ನೀಟ್ ವಿಚಾರದಲ್ಲಿ ಕಾಂಗ್ರೆಸ್ ದೇಶವಿರೋಧಿ ಚಟುವಟಿಕೆ

ನೀಟ್ ವಿದ್ಯಾರ್ಥಿಗಳ ಹೆಸರಿನಲ್ಲಿ ದೇಶವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಹಾಗೂ ಹೂವಿನ ಹಡಗಲಿ ಶಾಸಕ ಬಿ.ಪಿ.ಹರೀಶ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಹಲ್ಲೆ ಖಂಡಿಸಿ ಜಿಲ್ಲಾ ಬಿಜೆಪಿ ಘಟಕದಿಂದ ಶುಕ್ರವಾರ ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಭಟನೆ ಮಾಡಿದರು. ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಪ್ರಮುಖರಾದ ಬಸನಗೌಡ ಬ್ಯಾಗವಾಟ್, ರವೀಂದ್ರ ಜಲ್ದಾರ್, ಆಂಜನೇಯ್ಯ ಕಡಗೋಲ, ರಮಾನಂದ ಯಾದವ್, ಕೆ.ಎಂ.ಪಾಟೀಲ್, ರಾಘವೇಂದ್ರ ಉಟ್ಟೂರು, ಪಿ.ಯಲ್ಲಪ್ಪ, ಕೊಟ್ರೇಶಪ್ಪ ಕೋರಿ, ಶಿವಕುಮಾರ ಪೋಲಿಸ್ ಪಾಟೀಲ್, ಮಹಾಂತೇಶ ಮುಕ್ತಿ, ಜೆ.ಎಂ.ಮೌನೇಶ ಇದ್ದರು.
ನೀಟ್ ವಿದ್ಯಾರ್ಥಿಗಳ ಹೆಸರಿನಲ್ಲಿ ದೇಶವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಹಾಗೂ ಹೂವಿನ ಹಡಗಲಿ ಶಾಸಕ ಬಿ.ಪಿ.ಹರೀಶ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಹಲ್ಲೆ ಖಂಡಿಸಿ ಜಿಲ್ಲಾ ಬಿಜೆಪಿ ಘಟಕದಿಂದ ಶುಕ್ರವಾರ ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಭಟನೆ ಮಾಡಿದರು. ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಪ್ರಮುಖರಾದ ಬಸನಗೌಡ ಬ್ಯಾಗವಾಟ್, ರವೀಂದ್ರ ಜಲ್ದಾರ್, ಆಂಜನೇಯ್ಯ ಕಡಗೋಲ, ರಮಾನಂದ ಯಾದವ್, ಕೆ.ಎಂ.ಪಾಟೀಲ್, ರಾಘವೇಂದ್ರ ಉಟ್ಟೂರು, ಪಿ.ಯಲ್ಲಪ್ಪ, ಕೊಟ್ರೇಶಪ್ಪ ಕೋರಿ, ಶಿವಕುಮಾರ ಪೋಲಿಸ್ ಪಾಟೀಲ್, ಮಹಾಂತೇಶ ಮುಕ್ತಿ, ಜೆ.ಎಂ.ಮೌನೇಶ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಬಿಜೆಪಿಯಿಂದ ಬ್ರಹತ್ ಪ್ರತಿಭಟನೆ

ರಾಯಚೂರು ನೀಟ್ ವಿದ್ಯಾರ್ಥಿಗಳ ಹೆಸರಿನಲ್ಲಿ ದೇಶವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಹಾಗೂ ಹೂವಿನ ಹಡಗಲಿ ಶಾಸಕ ಬಿ.ಪಿ.ಹರೀಶ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಹಲ್ಲೆ ಖಂಡಿಸಿ ಜಿಲ್ಲಾ ಬಿಜೆಪಿ ಘಟಕದಿಂದ ಶುಕ್ರವಾರ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಭಟನೆ ಮಾಡಿದರು.

ಪ್ರತಿಭಟನೆಯಲ್ಲಿ ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ ಮಾತನಾಡಿ, ನೀಟ್ ಪರೀಕ್ಷೆ ವಿಚಾರವನ್ನು ನೆಪ ಮಾಡಿಕೊಂಡು ಕಾಂಗ್ರೆಸ್ ಹಾಗೂ ಕೆಲವು ರಾಜಕೀಯ ಪಕ್ಷಗಳು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಪ್ರತಿಭಟನೆ ವಿದ್ಯಾರ್ಥಿಗಳ ಸ್ವಯಂಸ್ಪೂರ್ತಿಯ ಹೋರಾಟವಲ್ಲ. ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳನ್ನು ಮಾತ್ರ ಕರೆತಂದು, ಉಳಿದಂತೆ ವಿವಿಧ ಕಡೆಗಳಿಂದ ಜನರನ್ನು ಸಂಘಟಿಸಿ ರಾಜಕೀಯ ಪ್ರೇರಿತ ಪ್ರತಿಭಟನೆ ನಡೆಸಲಾಗಿದೆ ಎಂದು ದೂರಿದರು.

ಕೆಲವು ಮಾಧ್ಯಮಗಳಲ್ಲಿ ಆಸ್ಟ್ರೇಲಿಯಾದಿಂದ ಬಂದ ವ್ಯಕ್ತಿಗೆ ಹಣ ನೀಡಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮಾಡಲಾಗಿದೆ ಎಂಬ ಮಾಹಿತಿ ಪ್ರಸಾರವಾಗಿದ್ದು, ಇದರ ಹಿಂದೆ ಅಂತರರಾಷ್ಟ್ರೀಯ ಷಡ್ಯಂತ್ರವೂ ಇರಬಹುದು ಎಂಬ ಅನುಮಾನ ವ್ಯಕ್ತಪಡಿಸಿದರು.

ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಕಾರಣಕ್ಕೆ ಈಗ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್, ಇದೇ ರೀತಿಯ ಘಟನೆಗಳು ತನ್ನ ಆಡಳಿತದ ಅವಧಿಯಲ್ಲೂ ನಡೆದಿದ್ದನ್ನು ಮರೆತಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಇಲಾಖೆಯ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಒಂದಕ್ಕಿಂತ ಹೆಚ್ಚು ಬಾರಿ ಸೋರಿಕೆಯಾಗಿದ್ದವು. ಆಗ ಇಂತಹ ರಾಷ್ಟ್ರವ್ಯಾಪ್ತಿ ಪ್ರತಿಭಟನೆ ನಡೆಸದ ಕಾಂಗ್ರೆಸ್, ಈಗ ಒಂದು ತಿಂಗಳ ನಂತರ ರಾಜಕೀಯ ಲಾಭಕ್ಕಾಗಿ ಬೀದಿಗಿಳಿದಿದೆ ಎಂದು ಟೀಕಿಸಿದರು.

ಮಾಜಿ ಸಂಸದ ಬಿ.ವಿ.ನಾಯಕ ಮಾತನಾಡಿ, ಇಷ್ಟು ದೊಡ್ಡ ದೇಶದಲ್ಲಿ ಆಡಳಿತದ ವಿವಿಧ ಹಂತಗಳಲ್ಲಿ ಕೆಲವೊಮ್ಮೆ ಸಣ್ಣಪುಟ್ಟ ಲೋಪಗಳು ಆಗುವುದು ಸಹಜ. ಪ್ರತಿಯೊಂದು ತಪ್ಪಿಗೂ ರಾಜೀನಾಮೆ ಕೇಳುವ ಪರಿಸ್ಥಿತಿ ಬಂದರೆ ಪ್ರತಿದಿನವೂ ಯಾರಾದರೂ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಹೇಳಿದರು.

ದೇಶದಲ್ಲಿ ನ್ಯಾಯಾಂಗ, ಕಾಯಾರ್ಂಗ ಹಾಗೂ ಶಾಸಕಾಂಗ ಎಂಬ ಸ್ವತಂತ್ರ ವ್ಯವಸ್ಥೆಗಳಿದ್ದು, ತಪ್ಪುಗಳು ನಡೆದರೆ ಅವುಗಳನ್ನು ಸರಿಪಡಿಸುವ ಜವಾಬ್ದಾರಿಯನ್ನು ಅವು ನಿರ್ವಹಿಸುತ್ತವೆ. ನೀಟ್ ಪರೀಕ್ಷೆ ಕುರಿತ ಆರೋಪಗಳ ನಂತರ ಸರ್ಕಾರ ಅಗತ್ಯ ಕ್ರಮ ಕೈಗೊಂಡು ಮರುಪರೀಕ್ಷೆ ನಡೆಸಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪಕ್ಕೆ ಗಂಭೀರ ಅವಕಾಶವಿಲ್ಲ. ವಿರೋಧ ಪಕ್ಷಗಳಲ್ಲಿಯೂ ಈ ವಿಚಾರದಲ್ಲಿ ಏಕರೂಪದ ಹೋರಾಟದ ಮನೋಭಾವ ಇಲ್ಲ. ಕಾಂಗ್ರೆಸ್ ಮಾತ್ರ ರಾಜಕಿ ಯ ಲಾಭ ಪಡೆಯುವ ಉದ್ದೇಶದಿಂದ ಹೀಗೆ ಮಾಡುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಮುತ್ತಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹೂವಿನ ಹಡಗಲಿ ಶಾಸಕ ಬಿ.ಪಿ. ಹರೀಶ್ ಅವರ ಮೇಲೆ ಕಾಂಗ್ರೆಸ್ ಯುವ ಕಾರ್ಯಕರ್ತರು ಮಣ್ಣು ಎಸೆದು ಹಲ್ಲೆ ನಡೆಸಿರುವುದು ಪ್ರಜಾಪ್ರಭುತ್ವ ವಿರೋಧಿ ಹಾಗೂ ಖಂಡನೀಯ ಕೃತ್ಯವಾಗಿದೆ. ಜನಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸುವ ಗುಂಡಾ ಪ್ರವೃತ್ತಿಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ ಮಾತನಾಡಿ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದ್ದು, ತನಿಖೆಗೆ ವಿಶೇಷ ನ್ಯಾಯಾಂಗ ವ್ಯವಸ್ಥೆ ಕಲ್ಪಿಸಲಾಗಿದೆ. ಬಳಿಕ ಮರುಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಲಾಗಿದ್ದು, ವೈದ್ಯಕೀಯ ಕಾಲೇಜುಗಳ ಸೀಟು ಹಂಚಿಕೆ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಇಷ್ಟಾದ ಬಳಿಕ ಈಗ ಮತ್ತೆ ನೀಟ್ ವಿಚಾರ ಮುಂದಿಟ್ಟು ಕಾಂಗ್ರೆಸ್‌ ಪ್ರತಿಭಟನೆ ನಡೆಸುತ್ತಿರುವುದು ಕೇವಲ ರಾಜಕೀಯ ನಾಟಕ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್, ಪ್ರಮುಖರಾದ ಬಸನಗೌಡ ಬ್ಯಾಗವಾಟ್, ರವೀಂದ್ರ ಜಲ್ದಾರ್, ಆಂಜನೇಯ್ಯ ಕಡಗೋಲ, ರಮಾನಂದ ಯಾದವ್, ಕೆ.ಎಂ.ಪಾಟೀಲ್, ರಾಘವೇಂದ್ರ ಉಟ್ಟೂರು, ಪಿ.ಯಲ್ಲಪ್ಪ, ಕೊಟ್ರೇಶಪ್ಪ ಕೋರಿ, ಶಿವಕುಮಾರ ಪೋಲಿಸ್ ಪಾಟೀಲ್, ಮಹಾಂತೇಶ ಮುಕ್ತಿ, ಜೆ.ಎಂ.ಮೌನೇಶ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಜಂಬಣ್ಣ ನೀಲಗಲ್, ಅಮರೇಶ ಪಾಟೀಲ್, ಅಮರೇಶ ಸಜ್ಜನ್, ನರಸಪ್ಪ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net