ್ಥೆಯ ಚೆರ್ಮೆನ್ ಕೆ.ರವಿ, ಎಚ್‌ಎಎಲ್ ಸಂಸ್ಥೆಯ ನಿರ್ದೇಶಕ ಬಾಲ ಸುಬ್ರಹ್ಮಣ್ಯಂ, ಜಲಾಶಯ ನಿರ್ಮಾಣದ ಪ್ರಾಜೆಕ್ಟರ್ ರಂಗನಾಥ,  ಪ್ರಮುಖರಾದ ರವಿಕಾಂತ ಗುಪ್ತ, ಸಿಕೆ ಮಂಜುನಾಥ, ಕೆ.ರಮೇಶ್, ಶ್ರೀಮಠದ ಮ್ಯಾನೇಜರ್ ಎಸ್.ಕೆ. ಶ್ರೀನಿವಾಸರಾವ್‌ಇದ್ದರು.
ಮಂತ್ರಾಲಯದ ಶ್ರೀ ರಾಘವೇಂದ್ರ ಮಠದಲ್ಲಿ ಎಚ್‌ಎಎಲ್ ಸಂಸ್ಥೆಯ ಸಿಎಸ್‌ಆರ್ ಅನುದಾನದಿಂದ ನಿರ್ಮಾಣವಾಗುತ್ತಿರುವ ಇಂಪೌಂಡಿಂಗ್ ಜಲಾಶಯ ಕಾಮಗಾರಿಗೆ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಗುರುವಾರ ಭೂಮಿ ಪೂಜೆ ಮಾಡಿದರು. ಎಚ್‌ಎಎಲ್ ಸಂಸ್ಥೆಯ ಚೆರ್ಮೆನ್ ಕೆ.ರವಿ, ಎಚ್‌ಎಎಲ್ ಸಂಸ್ಥೆಯ ನಿರ್ದೇಶಕ ಬಾಲ ಸುಬ್ರಹ್ಮಣ್ಯಂ, ಜಲಾಶಯ ನಿರ್ಮಾಣದ ಪ್ರಾಜೆಕ್ಟರ್ ರಂಗನಾಥ, ಪ್ರಮುಖರಾದ ರವಿಕಾಂತ ಗುಪ್ತ, ಸಿಕೆ ಮಂಜುನಾಥ, ಕೆ.ರಮೇಶ್, ಶ್ರೀಮಠದ ಮ್ಯಾನೇಜರ್ ಎಸ್.ಕೆ. ಶ್ರೀನಿವಾಸರಾವ್‌ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಂದ ಭೂಮು ಪೂಜೆ
  • ಸಾದು ಸಂತರು ತಮ್ಮ ಧರ್ಮದ ಕುರಿತು ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಪ್ರತಿಪಾದನೆ ಮಾಡಿರುವ ಉಲ್ಲೇಖಗಳಿವೆ
ರಾಯಚೂರು ಮಂತ್ರಾಲಯದ ಶ್ರೀ ರಾಘವೇಂದ್ರ ಮಠದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತಿರುವ ಇಂಪೌಂಡಿಂಗ್ ಜಲಾಶಯ (ನೀರು ಸಂಗ್ರಹ ಜಲಾಶಯ) ಕಾಮಗಾರಿಗೆ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಗುರುವಾರ ಭೂಮಿ ಪೂಜೆ ಮಾಡಿದರು.
ನಂತರ ಶ್ರೀಗಳು ಆಶೀರ್ವಚನ ನೀಡಿ, ಕಲಿಯುಗದಲ್ಲಿ ಅನೇಕ ಸಾದು ಸಂತರು ತಮ್ಮ ಧರ್ಮದ ಕುರಿತು ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಪ್ರತಿಪಾದನೆ ಮಾಡಿರುವ ಉಲ್ಲೇಖಗಳಿವೆ. ಶ್ರೀ ರಾಯರು ನವಾಬರಿಂದ ದಾನ ಪಡೆದು ಬೃಂದಾವನದಲ್ಲಿ ವಿರಾಜಮಾರ್ಗರಾಗಿದ್ದಾರೆ. ಕ್ಷೇತ್ರದಲ್ಲಿ ನಿತ್ಯ ಎರಡು ಬಾರಿ ಅನ್ನದಾನ, ವಿದ್ಯಾದಾನ ಸೇರಿ ಅನೇಕವನ್ನು ಶ್ರೀಮಠ ಕಾಲಕ್ಕೆ ತಕ್ಕಂತೆ ನೀಡುತ್ತಿದ್ದಾರೆ. ಆದರೆ ಬೇಸಿಗೆ ಸಂದರ್ಭದಲ್ಲಿ ಮಾತ್ರ ಗಮಿಸಿದ ಭಕ್ತರಿಗೆ ಹಾಗೂ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ತುಂಗಭದ್ರಾದ ಮೇಲ್ಬಾಗ ಹಾಗೂ ಕೆಳ ಭಾಗದಲ್ಲಿ ಅನೇಕ ಜಲಾಶಯಗಳಿದ್ದರು ನಮ್ಮಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಇದೆ. ಆದರೆ ಮಂತ್ರಾಲಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಶಾಶ್ವತವಾಗಿ ಕುಡಿಯುವ ನೀರು ಒದಗಿಸಲು ಇಂಪೌಂಡಿಂಗ್ ಜಲಾಶಯ ನಿರ್ಮಾಣ ಮಾಡಲು ಸಂಕಲ್ಪ ಮಾಡಲಾಯಿತು. ಆದರೆ ಸಂಕಲ್ಪದಿಂದ ಯಾವುದೇ ಸಿದ್ಧಿ ಸಾಧಿಸಲು ಸಾಧ್ಯವಿಲ್ಲ.
ಕೇವಲ ಕೊಠಡಿಯಲ್ಲಿ ಕುಳಿತು ಯೋಜನೆ ರೂಪಿಸಿದರೆ ಸಾಲದು ಅದಕ್ಕೆ ಸೂಕ್ತ ಯೋಜನೆ , ಕಾಲಮಿತಿಯ ಅಂದಾಜು , ಅನುಷ್ಠಾನ, ನಿಧಿ ಸಂಗ್ರಹ ಹಾಗೂ ಮೇಲ್ವಿಚಾರಣೆ ಅತ್ಯಗತ್ಯವಾಗಿತ್ತು. ಈ ಮಹತ್ವದ ಯೋಜನೆಗೆ ಪ್ರಸಿದ್ಧ ಭಾರತೀಯ ಸಂಸ್ಥೆಯಾದ ಹಿಂದೂಸ್ತಾನ್ ಏರೋನಾಟಿಕ್ಸೃ್ ಲಿಮಿಟೆಡ್‌ನ ಸಿಎಸ್‌ಆರ್ ನಿಧಿಯಿಂದ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಕ್ಕೆ ಮುಂದಾಗಿದ್ದು, ಈ ಸಂಸ್ಥೆಯು ಕೇವಲ ತನ್ನ ಲಾಭಕ್ಕಾಗಿ ನೋಡದೆ ಸಮಾಜದ ಒಳಿತಿಗಾಗಿ ಆರೋಗ್ಯ, ಕುಡಿಯುವ ನೀರು ಹಾಗೂ ಮಹಿಳಾ ಅಭಿವೃದ್ಧಿ ಮುಂತಾದ ಸಮಾಜಮುಖಿ ಕಲ್ಯಾಣ ಕಾರ್ಯಕ್ರಮಗಳಿಗೆ ತನ್ನ ಸಿಎಸ್‌ಆಆರ್ ನಿಧಿಯಿಂದ ದೊಡ್ಡ ಪ್ರಮಾಣದ ಆರ್ಥಿಕ ನೆರವು ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಎಚ್‌ಎಎಲ್ ಸಂಸ್ಥೆಯ ನಿರ್ದೇಶಕ ಬಾಲ ಸುಬ್ರಹ್ಮಣ್ಯಂ ಮಾತನಾಡಿ, ಲಕ್ಷಾಂತರ ಜನ ಭಕ್ತರು ಕ್ಷೇತ್ರಕ್ಕೆ ಬರುತ್ತಾರೆ. ಆದರೆ ಅವರಿಗೆ ಕುಡಿಯುವ ನೀರಿನ ಸಮಸ್ಯೆ ಆಗಿತ್ತು, ನಮ್ಮ ಸಂಸ್ಥೆಯ ಸಿಎಸ್‌ಆರ್ ನಿಧಿಯಿಂದ ಜಲಾಶಯ ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಜಲಾಶಯ ನಿರ್ಮಾಣದಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ಅನುಕೂಲವಾಗಲಿದೆ. ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಇಂಪೌಂಡಿಂಗ್ ಜಲಾಶಯ ಮುಂದಿನ 30 ರಿಂದ 40 ವರ್ಷ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದರು.
ಜಲಾಶಯ ನಿರ್ಮಾಣದ ಪ್ರಾಜೆಕ್ಟರ್ ರಂಗನಾಥನ್ ಮಾತನಾಡಿ, ಕ್ಷೇತ್ರದಲ್ಲಿ ಕಳೆದ 50 ವರ್ಷದ ಇತಿಹಾಸ ಪಡೆದು, ಗುರುಗಳ ಸಂಕಲ್ಪದಿಂದ ಇಂದು ಜಲಾಶಯ ನಿರ್ಮಾಣ ಮಾಡಲು ಮುಂದಾಗಿದ್ದಾರೆ. 25 ಎಕರೆ ಪ್ರದೇಶದಲ್ಲಿ 56.6 ಕೋಟಿ ಲೀಟರ್ ಸಾಮರ್ಥ್ಯದ ಇಂಪೌಂಡಿಂಗ್ ಜಲಾಶಯ ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಈ ಜಾಲಶಯಕ್ಕೆ ನೀರು ತುಂಬಲು 90 ದಿನ ಸಮಯ ಬೇಕಾಗುತ್ತದೆ. ಜಲಾಶಯದ ಸುತ್ತಲು ದಿನದ 24 ಗಂಟೆ ಸಿಸಿಟಿವಿ ಕಾರ್ಯಾಚರಣೆ ಮಾಡಲಾಗುತ್ತದೆ. ಜತೆಗೆ ಸುತ್ತಲೂ ಸಸಿಗಳನ್ನು ನೆಟ್ಟು ಆರಣ್ಯಕರಣ ಹಾಗೂ ವೀಕ್ಷಣೆಗೆ ಅನುಕೂಲ ಮಾಡಿಕೊಡಲಾವುದು ಎಂದರು.
ಈ ಸಂದರ್ಭದಲ್ಲಿ ಎಚ್‌ಎಎಲ್ ಸಂಸ್ಥೆಯ ಚೆರ್ಮೆನ್ ಕೆ.ರವಿ, ಪ್ರಮುಖರಾದ ರವಿಕಾಂತ ಗುಪ್ತ, ಸಿಕೆ ಮಂಜುನಾಥ, ಕೆ.ರಮೇಶ್, ಶ್ರೀಮಠದ ಮ್ಯಾನೇಜರ್ ಎಸ್.ಕೆ. ಶ್ರೀನಿವಾಸರಾವ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net