ಸಮುದಾಯದ 50ರ ಸಂಭ್ರಮ - ಸಮಾಜ ಜಾಗೃತಿಒಗೊಳಿಸುವ ಕೆಲಸ ಸಮುದಾಯ ಮಾಡುತ್ತಿದೆ

ರಾಯಚೂರಿನ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ  ಶನಿವಾರ ಆಯೋಜಿಸಲಾಗಿದ್ದ ಸಮುದಾಯ 50 ವರ್ಷಾಚರಣೆಯಲ್ಲಿ  ಡೇ ಸಮುದಾಯ ಜಾತಾ ಸಮುದಾಯೋತರ ಸಂಭ್ರಮ ಪುಸ್ತಕ ಬಿಡುಗಡೆ ಮಾಡಲಾಯಿತು. ಹಿರಿಯ ಸಾಹಿತಿ ಬಂಜಗೆರೆ ಜಯಪ್ರಕಾಶ, ಡಾ.ರಹಮತ್ ತರೀಕೆರೆ,ಕಾರ್ಯದರ್ಶಿ ಗುಂಡಣ್ಣ ಚಿಕ್ಕಮಗಳೂರು, ಸಮುದಾಯ  ಗೌರವಾಧ್ಯಕ್ಷ ರಾಘವೇಂದ್ರ ಕುಷ್ಟಗಿ, ಶರಣು ಮಾಲೀಪಾಟೀಲ್, ಎಸ್.ದೇವೆಂದ್ರ ಗೌಡ, ಶ್ಯಾಮಲಾ ಪೂಜಾರ ಇದ್ದರು.
ರಾಯಚೂರಿನ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಮುದಾಯ 50 ವರ್ಷಾಚರಣೆಯಲ್ಲಿ ಡೇ ಸಮುದಾಯ ಜಾತಾ ಸಮುದಾಯೋತರ ಸಂಭ್ರಮ ಪುಸ್ತಕ ಬಿಡುಗಡೆ ಮಾಡಲಾಯಿತು. ಹಿರಿಯ ಸಾಹಿತಿ ಬಂಜಗೆರೆ ಜಯಪ್ರಕಾಶ, ಡಾ.ರಹಮತ್ ತರೀಕೆರೆ,ಕಾರ್ಯದರ್ಶಿ ಗುಂಡಣ್ಣ ಚಿಕ್ಕಮಗಳೂರು, ಸಮುದಾಯ ಗೌರವಾಧ್ಯಕ್ಷ ರಾಘವೇಂದ್ರ ಕುಷ್ಟಗಿ, ಶರಣು ಮಾಲೀಪಾಟೀಲ್, ಎಸ್.ದೇವೆಂದ್ರ ಗೌಡ, ಶ್ಯಾಮಲಾ ಪೂಜಾರ ಇದ್ದರು.
Published on
ರಾಯಚೂರು ಅನಕ್ಷರಸ್ಥರ ಸಮಾಜದಲ್ಲಿ ಸಮಾಜವನ್ನು ಜಾಗೃತಿಗೊಳಿಸುವ ಮೂಲಕ ಮನ್ಯಷ್ಯರನ್ನು ಮನುಷ್ಯರನಾಗಿ ಪ್ರೀತಿಸುವ ಮನಸ್ಥಿತಿ ನಿರ್ಮಾಣಕ್ಕೆ ಸಮೂದಾಯ ಕಾರ್ಯನಿರ್ವಹಿಸಿದೆಂದು ಹಿರಿಯ ಸಾಹಿತಿ ಬಂಜಗೆರೆ ಜಯಪ್ರಕಾಶ ಹೇಳಿದರು.
ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಮುದಾಯ 50 ವರ್ಷಾಚರಣೆ ಡೋಲು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಒಂದು ಪಕ್ಷದ ಮೇಲಿನ ಭಕ್ತಿ ಪ್ರಜಾಪ್ರಭುತ್ತ ವ್ಯವಸ್ಥೆಯನ್ನೇ ಹಾಳು ಮಾಡಲು ಮುಂದಾದಾಗ ವಿವಿಧ ವರ್ಗಗಳು ಒಂದಾಗಿ ಸರ್ವಾಧಿಕಾರ ವಿರುದ್ಧ ಬಲವಾದ ಧ್ವನಿ ಎತ್ತಲು ಕಾರಣವಾಯಿತು. ಸಮುದಾಯಕ್ಕೆ ಸಿಕ್ಕ ಸ್ವೀಕೃತಿ ಸಾಹಿತ್ಯಕ್ಕೂ ದೊರೆಯಲಿಲ್ಲ. ಸಂಸ್ಕೃತಿ ರಾಜಕೀಯವನ್ನು ಸೋಲಿಸಬೇಕಿದೆ.
ಸಂಸ್ಕೃತಿ ರಾಜಕೀಯ ಮನುಷ್ಯತ್ವ ರಹಿತರನ್ನಾಗಿಸುವ ಪ್ರಸ್ತುತ ದಿನಗಳಲ್ಲಿ ಧರ್ಮ, ಜಾತಿ ಆಧಾರವಾಗಿ ಮನುಷ್ಯರನ್ನು ವಿಂಗಡಿಸಲಾಗುತ್ತಿದೆ. ನ್ಯಾಯಾಲಯಗಳು ಸಹ ಕೋಮುವಾದ ಪರವಾಗಿ ತೀರ್ಪುಗಳು ನೀಡುತ್ತಿರುವದು ಕಳವಳಕಾರಿ ಎಂದರು.
ಫ್ಯಾಸಿಸಂ ಮತ್ತು ಸಾಂಸ್ಕೃತಿಕ ರಾಜಕಾರಣದ ಕುರಿತು ವಿಷಯ ಮಂಡಿಸಿದ ಹಿರಿಯ ಸಾಹಿತಿ ಡಾ.ರಹಮತ್ ತರೀಕೆರೆ ಒಂದು ತತ್ವ, ಸಿದ್ಧಾಂತಕ್ಕಾಗಿ ಬೇರೆ ಬೇರೆ ಜಾತಿ ಧರ್ಮದವರು ಸೇರುವುದೇ ಸಮುದಾಯ. ಭಾರತವನ್ನು ನಾವು ಭಾರತವನ್ನಾಗಿ ಆಗಿ ಕಟ್ಟಬೇಕಾಗಿದೆ. ಆದರೆ ಅವರು ಮತ್ತು ನಾವು ಎಂದು ವಿಭಜನೆ ಆಗುತ್ತಿದ್ದೇವೆ.

ಮನುಷ್ಯರನ್ನು ವಿಭಜಿಸುವ, ದ್ವೇಷದ ಹೆಸರಿನಲ್ಲಿ ಹಿಂಸೆಯನ್ನು ಉತ್ಪಾದಿಸುವುದನ್ನು ನಿರಾಕರಿಸಬೇಕಾಗಿದೆ. ದುಷ್ಟತನ, ಕೇಡು ತತ್ವದ ಸ್ಪರ್ಷ ಪಡೆಯುವುದು ದುರಂತದ ಸಂಗತಿ. ಜಗತ್ರಿನಲ್ಲಿ ಬೇರೆ ಬೇರೆ ರೂಪದಲ್ಲಿ ಕೇಡುಗಳಿದ್ದು, ಅವುಗಳು ವಿಜೃಂಬಿಸುತ್ತಿವೆ ಎಂದು ಖೇದ ವ್ಯಕ್ತಪಡಿಸಿದರು.

ಆಹಾರಕ್ಕಾಗಿ ಜನರನ್ನು ಕೊಲ್ಲುವ ಕೆಲಸ ಭಾರತದಲ್ಲಿ ನಡೆಯುತ್ತಿದೆ. ಭಿನ್ನವಾಗಿದ್ದನ್ನು ದ್ವೇಷಿಸುವ ಕೆಲಸ ನಡೆಯುತ್ತಿದೆ. ಎಲ್ಲ ಸಾಂಸ್ಕೃತಿಕ ಚಳುವಳಿಗಳ ಉದ್ದೇಶ ಜನರನ್ನು ಜಾಗೃತರನ್ನಾಗಿ ಮಾಡುವುದಾಗಿದೆ. ಲಜ್ಜೆಯಿಲ್ಲದೆ ಮಾಂಸಹಾರಿಗಳಿಗೆ ಮನೆ ಬಾಡಿಗೆ ಕೊಡುವುದಿಲ್ಲ ಎಂದು ಬೊರ್ಡ ಹಾಕಿಕೊಳ್ಳುತ್ತಾರೆ. ಜತೆಗೆ ಬದುಕ್ಕುತ್ತಿರುವ ಜನರ ಆಹಾರ, ಸಂಸ್ಕೃತಿಯನ್ನು ಗೌರಿವಿಸಬೇಕು. ಕಲೆ ಮೂಲಕ ಮಾಡುವ ಪ್ರತಿರೋಧ ಸೋತವರ, ಕೆಳಜನರ ಪರವಾಗಿ ರುತ್ತದೆ. ಗತಕಾಲದ ಚರಿತ್ರೆಯನ್ನು ಆಯುಧವನ್ನಾಗಿ ಬಳಸಲಾಗುತ್ತಿದೆ. ಶಿವಾಜಿ, ಟಿಪ್ಪುವಿನ ಚರಿತ್ರೆಯನ್ನು ಇಟ್ಟುಕೊಂಡು ಜಾತಿ ದ್ವೇಷ ಹರಡಲಾಗುತ್ತಿದೆ. ನಮಗೆ ಬೇಡವಾದವರನ್ನು ರಾಕ್ಷಸರನ್ನಾಗಿ ಮಾಡುತ್ತಿದ್ದೇವೆ ಎಂದರು.
ಮೇಲ್ವರ್ಗದ ಸಂಸ್ಕೃತಿಯನ್ನು ಜನರ ಮೇಲೆ ಹೇರಲಾಗುತ್ತಿದೆ. ಸಾ
ಮಾನ್ಯ ಮನುಷ್ಯರನ್ನು ಆಯುಧಗಳನ್ನಾಗಿ ಮಾಡುವ ಕೆಲಸ ದೇಶದಲ್ಲಿ ನಡೆಯುತ್ತದೆ. ಚಲನಚಿತ್ರಗಳನ್ನು ದ್ವೇಷ ಹರಡಲಾಗುತ್ತಿದೆ. ಹೊಸ ಸಂಸ್ಕೃತಿಯ ಗುಲಾಮರನ್ನಾಗಿ ಮಾಡುವ ಕೆಲಸ ನಡೆಯುತ್ತಿದೆ. ನಮ್ಮ ಜನತೆಯ ಪರಂಪರೆಯನ್ನು ಅರಿತುಕೊಳ್ಳಬೇಕಾಗಿದೆ. ನಮ್ಮ ಪರಂಪರೆಯಲ್ಲಿ ನಾವು ಒಂದೆ ಸಮುದಾಯದವರು ಎಂದು ಹೇಳಿದ ಎಷ್ಟೋ ಉದಾಹರಣೆಗಳಿವೆ ಎಂದರು.

ಸಮುದಾಯ ಕಾರ್ಯದರ್ಶಿ ಗುಂಡಣ್ಣ ಚಿಕ್ಕಮಗಳೂರು ಮಾತನಾಡಿದರು.
ನಂತರ ಮನುಷ್ಯತ್ವದ ಡೇ ಸಮುದಾಯ ಜಾತಾ ಸಮುದಾಯೋತರ ಸಂಭ್ರಮ ಪುಸ್ತಕ ಬಿಡುಗಡೆ ಹಾಗೂ 20 ಕ್ಕೂ ಹೆಚ್ಚು ಜನರಿಗೆ ವಿಶೇಷ ರಂಗ ಗೌರವ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮುದಾಯ ಗೌರವಾಧ್ಯಕ್ಷ ರಾಘವೇಂದ್ರ ಕುಷ್ಟಗಿ, ಶರಣು ಮಾಲೀಪಾಟೀಲ್, ಎಸ್.ದೇವೆಂದ್ರ ಗೌಡ, ಶ್ಯಾಮಲಾ ಪೂಜಾರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net