ಮೃತ ಯುವಕರ ಕುಟುಂಬಕ್ಕೆ ಪರಿಹಾರ ನೀಡಲಿ

ದೇವದುರ್ಗದ ತಾಲೂಕು ಆಡಳಿತಸೌಧ ಮುಂದೆ ಸಂವಿಧಾನ ಸಂರಕ್ಷಣಾ ಪಡೆ ಪ್ರತಿಭಟನೆ ನಡೆಸಿತು. ಪ್ರಮುಖರಾದ ವಿಶ್ವನಾಥ ಬಲ್ಲಿದವ್, ಮೌನೇಶ ಬಲ್ಲಿದವ್, ಕ್ರಾಂತಿಕುಮಾರ್, ಹನುಮಂತಪ್ಪ ಮನ್ನಾಪುರ, ಬಸವರಾಜ ಸಮುದ್ರ, ಮಹಾಲಿಂಗ ದೊಡ್ಡಮನಿ ಇತರರಿದ್ದರು.
ದೇವದುರ್ಗದ ತಾಲೂಕು ಆಡಳಿತಸೌಧ ಮುಂದೆ ಸಂವಿಧಾನ ಸಂರಕ್ಷಣಾ ಪಡೆ ಪ್ರತಿಭಟನೆ ನಡೆಸಿತು. ಪ್ರಮುಖರಾದ ವಿಶ್ವನಾಥ ಬಲ್ಲಿದವ್, ಮೌನೇಶ ಬಲ್ಲಿದವ್, ಕ್ರಾಂತಿಕುಮಾರ್, ಹನುಮಂತಪ್ಪ ಮನ್ನಾಪುರ, ಬಸವರಾಜ ಸಮುದ್ರ, ಮಹಾಲಿಂಗ ದೊಡ್ಡಮನಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂವಿಧಾನ ಸಂರಕ್ಷಣಾ ಪಡೆ ಪ್ರತಿಭಟನೆ
  • ದೇವದುರ್ಗ ಪರಿಹಾರ ನೀಡಲು ಒತ್ತಾಯ
ದೇವದುರ್ಗ; ಬಸ್ ನಿಲ್ದಾಣ ಸಮೀಪ ಖಾಸಗಿ ವಾಣಿಜ್ಯ ಮಳಿಗೆ ಛಾವಣಿ ಕುಸಿದು ಮೃತಪಟ್ಟ ಮೂವರು ಯುವಕರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಒತ್ತಾಯಿಸಿ ತಾಲೂಕು ಆಡಳಿತಸೌಧ ಮುಂದೆ ಸಂವಿಧಾನ ಸಂರಕ್ಷಣಾ ಪಡೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ನಾಗಮ್ಮಗೆ ಮನವಿ ಸಲ್ಲಿಸಲಾಯಿತು.
ಖಾಸಗಿ ಕಟ್ಟಡ, ವಾಣಿಜ್ಯ ಮಳಿಗೆ ಮಾಲೀಕರ ನಿರ್ಲಕ್ಷೃ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಗೆ ಅಮಾಯಕ, ಬಡವರ ಮಕ್ಕಳು ಬಲಿಯಾಗಿದ್ದಾರೆ. ಮೃತ ಯುವಕರು ಹಾಗೂ ಗಾಯಗೊಂಡವರು ಬಡ ಕುಟುಂಬದವರಾಗಿದ್ದು, ಅವರ ತಂದೆ-ತಾಯಿ ಹೊಟ್ಟೆಪಾಡಿಗಾಗಿ ಕೆಲಸ ಅರಸಿ ಬೆಂಗಳೂರಿಗೆ ಗುಳೆ ಹೋಗಿದ್ದರು. ಮಕ್ಕಳು ಓದಲಿ ಎಂದು ಹಾಸ್ಟೆಲ್‌ನಲ್ಲಿ ಬಿಟ್ಟಿದ್ದರು. ಆದರೆ, ಕಟ್ಟಡ ಕುಸಿದು ಮೃತಪಟ್ಟಿದ್ದು, ಕುಟುಂಬವನ್ನು ಸಂಕಷ್ಟಕ್ಕೆ ದೂಡಿದೆ. ಇದು ಅಧಿಕಾರಿಗಳ ಕರ್ತವ್ಯಲೋಪಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸಂಘಟಕರು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಕಟ್ಟಡ ಮಾಲೀಕರ ವಿರುದ್ಧ ಕೇಸ್ ದಾಖಲಿಸಿ ಬಂಧಿಸಬೇಕು. ಮೃತ ಯುವಕರ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಬೇಕು. ಗಾಯಗೊಂಡ ಯುವಕರಿಗೆ ಗುಣಮಟ್ಟದ ಚಿಕಿತ್ಸೆ, ಕುಟುಂಬಕ್ಕೆ ಸಹಾಯಧನ ನೀಡಬೇಕು. ಎಲ್ಲ ಸರ್ಕಾರಿ ಕಟ್ಟಡಗಳು, ವಾಣಿಜ್ಯ ಮಳಿಗೆಗಳ ತಪಾಸಣೆ ಮಾಡಬೇಕು. ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ವಿಶ್ವನಾಥ ಬಲ್ಲಿದವ್, ಮೌನೇಶ ಬಲ್ಲಿದವ್, ಕ್ರಾಂತಿಕುಮಾರ್, ಹನುಮಂತಪ್ಪ ಮನ್ನಾಪುರ, ಬಸವರಾಜ ಸಮುದ್ರ, ಮಹಾಲಿಂಗ ದೊಡ್ಡಮನಿ, ಶಬ್ಬೀರ್ ಜಾಲಹಳ್ಳಿ, ಯಲ್ಲಪ್ಪ, ಬಾಳಪ್ಪ ಹಾಗೂ ಮೃತ ವಿದ್ಯಾರ್ಥಿಗಳ ಕುಟುಂಬಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net