ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ ಮಾತನಾಡಿ, ಚಾರು ಮಜುಂದಾರ್ ಕ್ರಾಂತಿಕಾರಿ ವಿಚಾರಗಳು, ಶೋಷಿತ ಜನರ ಪರವಾದ ರಾಜಕೀಯ ದೃಷ್ಟಿಕೋನ ಮತ್ತು ಹೋರಾಟದ ಮಾರ್ಗದರ್ಶನದ ಮೂಲಕ ಇಂದಿಗೂ ಜನಾಂದೋಲನಗಳಿಗೆ ಪ್ರೇರಣೆಯಾಗಿದ್ದಾರೆ. ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಶೋಷಣೆಯಿಲ್ಲದ ಸಮಾಜ ನಿರ್ಮಾಣದ ಗುರಿಯೊಂದಿಗೆ ಜನರ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟಗಳನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪವನ್ನು ತೊಡೋಣ ಎಂದರು. ಭಾರತೀಯ ಕಮ್ಯುನಿಸ್ಟ್ ಚಳವಳಿಯ ಎಲ್ಲ ಹುತಾತ್ಮರನ್ನು ಸ್ಮರಿಸಿ, ಅವರ ಆದರ್ಶಗಳನ್ನು ಮುಂದುವರಿಸುವ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು. ಪ್ರಮುಖರಾದ ಬಸವರಾಜ ಕೊಂಡೆ, ರಾಘವೇಂದ್ರ ಉಪ್ಪಳ, ತುಳಸಪ್ಪ ದಢೇಸೂಗೂರು, ವೀರೇಶ ಕರ್ನಿ ಇತರರಿದ್ದರು.