ಜಿಲ್ಲೆಯಲ್ಲಿ ತಂಪಿನ ಅನುಭವ

ಮಳೆಯ ಸಾಂದರ್ಭಿಕ ಫೋಟೋ
ಮಳೆಯ ಸಾಂದರ್ಭಿಕ ಫೋಟೋ
Published on
ರಾಯಚೂರು ನಗರ ಸೇರಿದಂತೆ ಜಿಲ್ಲಾಧ್ಯಂತ ಬುಧವಾರ ಸುರಿದ ಭಾರೀ ಮಳೆಯಿಂದ ಬಿಸಿಲಿಗೆ ತತ್ತರಿಸಿದ ಜನರಿಗೆ ಕೊಂಚ ತಂಪಿನ ಅನುಭವ ದೊರೆತಂತಾಯಿತು.
ಕಳೆದ 24 ಗಂಟೆಯಲ್ಲಿ ಒಟ್ಟು 24.3 ಮಿ.ಮೀ ಮಳೆ ವರದಿಯಾಗಿದ್ದು, ಸಿರವಾರದಲ್ಲಿ 28.9 ಮಿ.ಮೀ, ಮಸ್ಕಿಯಲ್ಲಿ 25.01 ಮಿ.ಮೀ, ಸಿಂಧನೂರು 19.5 ಮಿ.ಮೀ, ರಾಯಚೂರು 32.9 ಮಿ.ಮೀ,ಮಾನ್ವಿ 22.3 ಮಿ.ಮೀ, ಲಿಂಗಸುಗೂರಿನಲ್ಲಿ 15.3 ಮಿ.ಮೀ. ಹಾಗೂ ದೇವದುರ್ಗದಲ್ಲಿ 26.2 ಮಿ.ಮೀ ಮಳೆಯ ವರದಿಯಾಗಿದೆ.

ಬೆಳಗ್ಗೆಯಿಂದ ಸುರಿದ ಮಳೆಗೆ ರಾಯಚೂರು ನಗರದ ಸೇರಿ ಜಿಲ್ಲೆಯ ಹಲವೆಡೆ ರಸ್ತೆಯ ಮೇಲೆ ನೀರು ನಿಂತುಕೊಂಡು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಜಮೀನುಗಳಲ್ಲಿ ನೀರು ನಿಂತಿದ್ದಲ್ಲದೇ, ಕೆಲವು ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ ಪರಿಸ್ಥಿತಿ ನಿರ್ಮಾಣವಾಗಿದೆ. ನಿರಂತರವಾಗಿ ಸುರಿದ ಮಳೆಗೆ ಜಿಲ್ಲೆಯ ಹಲವೆಡೆ ಹಳ್ಳ ಕೊಳ್ಳಗಳು ತುಂಬಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net