ಲಿಂಗಸುಗೂರಿನ ಗಡಿಯಾರ ಸರ್ಕಲ್‌ನಲ್ಲಿ ಎಐಡಿವೈಒ ಸಂಘಟನೆಯಿಂದ ಸಹಿ ಸಂಗ್ರಹಿಸಲಾಯಿತು. ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್, ಪ್ರಮುಖರಾದ ತಿರುಪತಿ ಗೋನವಾರ, ಬಾಲಾಜಿ ಸಿಂಗ್, ಚಂದ್ರಶೇಖರ ಸಾಹುಕಾರ, ತಿಮ್ಮಣ್ಣ ಇದ್ದರು.
Published on:
Copied
Follow Us
ಲಿಂಗಸುಗೂರು: ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆಆಗ್ರಹಿಸಿ ಎಐಡಿವೈಒ ವತಿಯಿಂದ ಶುಕ್ರವಾರ ಪಟ್ಟಣದ ಗಡಿಯಾರ ಸರ್ಕಲ್‌ನಲ್ಲಿ ಯುವಜನರು, ರೈತರು, ಸಾರ್ವಜನಿಕರಿಂದ ಸಹಿ ಸಂಗ್ರಹಿಸಲಾಯಿತು.
ಎಐಡಿವೈಒ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್ ಮಾತನಾಡಿ, ಯುವಜನ ಚಳವಳಿಯನ್ನು ಬಲಿಷ್ಠಗೊಳಿಸುವ ದಿಕ್ಕಿನಲ್ಲಿ ಅಖಿಲ ಭಾರತ ಕರೆ ಮೇರೆಗೆ ಸಹಿ ಸಂಗ್ರಹ ಮಾಡಲಾಗುತ್ತಿದೆ.
ಫೆ.27ರಂದು ಬೆಂಗಳೂರಲ್ಲಿ ಯುವಜನ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಂಡಿದ್ದು, ಮುಖ್ಯಮಂತ್ರಿ, ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು.