ಗ್ರಾಮದ ಸರ್ಕಾರಿ ಜಾಗದಲ್ಲಿ ಕಾಲೇಜು ಆರಂಭವಾಗಲಿ

ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ರಾಜಪ್ಪ ಸಿರವಾರ್‌ಕರ್
ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ರಾಜಪ್ಪ ಸಿರವಾರ್‌ಕರ್
Published on
ರಾಯಚೂರು ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ನೆರವಾಗುವಂತೆ ಪ್ರಥಮ ದರ್ಜೆ ಡಿಗ್ರಿ ಕಾಲೇಜು ಮಂಜೂರಾಗಿರುವ ನಿಮಿತ್ತ ಗ್ರಾಮದ ಸರ್ವೆ ನಂ.896ರಲ್ಲಿ 4 ಎಕರೆ ಸರ್ಕಾರಿ ಭೂಮಿಯಲ್ಲಿ ಕಾಲೇಜು ನಿರ್ಮಾಣ ಮಾಡುವಂತೆ ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ರಾಜಪ್ಪ ಸಿರವಾರ್‌ಕರ್ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಅತೀ ಹಿಂದುಳಿದ ಪ್ರದೇಶಗಳಲ್ಲಿ ಒಂದಾದ ಗಬ್ಬೂರು ಗ್ರಾಮವು ಪ್ರಾಥಮಿಕ, ಪ್ರೌಢ, ಪದವಿ ಹಾಗೂ ಉನ್ನತ ಶಿಕ್ಷಣದ ಸಮರ್ಪಕ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಹೋಬಳಿಯ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟವು 2022-23ರಿಂದ ನಿರಂತರ ಧರಣಿ ಸತ್ಯಾಗ್ರಹ, ಮನವಿ ಪತ್ರ ಸಲ್ಲಿಕೆ ಸೇರಿದಂತೆ ವಿವಿಧ ಹೋರಾಟಗಳನ್ನು ನಡೆಸಿತ್ತು ಇದೀಗ ಪ್ರಥಮ ದರ್ಜೆ ಡಿಗ್ರಿ ಕಾಲೇಜು ಮಂಜೂರಾಗಿದೆ.
ಕಾಲೇಜು ಮಂಜೂರಾತಿ ಕೇವಲ ಘೋಷಣೆಗೆ ಸೀಮಿತವಾಗದೆ ತ್ವರಿತವಾಗಿ ಅನುಷ್ಠಾನಗೊಳ್ಳಬೇಕು. ಸಂಬಂಧಪಟ್ಟ ಇಲಾಖೆಗೆ ಅಗತ್ಯ ಸೂಚನೆ ನೀಡಿ, ಗ್ರಾಮದ ಸೀಮಾ ಸರ್ವೇ ನಂ. 896ರಲ್ಲಿ ಇರುವ 4 ಎಕರೆ ಸರ್ಕಾರಿ ಭೂಮಿಯನ್ನು ಕಾಲೇಜಿಗೆ ಮಂಜೂರು ಮಾಡಬೇಕು. ಅಲ್ಲದೆ ಶಾಶ್ವತ ಕಟ್ಟಡ ನಿರ್ಮಾಣ ಮಾಡಿ ಶೀಘ್ರದಲ್ಲೇ ಕಾಲೇಜು ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಲ್ಲಪ್ಪಗೌಡ , ಬೂದಯ್ಯ ಸ್ವಾಮಿ, ಚನ್ನಪ್ಪಗೌಡ, ಶಾಂತಕುಮಾರ ಹೊನ್ನಟಗಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net