ಕ್ರೀಡೆಯಿಂದ ಸ್ಪರ್ಧಾತ್ಮಕ ಮನೋಭಾವ

ಹಟ್ಟಿಯಲ್ಲಿ ಆಯೋಜಿಸಿದ್ದ 100 ಮೀ. ಓಟದ ಸ್ಪರ್ಧೆಯಲ್ಲಿ ಗಣಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಹಟ್ಟಿಯಲ್ಲಿ ಆಯೋಜಿಸಿದ್ದ 100 ಮೀ. ಓಟದ ಸ್ಪರ್ಧೆಯಲ್ಲಿ ಗಣಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗಣಿ ಕಂಪನಿ ಅಧಿಕಾರಿ ಯಮನೂರಪ್ಪ ಅನಿಸಿಕೆ
  • ಹಟ್ಟಿಚಿನ್ನದಗಣಿ ವಿಶೇಷ ಕ್ರೀಡಾಕೂಟ
ಹಟ್ಟಿಚಿನ್ನದಗಣಿ: ಗಣರಾಜ್ಯೋತ್ಸವ ನಿಮಿತ್ತ ಚಿನ್ನದ ಗಣಿ ಕಂಪನಿಯಿಂದ ಸಿಬ್ಬಂದಿಗಾಗಿ ಧಾರವಾಲ ಕ್ರೀಡಾಂಗಣದಲ್ಲಿ ಭಾನುವಾರ ವಿಶೇಷ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಗಣಿ ಕಂಪನಿಯ ಮಾಸ ವಿಭಾಗದ ಅಧಿಕಾರಿ ಯಮನೂರಪ್ಪ ಕ್ರೀಡಾ ಧ್ವಜಾರೋಹಣ ನೆರವೇರಿಸಿ, ಕೆಲಸದ ಒತ್ತಡದ ನಡುವೆ ಕಾರ್ಮಿಕರಲ್ಲಿ ಉಲ್ಲಾಸ ಮತ್ತು ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಕ್ರೀಡಾಕೂಟ ಪೂರಕವಾಗಿದೆ ಎಂದರು.
ಪುರುಷ ಹಾಗೂ ಮಹಿಳಾ ಕಾರ್ಮಿಕರಿಗೆ ಪ್ರತ್ಯೇಕವಾಗಿ 100 ಮೀ. ಓಟ, ಗುಂಡು ಎಸೆತ, ಪುರುಷರ 400 ಮೀ. ಮತ್ತು 800 ಮೀ. ಓಟ, ಚಮಚದ ಮೇಲೆ ನಿಂಬೆಹಣ್ಣು ಇಟ್ಟು ಓಡುವುದು ಹಾಗೂ ಸೂಜಿಯಲ್ಲಿ ದಾರ ಪೋಣಿಸುವ ಸ್ವರ್ಧೆಗಳು ನಡೆದವು. 100 ಮೀ. ಓಟದ ಸ್ಪರ್ಧೆಯಲ್ಲಿ ಭರ್ಜರಿ ಪೈಪೋಟಿ ಕಂಡುಬಂತು. ಗುಂಡು ಎಸೆತ ಸ್ಪರ್ಧೆಯಲ್ಲಿ ಕಾರ್ಮಿಕರು ದೈಹಿಕ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಸಹೋದ್ಯೋಗಿಗಳು ಚಪ್ಪಾಳೆ ತಟ್ಟುವ ಮೂಲಕ ಪ್ರೋತ್ಸಾಹ ನೀಡುತ್ತಿರುವುದು ಕಂಡುಬಂತು.
ವಿಜೇತರಿಗೆ ಜ.26ರ ಪ್ರಜಾಪ್ರಭುತ್ವ ದಿನದಂದು ಬಹುಮಾನ ವಿತರಿಸಲಾಗುವುದೆಂದು ಅಧಿಕಾರಿಗಳು ತಿಳಿಸಿದರು. ಗಣಿ ಅಧಿಕಾರಿಗಳಾದ ಜಗನಮೋಹನ್, ಡಾ.ಆನಂದ, ಮಂಜುಳಾ, ಸಲ್ಮಾ, ಮೋನಿಕಾ, ಕಾವ್ಯಾ, ಶಕುಂತಲಾ, ಸಿಬ್ಬಂದಿ ರೇಷ್ಮಾ, ನಿಲುಫರ್, ಯಂಕೋಬ ಮಿಯ್ಯಪುರ, ಚಂದ್ರಶೇಖರ, ಪೆಂಚಲಮ್ಮ, ಸಂಗಪ್ಪ, ಶ್ರೀಕಾಂತ, ಡಾಮ್ನಿಕ್, ಬಾಬು, ರಂಗನಾಥ, ಅರುಣ್, ನಾರಾಯಣ, ಜಗನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net