ರಾಯಚೂರು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಹೆಸರಿನಲ್ಲಿ ಮತದಾರರ ಹಕ್ಕು ಕಸಿಯುವ ಹುನ್ನಾರ ವಿರೋಧಿಸಿ ಜೂ.230 ರಂದು ಬೆಂಗಳೂರಿನಲ್ಲಿ ಎಸ್‌ಐಆರ್ ವಿರೋಧಿ ಬೃಹತ್ ಸಮಾವೇಶ ಆಯೋಜಿಸಲಾಗಿದೆಂದು ಎಸ್‌ಐಆರ್ ವಿರೋಧಿ ಕರ್ನಾಟಕ ರಾಜ್ಯ ಸಂಚಾಲಕ ಜಿ.ಎಂ.ವೀರಸಂಗಯ್ಯ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಪಶ್ಚಿಮ ಬಂಗಾಳ ಸೇರಿದಂತೆ ಎಸ್‌ಐಆರ್ ನಡೆದ ರಾಜ್ಯಗಳಲ್ಲಿ ಬಹುಸಂಖ್ಯಾತರರು ಮತದಾರರ ಪಟ್ಟಿಯಿಂದ ಕಡಿತಗೊಂಡಿರುವದೇ ನಿದರ್ಶನವಾಗಿದೆ. ಅದೇ ಸ್ಥಿತಿ ರಾಜ್ಯದಲ್ಲಿ ನಡೆಯುತ್ತಿರುವದನ್ನು ವಿರೋಧಿಸಬೇಕಿದೆ. ಈಗಾಗಲೇ 6.50 ಕೋಟಿ ಮತದಾರರು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ.
ಪಶ್ಚಿಮ ಬಂಗಾಳ ಒಂದರಲ್ಲಿಯೇ 91 ಲಕ್ಷ ಮತದಾರರು ಕಡಿತಗೊಂಡಿದ್ದಾರೆ. 27 ಲಕ್ಷ ಜನ ದಾಖಲೆ ನೀಡಿದರೂ ಪರಿಗಣಿಸದೇ 317 ಜನರಿಗೆ ಮಾತ್ರ ಮತದಾರರ ಪಟ್ಟಿಗೆ ಮರು ಸೇರ್ಪಡೆ ಮಾಡಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಕೇಂದ್ರ ಚುನಾವಣೆ ಆಯೋಗ ಕಡಿತ ಗೊಂಡು ಮತದಾರರ ಸೇರ್ಪಡೆಗೆ ಭರವಸೆ ನೀಡುತ್ತಿಲ್ಲ. ಅರ್ಜಿಸಲ್ಲಿಸಬಹುದು ಆದರೆ 12 ದಾಖಲೆಗಳನ್ನು ನೀಡಬೇಕು. ಹೆಸರುಗಳ ಬದಲಾವಣೆ ಹೆಸರಿನಲ್ಲಿ ಕಡಿತಗೊಳಿಸಲಾಗುತ್ತಿದೆ. ಅನಕ್ಷರಸ್ಥರು, ಆದಿವಾಸಿಗಳು ಅರ್ಜಿಗಳ ನೀಡಲು ತಿಳಿಯದೇ ವಂಚನೆಗೆ ಒಳಗಾಗುವ ಅಪಾಯವಿದೆ. ಕೂಡಲೇ ಎಸ್‌ಐಆರ್ ನಿಲ್ಲಿಸಬೇಕು. ರಾಜ್ಯದ ಕಾಂಗ್ರೆಸ್ ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕೆಂದು ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ, ಸರಿ ಸುಮಾರು 1975 ರಿಂದಲೂ ಮತದಾರರ ಪಟ್ಟಿಯಲ್ಲಿದ್ದ ನನ್ನ ಹೆಸರು ಕಡಿತಗೊಳಿಸಲಾಗಿದೆ. ಹೆಸರಿನಲ್ಲಿ ವ್ಯತ್ಯಾಸವಿದೆ ಎಂದು ಹೇಳುತ್ತಿರುವ ಅಧಿಕಾರಿಗಳು ಸರಿಪಡಿಸುವ ಕೆಲಸ ಮಾಡುತ್ತಿಲ್ಲ. ಅಗತ್ಯ ದಾಖಲೆ ನೀಡುತ್ತೇನೆ ಆದರೆ ತಿಳಿಯದೇ ಇರುವ ಜನರು ಮತದಾರರ ಪಟ್ಟಿಯಿಂದ ವಂಚನೆಗೆ ಒಳಗಾಗಬಾರದು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಹ್ಮದ ಶಾಲಂ, ಎನ್.ಶ್ರೀನಿವಾಸರೆಡ್ಡಿ, ಜಾನವೆಸ್ಲಿ , ಅಸುಮುದ್ದೀನ್ ಅಕ್ತರ್, ಗುರುರಾಜ, ವಿಜಯರಾಣಿ, ಚೆನ್ನಮ್ಮ, ಸುರೇಖಾ ಇದ್ದರು.