ಸಮುದಾಯ ಭವನದಿಂದ ಭಕ್ತರಿಗೆ ಅನುಕೂಲ

ತುರ್ವಿಹಾಳದ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಭೂಮಿಪೂಜೆ ನೆರವೇರಿಸಿದರು. ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಂ.ಡಿ.ಫಾರೂಕ್‌ಸಾಬ, ಪಪಂ ಅಧ್ಯಕ್ಷ ಬಾಪುಗೌಡ ದೇವರಮನಿ, ಮಾಜಿ ಅಧ್ಯಕ್ಷ ಶ್ಯಾಮೀದ್‌ಸಾಬ ಚೌಧರಿ, ಪ್ರಮುಖರಾದ ಮಲ್ಲನಗೌಡ ದೇವರಮನಿ, ಮೌಲಪ್ಪಯ್ಯ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿಕೆ
  • ತುರ್ವಿಹಾಳ ಸಮುದಾಯ ಭವನ ನಿರ್ಮಾಣ ಭೂಮಿಪೂಜೆ
ಸಿಂಧನೂರು: ತಾಲೂಕಿನ ತುರ್ವಿಹಾಳ ಪಟ್ಟಣದ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿ 1 ಕೋಟಿ ರೂ. ವೆಚ್ಚ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಬುಧವಾರ ಭೂಮಿಪೂಜೆ ನೆರವೇರಿಸಿದರು.
ನಂತರ ಸುದ್ದಿಗಾರೊಂದಿಗೆ ಮಾತನಾಡಿ, ಜನರ ಬಹುದಿನದ ಬೇಡಿಕೆಯಾಗಿದ್ದ ಸಮುದಾಯ ಭವನ ನಿರ್ಮಾಣದಿಂದ ಭಕ್ತರಿಗೆ ಅನುಕೂಲವಾಗಲಿದೆ. ಕಾಲಮಿತಿಯಲ್ಲಿ ಹಾಗೂ ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ಪಪಂ ಅಧ್ಯಕ್ಷ ಬಾಪುಗೌಡ ದೇವರಮನಿ, ಮಾಜಿ ಅಧ್ಯಕ್ಷ ಶ್ಯಾಮೀದ್‌ಸಾಬ್ ಚೌಧರಿ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಂ.ಡಿ.ಫಾರೂಕ್‌ಸಾಬ್, ಪ್ರಮುಖರಾದ ಮಲ್ಲನಗೌಡ ದೇವರಮನಿ, ಮೌಲಪ್ಪಯ್ಯ, ರುದ್ರಗೌಡ, ಕರಿಯಪ್ಪ ವಿರುಪಾಪುರ, ಶರಣಪ್ಪ ಹೊಸಗೌಡ್ರ, ಫಕೀರಪ್ಪ ಭಂಗಿ, ಯಲ್ಲಪ್ಪ ಭೋವಿ, ಶರಣಪ್ಪ ರಡ್ಡೇರ್, ಬಾಲಾಜಿ, ಶಂಕರಪ್ಪ, ಅರವಿಂದರಡ್ಡಿ, ಮಂಟೆಪ್ಪ ಎಲೆಕೂಡ್ಲಿಗಿ, ಲಿಂಗಪ್ಪ ಗೋಸಬಾಳ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net