ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ

ಕಲ್ಮಂಗಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಭೂಮಿಪೂಜೆ ನೆರವೇರಿಸಿದರು. ಮಸ್ಕಿ ಎಪಿಎಂಸಿ ಅಧ್ಯಕ್ಷ ಸಿದ್ದನಗೌಡ ಮಾಟೂರು, ಪ್ರಮುಖರಾದ ಭೀಮಣ್ಣ ಉಪ್ಪಲದೊಡ್ಡಿ, ಹುಲುಗಪ್ಪ ಉಪ್ಪಲದೊಡ್ಡಿ ಇತರರಿದ್ದರು.
ಕಲ್ಮಂಗಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಭೂಮಿಪೂಜೆ ನೆರವೇರಿಸಿದರು. ಮಸ್ಕಿ ಎಪಿಎಂಸಿ ಅಧ್ಯಕ್ಷ ಸಿದ್ದನಗೌಡ ಮಾಟೂರು, ಪ್ರಮುಖರಾದ ಭೀಮಣ್ಣ ಉಪ್ಪಲದೊಡ್ಡಿ, ಹುಲುಗಪ್ಪ ಉಪ್ಪಲದೊಡ್ಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಸನಗೌಡ ತುರ್ವಿಹಾಳ ಸೂಚನೆ
  • ಸಿಂಧನೂರು ಕಾಮಗಾರಿಗೆ ಭೂಮಿಪೂಜೆ
ಸಿಂಧನೂರು: ಕ್ಷೇತ್ರದ ಸಮಗ್ರ ಅಭಿವೃದಿಗೆ ಆದ್ಯತೆ ನೀಡಿದ್ದು, ಮೂಲಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ತಾಲೂಕಿನ ಮಾಟೂರು, ಕಲ್ಮಂಗಿ ಮತ್ತು ಉಮಲೂಟಿ ಗ್ರಾಮದಲ್ಲಿ ಕೆಕೆಆರ್‌ಡಿಬಿಯ ನಿಧಿಯಿಂದ ನಿರ್ಮಿತಿ ಕೇಂದ್ರದಡಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಮಾಟೂರ ಗ್ರಾಮದಲ್ಲಿ ಪಿಡಬ್ಲುೃಡಿಯಿಂದ 70 ಲಕ್ಷ ರೂ.ವೆಚ್ಚದ ಸಿಸಿ ರಸ್ತೆ, ಕಲ್ಮಂಗಿ ಗ್ರಾಮದಲ್ಲಿ 72 ಲಕ ್ಷ ರೂ. ವೆಚ್ಚದ ಸಿಸಿ ರಸ್ತೆ ಹಾಗೂ ಉಮಲೂಟಿ ಗ್ರಾಮದಲ್ಲಿ 2 ಕೋಟಿ ರೂ. ವೆಚ್ಚದ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಗ್ರಾಮಸ್ಥರ ಸಹಕಾರದೊಂದಿಗೆ ಕಾಲಮಿತಿಯೊಳಗೆ ಕಾಮಗಾರಿಯನ್ನು ಗುಣಮಟ್ಟದಿಂದ ಪೂರ್ಣಗೊಳಿಸಬೇಕು ಎಂದರು.
ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆಯ ರಾಜಕೀಯ ಚಿತ್ರಣ ನಿರೀಕ್ಷೆಗೆ ಮೀರಿದ್ದಾಗಿದೆ. ಬಾಗಲಕೋಟೆಯಲ್ಲಿ ತೀವ್ರ ಪೈಪೋಟಿ ನೀಡುವುದಾಗಿ ಹೇಳಿಕೊಂಡಿದ್ದ ಬಿಜೆಪಿ ನೆಲಕಚ್ಚಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದ ಮತಗಳು ಸಿಗದಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ ಎಂದು ತಿಳಿಸಿದರು.
ಮಸ್ಕಿ ಎಪಿಎಂಸಿ ಅಧ್ಯಕ್ಷ ಸಿದ್ದನಗೌಡ ಮಾಟೂರು, ಪ್ರಮುಖರಾದ ಭೀಮಣ್ಣ ಉಪ್ಪಲದೊಡ್ಡಿ, ಹುಲುಗಪ್ಪ ಉಪ್ಪಲದೊಡ್ಡಿ, ಶಂಕರಗೌಡ ಉಮಲೂಟಿ, ದೇವರಾಜ ಹೊಸಗೌಡ್ರ, ಸಿದ್ದಪ್ಪ ದೇವರಮನಿ, ಹನುಮಂತ ಕಿಚಿಡಿ, ಬಾಬುಸಾಬ ಹವಾಲ್ದಾರ್, ಸಂಗಮೇಶ ಅಡಗಿ, ಶರಣೇಗೌಡ ಪೋಸ್ಟ್, ಶರಣಯ್ಯ ಸ್ವಾಮಿ, ದಯಾನಂದ ಸ್ವಾಮಿ, ಬಸನಗೌಡ ಡಿಶ್, ರಾಮಣ್ಣ ನಾಯಕ, ಶಿವಾನಂದ ಸ್ವಾಮಿ, ಶಿವರಾಜ ಗದ್ರಟಗಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net