ಕಾಂಗ್ರೆಸ್ ರಾಜ್ಯ ಸೇರಿ ಅನೇಕ ಕಡೆ ಇರುತ್ತದೆ ಸಚಿವ ಸತೀಶ್ ಜಾರಕಿಹೊಳಿ

ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ
Published on
ಮುದಗಲ್
ನಮ್ಮ ಪಕ್ಷದಲ್ಲಿ ಸಿಎಂ ಕುರ್ಚಿಗಾಗಿ ಗೊಂದಲ ನಡೆದಿದೆಂದು ಪ್ರಧಾನಿ ನರೇಂದ್ರ ಮೋದಿಯವರು ಯಾವ ದೃಷ್ಟಿಯಿಟ್ಟು ಹೇಳಿದ್ದಾರೆ ನನಗೆ ಗೊತ್ತಿಲ್ಲ . ನಮ್ಮ ಸರ್ಕಾರ ಕೇರಳದಲ್ಲಿ ಇರುತ್ತೆ. ಕರ್ನಾಟಕದಲ್ಲೂ ಇರುತ್ತೆ ಹಾಗೂ ಬೇರೆ ಕಡೆನೂ ಇದ್ದೇ ಇರುತ್ತದೆಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಮನೆಯ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಮ್ಮ ಸರ್ಕಾರ 5 ವರ್ಷ ಅಧಿಕಾರದಲ್ಲಿ ಇರುತ್ತದೆ. ಪ್ರಧಾನಿಯವರು ಹೇಳುವ ಅರ್ಥ ಅವರಿಗೆ ಗೊತ್ತು ಅವರೇ ಹೇಳಬೇಕು. ಸಿಎಂ ಕುರ್ಚಿ ಗೊಂದಲ ನಮ್ಮ ಆಂತರಿಕ ವಿಚಾರವಾಗಿದ್ದು, ಕಾದಾಟ ಇರಬಹುದು, ಹೊಡೆದಾಟ ಇರಬಹುದು, ಘರ್ಷಣೆ ಇರಬಹುದು, ನಮ್ಮ ಪಕ್ಷಕ್ಕೆ ಸಂಬಂಧಪಟ್ಟದ್ದು, ಪಕ್ಷದ ವರಿಷ್ಠರು ಬಗೆಹರಿಸುತ್ತಾರೆ ಎಂದರು.

ಐಪಿಎಲ್ ವಿಚಾರಕ್ಕೆ ಸಂಬಂಧಿಸಿ ಬಿಸಿಸಿಐ ಅಧ್ಯಕ್ಷರು ಗುಜರಾತಿನವರಾಗಿದ್ದು, ತಮ್ಮ ಲಾಭಕ್ಕೆ ಐಪಿಎಲ್ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಅಹಮದಬಾದ್‌ಗೆ ಸ್ಥಳಾಂತರ ಮಾಡಿರಬಹುದು. ಆದರೆ ನಮ್ಮ ಶಾಸಕರು ಹಾಗೂ ಕುಟುಂಬ ಸೇರಿದರೆ ಕೇವಲ 500 ಮಾತ್ರವಾಗುತ್ತದೆ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣ 60 ಸಾವಿರ ಜನ ಸೇರುವ ಸಾಮಥ್ಯವಿದೆ. ಇದು ರಾಜಕೀಯವೆಂದು ಹೇಳಲು ಆಗಲ್ಲ ಲಾಭಕ್ಕೋಸ್ಕರ ಮಾಡಿರುತ್ತಾರೆ ಎನ್ನಬಹುದು.

ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಏನಾಗುತ್ತೋ ನಮಗೆ ಗೊತ್ತಿಲ್ಲ. ಸರಿ ಆಗಬೇಕು ಎನ್ನುವುದಷ್ಟೆ ನಮ್ಮ ವಿನಂತಿಯಾಗಿದೆ. ಘರ್ಷಣೆ ,ಗುಡುಗು , ಮಳೆ ನಿಲ್ಲಬೇಕು ಅನ್ನೋದಷ್ಟೇ ನಮ್ಮ ಪ್ರಾರ್ಥನೆ. ಗುಡುಗು ಮಳೆ ನಮ್ಮ ಪಕ್ಷದಲ್ಲಿ ನಡೆದಿದೆ ಇಲ್ಲಾವೆಂದು ಹೇಳುವುದಿಲ್ಲ ನಾನು ಒಪ್ಪಿಕೊಳ್ಳುತ್ತೇನೆ. ಮೇ 15 ಕ್ಕೆ ಇನ್ನೂ ನಾಲ್ಕೇ ದಿನ ಬಾಕಿ ಇದೆ.
ಅದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ. ಯಾವ ಡೇಟ್ ಯಾವಾಗ ಕರೆಯಬೇಕು. ಯಾವಾಗ ಸಂಧಾನ ಮಾಡಬೇಕು ಅನ್ನೋದು ಅವರಿಗೆ ಬಿಟ್ಟಿದ್ದು. ಆದಷ್ಟು ಬೇಗ ಆಗುತ್ತೆ ಇಷ್ಟರವರೆಗೆ ಕಾದಿದ್ದೇವೆ ,ಈಗ ಆಗುತ್ತೆ ಎಲ್ಲಾ ಸರಿಹೊಗುತ್ತದೆ ಎಂದರು.

ಸಚಿವ ಡಿ.ಸುಧಾಕರ್ ಅವರನ್ನು ಉಳಿಸಿಲಿಕ್ಕೆ ಸರ್ಕಾರ, ಡಾಕ್ಟರ್‌ಗಳೆಲ್ಲಾ ಪ್ರಯತ್ನ ಮಾಡಿದರು ಫಲಕಾರಿಯಾಗಲಿಲ್ಲ. ನಾನು ತೀವ್ರ ಸಂತಾಪ ವ್ಯಕ್ತಪಡಿಸುವೆ. ಮೇ 10 ರಂದು ಚಳ್ಳಕೆರೆಯಲ್ಲಿ ಅಂತಿಮ ಸಂಸ್ಕಾರ ಮಾಡುತ್ತಾರೆ.. ಆ ವೇಳೆ ನಾವು ಕೂಡ ಭಾಗವಹಿಸುತ್ತೇವೆ. ದೀರ್ಘಕಾಲ ರಾಜಕಾರಣ ಮಾಡಿದ್ದಾರೆ. ಮಂತ್ರಿಯಾಗಿ ಕೆಲಸ ಮಾಡಿದ್ದರು. ಇವಾಗ ಬಿಟ್ಟು ಹೋಗಿದ್ದಾರೆ ಇನ್ನೇನು ಮಾಡಲು ಆಗಲ್ಲ. ಅವರ ನೆನಪುಗಳು, ಆದರ್ಶ, ಅವರು ಮಾಡಿದ ಕೆಲಸ ಸದಾ ನಮ್ಮ ಜೊತೆ ಇರುತ್ತದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net