ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಆಯುಕ್ತರಿಂದ ಸಭೆ

ರಾಯಚೂರಿನ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಅಧ್ಯಕ್ಷತೆಯಲ್ಲಿ ಮಂಗಳವಾರ ರಾಜಕೀಯ ಮುಖಂಡರೊಂದಿಗೆ ಸಭೆ ನಡೆಸಿದರು. ತಹಶೀಲ್ದಾರ್ ಸುರೇಶ ವರ್ಮಾ, ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತ ಶರಣಪ್ಪ, ಕಂದಾಯ ವಿಭಾಗದ ಉಪ ಆಯುಕ್ತೆ ಸಂತೋಷ ರಾಣಿ ಇದ್ದರು.
ರಾಯಚೂರಿನ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಅಧ್ಯಕ್ಷತೆಯಲ್ಲಿ ಮಂಗಳವಾರ ರಾಜಕೀಯ ಮುಖಂಡರೊಂದಿಗೆ ಸಭೆ ನಡೆಸಿದರು. ತಹಶೀಲ್ದಾರ್ ಸುರೇಶ ವರ್ಮಾ, ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತ ಶರಣಪ್ಪ, ಕಂದಾಯ ವಿಭಾಗದ ಉಪ ಆಯುಕ್ತೆ ಸಂತೋಷ ರಾಣಿ ಇದ್ದರು.
Published on

ರಾಯಚೂರು

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣ ಕುರಿತು ಸಂಬಂಧಿಸಿದಂತೆ ಗ್ರಾಮೀಣ ಹಾಗೂ ನಗರದಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದ್ದು, ಗಣತಿ ನಮೂನೆಗಳ ವಿತರಣೆ ಕಾರ್ಯ ಶೇ.100ರಷ್ಟು ಪೂರ್ಣಗೊಳಿಸಲಾಗಿದೆಂದು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ತಿಳಿಸಿದರು.

ನಗರದ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮಂಗಳವಾರ ಎಸ್‌ಐಆರ್ ಕುರಿತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು, ರಾಯಚೂರು ನಗರ ವಿಧಾನಸಭೆಯ ವ್ಯಾಪ್ತಿಯ ಶೇ.30.04 ಹಾಗೂ ಗ್ರಾಮೀಣ ಭಾಗದಲ್ಲಿ ಶೇ.16.99ರಷ್ಟು ನಮೂನೆಗಳು ಗಣಕೀಕರಣ ಮಾಡುವುದು ಬಾಕಿ ಇದೆ. ಪ್ರತಿದಿನ ಬಿಎಲ್‌ಗಳು ಭೌತಿಕ ಪರಿಶೀಲನೆಯೊಂದಿಗೆ ಗುರುತಿಸಿದ ಗೈರು 20.285, ಸ್ಥಳಾಂತರ 57213, ಹಾಗೂ 21,796 ಜನ ಮರಣ ಹೊಂದಿದ್ದ ಮತದಾರರ ವಿವರಗಳನ್ನು ತಮ್ಮ ಆ್ಯಪ್‌ನಲ್ಲಿ ಅಪ್ರೋಡ್ ಮಾಡಿರುತ್ತಾರೆ. ಪರಿಶೀಲನೆ ಸಂಬಂಧಿಸಿದ ಬಿಎಲ್‌ಒಗಳು ರಾಜಕೀಯ ಪಕ್ಷಗಳಿಂದ ನೇಮಿಸಲಾದ ಬಿಎಲ್‌ಎ ರವರಿಗೆ ಮತದಾರರ ವಿವರವುಳ್ಳ ಎಎಸ್‌ಡಿಡಿಒ ಯಾದಿಗಳನ್ನು ನೀಡಿದ್ದು, ಬಿಎಲ್‌ಎ ರವರು ಬಿಎಲ್‌ಓಗಳು ನೀಡಿದ ಮತದಾರರ ವಿವರವುಳ್ಳ ಎಎಸ್‌ಡಿಡಿಒ ಯಾದಿಗಳನ್ನು ಪಡೆದು ಸ್ವೀಕೃತಿಯನ್ನು ನೀಡಲು ನಿರಾಕರಿಸಿದ್ದಾಗಿ ಬಿಎಲ್‌ಓಗಳು ತಿಳಿಸಿರುತ್ತಾರೆ. ಬಿಎಲ್‌ಓಗಳಿಗೆ ಸೂಕ್ತ ಸ್ವೀಕೃತಿ ನೀಡಲು ಬಿಎಲ್‌ಎ ಅವರಿಗೆ ಸೂಚಿಸಲು ತಿಳಿಸಿದರು.

ಕರಡು ಮತದಾರರ ಪ್ರಕಟಣೆ ಮುಂಚೆ ಇನ್ನೂ ಯಾವ ಮತದಾರರು ದಾಖಲೆಗಳನ್ನು ನೀಡಿರುವುದಿಲ್ಲ.

ಅಂತವರನ್ನು ಟ್ರ್ಯಾಕ ಮಾಡಿ ಕೂಡಲೇ ಸಲ್ಲಿಸಲು ಕ್ರಮವಹಿಸಬೇಕು. ಶೇ100 ರಷ್ಟು ಡಿಜಿಟಲೈಜೆಷನ್ ಪ್ರಕ್ರಿಯೆ ಕೈಗೊಳ್ಳಲು ಸಹಕರಿಸಬೇಕು. ಕರಡು ಮತದಾರರು ಪ್ರಕಟಣೆಗೊಂಡ ನಂತರ 18 ವರ್ಷದ ಮತದಾರರ ಹುಡಿಕಿ ಸೇರ್ಪಡೆ ಮಾಡಿಸಬೇಕು ಎಂದು ತಿಳಿಸಿದರು.

ತಹಶೀಲ್ದಾರ್ ಸುರೇಶ ವರ್ಮಾ ಮಾತನಾಡಿ, ಎಲ್ಲಾ ರಾಜಕೀಯ ಪಕ್ಷಗಳ ಪದದಾಧಿಕಾರಿಗಳಿಗೆ ಈಗಾಗಲೇ ಎಸ್‌ಡಿಡಿ ವರದಿ ಮತಗಟ್ಟೆವಾರು ಮಾಹಿತಿ ನೀಡಲಾಗಿದು,್ದ ಪ್ರತಿದಿನ ತಮ್ಮ ಅಧಿಕೃತ ಇ-ಮೇಲ್ ಐಡಿಗೆ ಸಹ ಮೇಲ್ ಮಾಡಲಾಗುತ್ತಿದೆ. ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಡಿಡಿ ಒಟ್ಟು 40765 ಇದ್ದು, ನಗರದ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಡಿಡಿ ಒಟ್ಟು 76731 ಇದ್ದು, ಬಿಎಲ್‌ಎ-2 ರವರಿಂದ ಮತಗಟ್ಟೆವಾರು ಪರಿಶೀಲಿಸಿ ಮಾಡಿಸಿ ಯಾವುದೇ ಆಕ್ಷಪಣೆ ಇದ್ದಲ್ಲಿ ಆ.7 ರೊಳಗೆ ವರದಿ ನೀಡಲು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net